ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ
Team Udayavani, Dec 4, 2021, 5:30 AM IST
ಬೆಂಗಳೂರು: ಈ ಬಾರಿ ಎಸೆಸೆಲ್ಸಿ ಪಠ್ಯದಲ್ಲಿ ಶೇ.20ರಷ್ಟು ಕಡಿತ ಮಾಡಿರುವುದರಿಂದ ಪರೀಕ್ಷೆ ಸಿದ್ಧತೆಗೆ ಹೆಚ್ಚುವರಿಯಾಗಿ ಕನಿಷ್ಠ ಒಂದು ತಿಂಗಳು ಸಮಯ ಸಿಕ್ಕಂತಾಗಿದೆ.
ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಸಂಸ್ಥೆಯು (ಡಿಎಸ್‌ಇಆರ್‌ಟಿ) ಡಿಸೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಬೋಧಿಸಬಹುದಾದ ಶೇ.20ರಷ್ಟು ಪಠ್ಯವನ್ನು ಕಡಿತ ಮಾಡಿದೆ. ಬಹುತೇಕ ಶಾಲೆಗಳಲ್ಲಿ ಈಗಾಗಲೇ ಶೇ.50ರಷ್ಟು ಪಠ್ಯಗಳ ಬೋಧನೆ ಮುಗಿದಿದೆ. ಈಗ ಶೇ. 20ರಷ್ಟು ಪಠ್ಯ ಕಡಿತ ಮಾಡಿರುವುದರಿಂದ ಜನವರಿ ತಿಂಗಳಾಂತ್ಯಕ್ಕೆ ಉಳಿದ ಶೇ. 30ರಷ್ಟು ಬೋಧಿಸಿ ಪಠ್ಯ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಹೀಗಾಗಿ, ಪರೀಕ್ಷೆಗಿಂತ ಎರಡು ತಿಂಗಳ ಮೊದಲೇ ಪಠ್ಯ ಪೂರ್ಣಗೊಳ್ಳಲಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಪರೀಕ್ಷೆ ನಡೆದರೂ ಕನಿಷ್ಠ ಎರಡು ತಿಂಗಳು ವಿದ್ಯಾರ್ಥಿಗಳ ಪುನರಾವರ್ತನೆಗೆ ಸಮಯ ಸಿಗಲಿದೆ.
ಕಡಿತವಾಗಿರುವ ವಿಷಯಗಳು
ಪ್ರಥಮ ಭಾಷೆ ಕನ್ನಡದ 8ನೇ ಅಧ್ಯಾಯ ಸುಕುಮಾರ ಸ್ವಾಮಿ ಕತೆ ಹಾಗೂ ಕೆಮ್ಮನೆ ಮೀಸೆವೊತ್ತೋನೆ ಎಂಬ ಪಠ್ಯವನ್ನು ಕೈಬಿಡಲಾಗಿದೆ. ಇಂಗ್ಲಿಷ್‌ನಲ್ಲಿ ಡಿಸ್ಕವರಿ, ಸೈನ್ಸ್ ಆ್ಯಂಡ್ ಹೋಮ್ ಆಫ್ ಸರ್ವೈವಲ್, ದಿ ಬರ್ಡ್ ಆಫ್ ಹ್ಯಾಪಿನೆಸ್, ಬ್ಯಾಲೆಡ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್ ಟುಮಾರೋ ಮಾರ್ನಿಂಗ್ ಪಠ್ಯವನ್ನು ಕೈಬಿಡಲಾಗಿದೆ. ಹಿಂದಿಯಲ್ಲಿ ದುನಿಯಾ ಮೆ ಪೆಹಲಾ ಮಕಾನ್, ರೋಬೋಟ್ ಹಾಗೂ ಬಾಲ್ ಶಕಿತ್ ಪಠ್ಯ, ವಿಜ್ಞಾನದಲ್ಲಿ ಲೋಹಗಳು ಮತ್ತು ಅಲೋಹಗಳು, ಕಾರ್ಬನ್ ಮತ್ತು ಅದರ ಸಂಯುಕ್ತಗಳು, ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಎಂಬ ಪಾಠಗಳನ್ನು ಕೈಬಿಡಲಾಗಿದೆ.
ಗಣಿತದಲ್ಲಿ ವಾಸ್ತವ ಸಂಖ್ಯೆಗಳು, ಬಹು ಪದೋಕ್ತಿಗಳು ಹಾಗೂ ಸಂಭವನೀಯತೆ, ಸಮಾಜ ವಿಜ್ಞಾನದಲ್ಲಿ 20ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದಲ್ಲಿ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದಲ್ಲಿ ಸಾಮಾಜಿಕ ಸಮಸ್ಯೆಗಳು ಎಂಬ ಅಧ್ಯಾಯವನ್ನು ಬೋಧನೆಯಿಂದ ಕೈಬಿಡ ಲಾಗಿದೆ. ಕಡಿತ ಮಾಡಿರುವ ಪಠ್ಯದ ಮಾಹಿತಿಯನ್ನು http//dsert.kar.nic.in ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದನ್ನೂ ಓದಿ:ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್ ಬಡ್ತಿ
ಶಿಕ್ಷಕರು ಅವಸರದಿಂದ ಪಠ್ಯವನ್ನು ಮುಗಿಸುವ ಬದಲು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡಲು ಅನುಕೂಲವಾಗಿದೆ. ಆನ್‌ಲೈನ್‌ನಲ್ಲಿ ಪಾಠಗಳು ಸರಿಯಾಗಿ ಮನವರಿಕೆಯಾಗದಿದ್ದರೆ, ಮತ್ತೊಮ್ಮೆ ಬೋಧನೆಗೆ ಸಮಯ ಸಿಕ್ಕಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಪಠ್ಯ ಕಡಿತವು ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದಾಗಲಿದೆ.
– ಎಚ್.ಕೆ. ಮಂಜುನಾಥ್, ಅಧ್ಯಕ್ಷ, ಪ್ರೌಢಶಾಲಾ ಶಿಕ್ಷಕರ ಸಂಘ
ಸರಕಾರವು ಶೇ. 20 ರಷ್ಟು ಪಠ್ಯ ಕಡಿತ ಮಾಡಿರು ವುದರಿಂದ ಖುಷಿಯಾಗಿದೆ. ಕೊನೇ ಕ್ಷಣದವರೆಗೂ ಪಾಠವನ್ನೇ ಕೇಳುವ ಬದಲಾಗಿ ಪುನರಾವರ್ತನೆಗೆ ಹೆಚ್ಚಿನ ಸಮಯ ಬಳಸಬಹುದಾಗಿದ್ದು, ಇದರಿಂದ ಪರೀಕ್ಷೆ ಸಿದ್ಧತೆಗಿದ್ದ ಭಯ ಸ್ವಲ್ಪ ಮಟ್ಟಿಗೆ ದೂರವಾಗಿದೆ.
– ಪ್ರಜ್ವಲ್, ಎಸೆಸೆಲ್ಸಿ ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.