ಕಾಡಾನೆ ದಾಳಿಗೆ ರೈತ ಸಾವು: ಗ್ರಾಮಸ್ಥರ ಆಕ್ರೋಶ
Team Udayavani, Aug 15, 2018, 6:00 AM IST
ಹನೂರು: ಜೋಳದ ಫಸಲಿನ ಕಾವಲಿಗೆ ತೆರಳಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿ ವಲಯದ ಕಾಡಂಚಿನ ಗ್ರಾಮ ಹಳೆಯೂರಿನಲ್ಲಿ ಜರುಗಿದೆ. ಪೊನ್ನಾಚಿ ಗ್ರಾಮದ ಸಿದ್ದಪ್ಪ(49) ಮೃತ ರೈತ. ಈತ
ಹಳೆಯೂರು ಸಮೀಪದ ತನ್ನ ಜಮೀನಿನಲ್ಲಿ ಜೋಳದ ಫಸಲನ್ನು ಬೆಳೆದಿದ್ದ. ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಪ್ರತಿನಿತ್ಯ ಕಾವಲಿಗೆ ತೆರಳುತ್ತಿದ್ದರು. ಎಂದಿನಂತೆ ಸೋಮವಾರ ಸಂಜೆ ಕಾವಲಿಗೆ ತೆರಳಿ ಜಮೀನಿನ ಅಟ್ಟಣದಲ್ಲಿ ಮಲಗಿದ್ದ ವೇಳೆ ಆನೆ ದಾಳಿ ನಡೆಸಿ, ಸ್ಥಳದಲ್ಲೇ
ಮೃತಪಟ್ಟಿದ್ದಾರೆ. ಬೆಳಗ್ಗೆ ಕುಟುಂಬಸ್ಥರು, ಸಾರ್ವಜನಿಕರು ಜಮೀನಿನಲ್ಲಿ ಹುಡುಕಿದಾಗ ಘಟನೆ ಬೆಳಕಿಗೆ ಬಂದಿದೆ. ಅರಣ್ಯಾಧಿಕಾರಿಗಳ ವಿರುದಟಛಿ ಆಕ್ರೋಶ: ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಆರ್‌ಎಫ್ಓ ಗುರುರಾಜ ಸಂಕೇಶ್ವರ್ ಮತ್ತು ಸಿಬ್ಬಂದಿಯನ್ನು ಕಂಡ ಗ್ರಾಮಸ್ಥರು ಆಕ್ರೋಶ
ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಹಾಗೂ ಇಲಾಖಾ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸುವವರೆಗೂ ಮೃತದೇಹವನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಭೇಟಿ ನೀಡಿದ ಡಿಎಫ್ಓ ಏಡುಕೊಂಡಲು ಮೃತನ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ಚೆಕ್ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.