ಕಲಬುರಗಿ : ಶಿಷ್ಟಾಚಾರ ಉಲ್ಲಂಘನೆ: ಕೆಡಿಪಿ ಸಭೆಯಲ್ಲಿ ಕ್ಷಮೆಯಾಚಿಸಿದ ಮುರುಗೇಶ ನಿರಾಣಿ
Team Udayavani, Jun 23, 2021, 2:14 PM IST
ಕಲಬುರಗಿ: ವಿವಿಧ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಕ್ಷಮೆಯಾಚಿಸಿದ ಘಟನೆ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ (ಕೆಡಿಪಿ) ಪ್ರಗತಿ ಸಭೆಯಲ್ಲಿ ನಡೆಯಿತು.
ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆರಂಭವಾಗುತ್ತಿದ್ದಂತೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಶಾಸಕರಾದ ಎಂ.ವೈ ಪಾಟೀಲ್, ಪ್ರಿಯಾಂಕ್ ಖರ್ಗೆ ಮಾತನಾಡಿ, ನಿನ್ನೆ ನಡೆದ ಲಸಿಕಾ ಉಗ್ರಾಣ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜಾ ಫಾತೀಮಾ ಅವರ ಹೆಸರಿರಲಿಲ್ಲ. ಕೊನೆ ಪಕ್ಷ ಕಾರ್ಯಕ್ರಮ ದ ಮಾಹಿತಿಯೇ ಇರಲಿಲ್ಲ. ಅದೇ ರೀತಿ ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಖಾಸಗಿ ತೋಟದಲ್ಲಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಲಸಿಕಾ ಅಭಿಯಾನ ಕೈಗೊಂಡಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸರ್ಕಾರಿ ಲಸಿಕೆ ಹಾಕಿಸಿರುವುದು ಎಷ್ಟೊಂದು ಸಮಂಜಸ. ಒಂದು ವೇಳೆ ಖಾಸಗಿಯಾಗಿ ಲಸಿಕೆ ಹಾಕಿಸಿದ್ದರೆ ತಮ್ಮದೇನು ತಕರಾರಿಲ್ಲ. ಆದರೆ ಸರ್ಕಾರಿ ಲಸಿಕೆ ಬಳಸಲಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು
.
ಅದೇ ರೀತಿ ವಿವಿಧ ಹಂತದಲ್ಲಿ ಶಿಷ್ಟಾಚಾರ ಪದೇ ಪದೇ ಉಲ್ಲಂಘನೆಯಾಗುತ್ತಿದೆ. ಹೀಗಾಗಿ ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು. ನಿರಾಣಿ ಸಾಹೇಬರು ಜಿಲ್ಲಾ ಉಸ್ತುವಾರಿ ಸಚಿವರು ಆದ ನಂತರ ಆಡಳಿತ ಚುರುಕುಗೊಂಡಿದೆ. ಆದರೆ ಶಿಷ್ಟಾಚಾರ ದಲ್ಲಿ ಲೆಕ್ಕ ತಪ್ಪಿ ದಂತಾಗಿದೆ ಎಂದರು.
ತದನಂತರ ಉಸ್ತುವಾರಿ ಸಚಿವರು ಮಾತನಾಡಿ, ಕ್ಷಮೆಯಾಚಿಸಿದರು. ಜಿಲ್ಲಾಡಳಿತ ಲೋಪಕ್ಕೆ ಕ್ಷಮೆಯಾಚಿಸುವುದಲ್ಲದೇ ಮುಂದೆ ಹೀಗಾದಂತೆ ನೋಡಿಕೊಳ್ಳಲಾಗುವುದು ಎಂದರಲ್ಲದೇ ಮುಂದೆ ಶಿಷ್ಟಾಚಾರ ಉಲ್ಕಂಘನೆಯಾಗದಂತೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಸಿದರು.
ಈ ನಡುವೆ ಆಳಂದ ಕ್ಷೇತ್ರದ ಶಾಸಕ ಸುಭಾಷ ಆರ್ ಗುತ್ತೇದಾರ ಮಾತನಾಡಿ, ಸ್ಟೇಷನ್ ಗಾಣಗಾಪುರದಲ್ಲಿ ನಡೆದ ದಿ ವೆಂಕಯ್ಯ ಗುತ್ತೇದಾರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇ, ಗ್ರಾಮೀಣ ಭಾಗದಲ್ಲಿ ಬಸ್ ತೆಗೆದುಕೊಂಡು ಹೋದರೂ ಜನ ಲಸಿಕೆ ಹಾಕಿಕೊಳ್ಳದೇ ಹೊಲಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಜನರಿಗೆ ಮನವೋಲಿಸಿ ಲಸಿಕೆ ಹಾಕಿಸಲಾಗಿದೆ. ಬಡದಾಳ ಶ್ರೀ ಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಇದರಲ್ಲಿ ಯಾವ ತಪ್ಪಿದೆ ಎಂದರು.
ಒಂದುವರೆ ಗಂಟೆ ತಡವಾಗಿ ಆರಂಭವಾದ ಸಭೆ: ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 12 ಕ್ಕೆ ಆರಂಭಗೊಂಡಿತು. ಇದಕ್ಕಾಗಿ ಸಚಿವರು ಆರಂಭದಲ್ಲೇ ಕ್ಷಮೆಯಾಚಿಸಿದರು.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ( ಜೆಸ್ಕಾಂ) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಡು ರಸ್ತೆಯಲ್ಲಿ ಕಂಬ ಹಾಕ್ತಾರೆ, ನಂತರ ರಸ್ತೆ ಮಾಡುವಾಗ ರಸ್ತೆಗಿಂತ ಕಂಬ ಸ್ಥಳಾಂತರಕ್ಕೆ ಹೆಚ್ಚಿನ ಹಣ ಕಟ್ಟುವಂತಾಗಿದೆ. ಹತ್ತು ಕಂಬಗಳ ಸ್ಥಳಾಂತರಕ್ಕೆ ಒಂದು ಕಡೆ ಒಂದು ದರ ಮತ್ತೊಂದೆಡೆ ಮಗದೊಂದು ದರವಿದೆ. ಮೊದಲು ಮನಸ್ಸಿಗೆ ಬಂದಂತೆ ಕಂಬ ಹಾಕುವುದು. ನಂತರ ಸ್ಥಳಾಂತರ ನಾವು ಹಣ ಕೊಡೊದು ಯಾವ ನ್ಯಾಯ? ಒಟ್ಟಾರೆ ಗುತ್ತಿಗೆದಾರರು ಹಾಗೂ ಜೆಸ್ಕಾಂ ಅಧಿಕಾರಿಗಳ ನಡುವೆ ಒಳ ಒಪ್ಪಂದ ನಡೆದು ಹಣ ಲೂಟಿ ಮಾಡಲಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರಾಗಿರುವ ಎನ್ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಚಿವ ನಿರಾಣಿ ಅವರು, ಜೆಸ್ಕಾಂ ಇಲಾಖೆ ಸುಧಾರಣೆಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.