ಉಳ್ಳಾಲ: ವಿವಾಹಿತೆ ನಿಗೂಢ ಸಾವು; ಪತಿ ಪೊಲೀಸ್ ವಶಕ್ಕೆ
Team Udayavani, Jul 11, 2022, 1:13 PM IST
ಉಳ್ಳಾಲ: ವಿವಾಹಿತೆಯೋರ್ವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲತ್ ನಗರ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮಿಲ್ಲತ್ ನಗರ ನಿವಾಸಿ ಜಂಶೀರಾ ( 25) ಮೃತ ದುರ್ದೈವಿ. ಈಕೆಯ ಪತಿ ಇರ್ಫಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪತಿ ಪ್ರಕಾರ ನಿನ್ನೆ ರಾತ್ರಿ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಆನಂತರ ಜಂಶೀರಾ ಕೋಣೆಯೊಳಕ್ಕೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಪತಿ ಇರ್ಫಾನನಿಗೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಆಕೆಯನ್ನು ಮೇಲಿಂದ ಇಳಿಸಿ ಆಸ್ಪತ್ರೆ ಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸುತ್ತಿದ್ದಂತೆ ಮತ್ತೆ ಮೃತದೇಹವನ್ನು ವಾಪಸ್ಸು ಮನೆಗೆ ತಂದಿದ್ದಾನೆ. ಆನಂತರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿದ್ದಾನೆ.
ಸ್ಥಳೀಯರ ಪ್ರಕಾರ ಮೃತದೇಹದಲ್ಲಿ ರಕ್ತದ ಕಲೆಗಳು ಇದ್ದು, ಇದೊಂದು ಕೊಲೆ ಅನ್ನುವ ಸಂಶಯ ವ್ಯಕ್ತಪಡಿಸಿದ್ದು, ಮನೆಮುಂದೆ 500 ಕ್ಕೂ ಅಧಿಕ ಆಕ್ರೋಶಿತರು ಜಮಾಯಿಸಿ ಇರ್ಫಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೈತಡ್ಕ ಪ್ರಕರಣ: ಅಪಘಾತವೆಂದು ಕರೆ ಮಾಡಿದ್ದು11.52ಕ್ಕೆ, ಆದರೆ ಕಾರು ಬಿದ್ದದ್ದು 12.02ಕ್ಕೆ
ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ಇರ್ಫಾನ್ ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇರ್ಫಾನ್ ಬೈಕಂಪಾಡಿಯ ಫಿಶ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು, ಎರಡು ವರ್ಷದ ಹಿಂದೆಯಷ್ಟೇ ಜಂಶೀರಾ ವಿವಾಹವಾಗಿದ್ದನು. ದಂಪತಿಗೆ ಎಂಟು ತಿಂಗಳ ಹೆಣ್ಣು ಮಗುವಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.