ರಾಜ್ಯದಲ್ಲಿ ಕಳೆ ನಾಶಕ್ಕೆ ಅತಿಯಾದ ಗ್ಲೈಕೊ ಫಾಸ್ಪೇಟ್ ಬಳಕೆ
ಆಹಾರ ಸರಪಣಿಗೆ ಮಾರಕ: ಮೂರೇ ವರ್ಷದಲ್ಲಿ ಭೂಮಿ ಬರಡು
Team Udayavani, Mar 24, 2022, 8:15 AM IST
ಬೆಂಗಳೂರು: ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅಂತೆಯೇ ಅನಿವಾರ್ಯ ಕಾರಣಗಳಿಗಾಗಿ ಬಳಕೆಯಾಗುತ್ತಿದ್ದ ಕಳೆ ಸಸ್ಯ ನಾಶಕ ಗ್ಲೈಕೊ ಫಾಸ್ಪೇಟ್ ರಾಸಾಯನಿಕ ಎಗ್ಗಿಲ್ಲದೆ ಬಳಕೆಯಾಗುತ್ತಿರುವ ರೈತರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಭೂಮಿಯ ಬರಡಾಗುತ್ತಿದೆ.
ಗ್ಲೈಕೊ ಫಾಸ್ಪೇಟ್ ರಾಸಾಯನಿಕ ವ್ಯಾಪಕವಾಗಿ ಬಳಸಲಾಗುವ ಸಸ್ಯನಾಶಕವಾಗಿದೆ. ಇದು ವಿಶಾಲವಾಗಿ ಬೆಳೆಯು ಹುಲ್ಲು ಹಾಗೂ ಕಳೆ ಬೆಳೆಯುವುದು ನಿಯಂತ್ರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಿಂದಾಗಿ ಈ ರಾಸಾಯನಿಕ ಬಳಕೆಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ. ಜತೆಗೆ ಪರವಾನಿಗೆ ಪಡೆದಿರುವ ಎಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳು ಈ ರಾಸಾಯನಿಕ ಲಭ್ಯವಿರುವುದರಿಂದ ಕೃಷಿ ಗ್ಲೈಕೊ ಫಾಸ್ಪೇಟ್ ಎಗ್ಗಿಲ್ಲದೇ ಬಳಕೆಯಾಗುತ್ತಿದೆ.
ಕಳೆಯನ್ನು ಸ್ವತ್ಛ ಮಾಡಲು ಕೂಲಿ ಆಳುಗಳ ಕೊರತೆ ಇರುವುದರಿಂದ ಹೆಚ್ಚಿನ ರೈತರು ಕಳೆ ನಾಶಕ ಸಿಂಪಡಿಸುವ ಸುಲಭ ವಿಧಾನಕ್ಕೆ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಲೀಟರ್ ನೀರಿಗೆ 8ಎಂ.ಎಲ್. ಗ್ಲೈಕೊ ಫಾಸ್ಪೇಟ್ ಬಳಸಬೇಕು. ಆದರೆ ಪ್ರಸ್ತುತ ರೈತರು ಕಳೆಗಳನ್ನು ಶೀಘ್ರವಾಗಿ ನಾಶ ಮಾಡಬಹುದು ಎನ್ನುವ ದುರಾಸೆಯಿಂದ ಲೀಟರ್ ನೀರಿಗೆ 12ರಿಂದ 20 ಎಂಎಲ್ ಈ ರಾಸಾಯನಿಕವನ್ನು ಬಳಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ
ಜಲಮೂಲಗಳಿಗೆ ಹೊಡೆತ
ಸಾಮಾನ್ಯವಾಗಿ ಅಡಿಕೆ, ಭತ್ತ, ಬಾಳೆ, ಹೊಲದ ಅಂಚು, ಶುಂಠಿ, ಕಾಫಿ, ಅನಾನಸ್ ಸೇರಿದಂತೆ ಇತರೆ ಮಳೆಗಾಲದ ಬೆಳೆಗಳನ್ನು ಬೆಳೆಸುವ ರೈತರು ಹೆಚ್ಚಾಗಿ ಕಳೆಗಳ ನಾಶಕ್ಕೆ ಈ ರಾಸಾಯನಿಕವನ್ನು ಬಳಸುತ್ತಾರೆ. ರಾಸಾಯನಿಕ ಸಿಂಪಡಣೆಯಿಂದ ಭೂಮಿ ಗಟ್ಟಿಯಾಗುತ್ತಿದೆ. ಮಣ್ಣಿ ಪೋಶಕಾಂಶ ನಾಶವಾಗುತ್ತದೆ. ಕೇವಲ ಮೂರು ವರ್ಷದಲ್ಲಿ ಕೃಷಿಗೆ ಯೋಗ್ಯವಲ್ಲದ ಪ್ರದೇಶವಾಗಿ ಪರಿವರ್ತನೆಯಾಗುತ್ತದೆ. ಮಣ್ಣಿಗೆ ಸೇರ್ಪಡೆಯಾದ ರಾಸಾಯನಿಕ ನೇರವಾಗಿ ಮಳೆ ನೀರಿನೊಂದಿಗೆ ಕರೆ, ನದಿ, ಸಮುದ್ರ ಸೇರಲಿದೆ. ಈ ವೇಳೆ ಭೂಮಿಯಲ್ಲಿ ಔಷಧಿ ಗಿಡ, ಸೂಕ್ಷ್ಮಾಣು ಜೀವಿಗಳು, ಪರೋಪಕಾರಿ ಜೀವಿಗಳು, ಜಲಚರಗಳಿಗೆ ಈ ರಾಸಾಯನಿಕ ಮಿಶ್ರಿತ ನೀರು ವಿಷವಾಗಿ ಪರಿಣಮಿಸಲಿದೆ.
ಕ್ಯಾನ್ಸರ್ ಅಂಶ ಪತ್ತೆ
ಇತ್ತೀಚಿಗೆ ಸರ್ಕಾರ ರ್‍ಯಾಂಡಮ್ ಪರೀಕ್ಷೆಗೆ ಒಳಪಡಿಸಿದ 700 ರೈತರ ರಕ್ತದ ಮಾದರಿಯಲ್ಲಿ ಈ ಗ್ಲೈಕೊ ಫಾಸ್ಪೇಟ್ ಕಣಗಳಿಂದಾಗಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು ಪತ್ತೆಯಾಗಿವೆ. ಸುಮಾರು 2ರಿಂದ3 ವರ್ಷದಲ್ಲಿ ಈ ರಾಸಾಯನಿಕ ಬಳಕೆ ಮಾಡಿದರೆ ಭೂಮಿ ಫಲವತ್ತೆಯನ್ನು ಕಳೆದುಕೊಳ್ಳಲಿದೆ. ಭೂಮಿ ಗಟ್ಟಿಯಾಗಿ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪರಿಸರ ತಜ್ಞ ಹಾಗೂ ಗಾಂಧೀಜಿ ಸಹಬೇಸಾಯ ಶಾಲೆ ಡಾ. ಮಂಜುನಾಥ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.