ನ್ಯಾಯಬೆಲೆ ಅಂಗಡಿ ಇನ್ಮುಂದೆ ಸೇವಾ ಸಿಂಧು ಕೇಂದ್ರ?
Team Udayavani, Jun 19, 2017, 1:54 PM IST
ಶಿವಮೊಗ್ಗ: ಇದುವರೆಗೆ ಅಕ್ಕಿ, ಗೋಧಿ, ಸಕ್ಕರೆ ವಿತರಿಸುತ್ತಿದ್ದ ನ್ಯಾಯಬೆಲೆ ಅಂಗಡಿಗಳನ್ನು ವಿವಿಧ ರೀತಿಯ ನಾಗರಿಕ ಸೇವೆ ಒದಗಿಸುವ “ಸೇವಾ ಸಿಂಧು’ ಕೇಂದ್ರಗಳನ್ನಾಗಿ ರೂಪಾಂತರಿಸಲು ಆಹಾರ ಮತ್ತು ನಾಗರಿಕ ಸರಬರಾಜು
ಇಲಾಖೆ ನಿರ್ಧರಿಸಿದೆ. ಆದರೆ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಮಾತ್ರ ಇದಕ್ಕೆ ಪೂರಕ ಪ್ರತಿಕ್ರಿಯೆ ದೊರಕುತ್ತಿಲ್ಲವಾದ್ದರಿಂದ ಯೋಜನೆ ಜಾರಿ ವಿಳಂಬವಾಗುತ್ತಿದೆ.
ಪಡಿತರದ ಜತೆಗೆ ಬಸ್ ಮತ್ತು ರೈಲು ಟಿಕೆಟ್ ಬುಕ್ಕಿಂಗ್, ನೀರು, ಮನೆ ಕಂದಾಯ ಪಾವತಿ, ವಿದ್ಯುತ್ ಬಿಲ್ ಸ್ವೀಕೃತಿ ಹೀಗೆ ವಿವಿಧ ರೀತಿಯ ನಾಗರಿಕ ಸೇವೆಗಳನ್ನು ಒದಗಿಸುವುದು ಯೋಜನೆ ಉದ್ದೇಶ. “ಒನ್’ ಕೇಂದ್ರದಂತೆ ಇವು
ಕಾರ್ಯಾಚರಿಸಬೇಕು ಎಂಬುದು ಇಲಾಖೆಯ ಉದ್ದೇಶ. “ಒನ್’ ಸೇವಾ ಕೇಂದ್ರಗಳು ಕೆಲವೇ ನಗರಗಳಲ್ಲಿ ಮಾತ್ರವಿದ್ದು, ನ್ಯಾಯಬೆಲೆ ಅಂಗಡಿಗಳು ರಾಜ್ಯಾದ್ಯಂತ ಮೂಲೆ ಮೂಲೆಗಳಲ್ಲಿಯೂ ಇದೆ. ಇದನ್ನು ನಾಗರಿಕ ಸೇವಾ
ಕೇಂದ್ರಗಳಾಗಿ ರೂಪಾಂತರಿಸಿದಲ್ಲಿ ಜನರಿಗೆ ತ್ವರಿತ ಸೇವೆ ಸಿಕ್ಕಂತಾಗುತ್ತದೆ ಎಂಬುದು ಇಲಾಖೆಯ ಉದ್ದೇಶ. ಜತೆಗೆ ಈ ರೀತಿಯ ಸೇವೆ ನೀಡಲು ನೂರಾರು ಕೇಂದ್ರಗಳು ಸಿದಟಛಿಗೊಂಡಲ್ಲಿ ಹಾಲಿ ಇರುವ ವ್ಯವಸ್ಥೆ ಮೇಲಿನ ಒತ್ತಡ ಕೂಡ
ಕಡಿಮೆಯಾಗುತ್ತದೆ.
ಆದರೆ ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಆರಂಭದಲ್ಲೇ ಅಡ್ಡಿ ಎದುರಾಗಿದೆ. ನ್ಯಾಯಬೆಲೆ ಅಂಗಡಿಗಳನ್ನು ಖಾಸಗಿ ವ್ಯಕ್ತಿಗಳು ಮಾತ್ರವಲ್ಲದೆ, ಕೆಲವೆಡೆ ಸಹಕಾರಿ ಸಂಸ್ಥೆಗಳು, ಇನ್ನೂ ಕೆಲವೆಡೆ ಸ್ವಸಹಾಯ ಸಂಘಗಳು ಕೂಡ ನಡೆಸುತ್ತಿವೆ. ಆದರೆ ಈ ಯೋಜನೆಗೆ ಇವ್ಯಾವ ಕಡೆಗಳಿಂದಲೂ ನಿರೀಕ್ಷಿತ ಮಟ್ಟದಲ್ಲಿ ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಹಾಲಿ ಇರುವ ಪಡಿತರ ವಿತರಣೆಯ ಒತ್ತಡ ತಡೆದುಕೊಳ್ಳುವುದೇ ಕಷ್ಟಕರವಾಗಿದ್ದು, ಇದರ
ಜತೆಗೆ ನಾಗರಿಕ ಸೇವೆ ಒದಗಿಸುವ ಕಾರ್ಯಬೇಡವೆಂಬ ಅಭಿಪ್ರಾಯ ನ್ಯಾಯಬೆಲೆ ಅಂಗಡಿ ಮಾಲೀಕರದ್ದು.
ಸದ್ಯ ಬಹಳಷ್ಟು ನ್ಯಾಯಬೆಲೆ ಅಂಗಡಿಗಳು ಕಿರಿದಾದ ಸ್ಥಳದಲ್ಲಿ ನಡೆಯುತ್ತಿದೆ. ತಿಂಗಳಲ್ಲಿ ಕೆಲವೇ ಕೆಲವು ದಿನ ತೆರೆದು ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥ ವಿತರಿಸಿ ಬಳಿಕ ಬಂದ್ ಆಗುತ್ತವೆ. ಇನ್ನು ಕೆಲವು ದಿನಸಿ ಅಂಗಡಿ, ಸಹಕಾರ ಸಂಘ, ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹೆಸರಿಗಷ್ಟೇ ನ್ಯಾಯಬೆಲೆಅಂಗಡಿ ಎಂಬಂತಿವೆ.
ಇದೀಗ ನ್ಯಾಯಬೆಲೆ ಅಂಗಡಿ ಸೇವಾ ಸಿಂಧು ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಕನಿಷ್ಠ 10/10 ಅಳತೆಯ ಜಾಗದ ಅಗತ್ಯವಿದ್ದು ಕಂಪ್ಯೂಟರ್, ಕಂಪ್ಯೂಟರ್ ಆಪರೇಟರ್, ಇಂಟರ್‌ನೆಟ್, ಯುಪಿಎಸ್, ಪ್ರಿಂಟರ್ ಮತ್ತಿತರ ಮೂಲ ಸೌಕರ್ಯವನ್ನು ಹೊಂದಿಸಿಕೊಳ್ಳಬೇಕು. ಇದನ್ನೆಲ್ಲ ಹೊಂದಿಸಿಕೊಳ್ಳುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಇಲಾಖೆ ಸೂಚಿಸಿದೆ. ಆದರೆ ಇದೆಲ್ಲದಕ್ಕೂ ಲಕ್ಷಾಂತರ ರೂ. ಖರ್ಚಾಗಲಿದ್ದು ತಾವೇ
ಹೊಂದಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಪಕ್ಷ ಮಾಡಲೇಬೇಕು ಎಂದಾದರೆ ಸರ್ಕಾರವೇ ಅಗತ್ಯ ಸೌಕರ್ಯ ಒದಗಿಸುವುದರ ಜೊತೆಗೆ ಕಂಪ್ಯೂಟರ್ ಆಪರೇಟರ್‌ನ್ನು ನೇಮಕ ಮಾಡಲಿ ಎಂಬುದು ನ್ಯಾಯಬೆಲೆ ಅಂಗಡಿ ಮಾಲೀಕರ ವಾದ.
ಆದರೆ ಇದಕ್ಕೆ ಸೊಪ್ಪು ಹಾಕದ ಇಲಾಖೆ ಆದಷ್ಟು ಶೀಘ್ರ ಅಗತ್ಯ ಸೌಕರ್ಯವನ್ನು ಹೊಂದಿಸಿಕೊಳ್ಳುವ ಮೂಲಕ ಸೇವಾ ಸಿಂಧು ಕೇಂದ್ರಗಳನ್ನು ಆರಂಭಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಾಕೀತು ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ರಾಜಕೀಯ ಪಿತೂರಿ: ಡಿಕೆಶಿ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.