18 ಲಕ್ಷ ಮಕ್ಕಳಿಗೆ ಶಿಷ್ಯವೇತನ: ಸಿಎಂ
Team Udayavani, Sep 6, 2021, 6:50 AM IST
ಬೆಂಗಳೂರು: ರೈತರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಸರಕಾರದ ಕನಸಿನ “ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಗೆ ರವಿವಾರ ಚಾಲನೆ ನೀಡಲಾಯಿತು.
ಯೋಜನೆ ಘೋಷಿಸಿದ ತಿಂಗಳ ಬಳಿಕ ರೈತರ ಮಕ್ಕಳ ಖಾತೆಗೆ “ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಅನುಷ್ಠಾನಗೊಂಡಿದ್ದು, ಮೊದಲ ದಿನವೇ ಪಿಯುಸಿಯ 100 ವಿದ್ಯಾರ್ಥಿಗಳು ಹಾಗೂ 52 ವಿದ್ಯಾರ್ಥಿನಿಯರಿಗೆ ಕ್ರಮವಾಗಿ 2,500 ಹಾಗೂ 3,000 ರೂ. ಶಿಷ್ಯವೇತನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ರೂಪದಲ್ಲಿ ಜಮೆ ಮಾಡಲಾಗಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಲ್ಯಾಪ್‌ಟಾಪ್‌ನಲ್ಲಿ ಗುಂಡಿ ಒತ್ತುತ್ತಿದ್ದಂತೆ ಫಲಾನುಭವಿಗಳಿಗೆ ಏಕಕಾಲದಲ್ಲಿ ಶಿಷ್ಯವೇತನ ವರ್ಗಾ ವಣೆಗೊಂಡಿತು. ಮುಂದಿನ ದಿನ
ಗಳಲ್ಲಿ ಪಿಯುಸಿ, ಐಟಿಐ, ಡಿಪ್ಲೊಮಾ ದಿಂದ ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್‌ಗಳ ಸುಮಾರು 18 ಲಕ್ಷ ರೈತ ಮಕ್ಕಳಿಗೆ ಕನಿಷ್ಠ 2,500ರಿಂದ ಗರಿಷ್ಠ 11 ಸಾವಿರ ರೂ.ವರೆಗೆ ಹಂತ-ಹಂತವಾಗಿ ಶಿಷ್ಯವೇತನ ವರ್ಗಾವಣೆ ಆಗಲಿದೆ.
ಚಾಲನೆ ನೀಡಿ ಮಾತನಾಡಿದ ಬಸವರಾಜ ಬೊಮ್ಮಾಯಿ, “ನನ್ನ ಪ್ರಕಾರ ಒಬ್ಬ ಜನಪ್ರತಿನಿಧಿಗೆ ತಾನು ಘೋಷಿಸಿದ ಯೋಜನೆ ಅತ್ಯಲ್ಪ ಅವಧಿಯಲ್ಲಿ ಅನುಷ್ಠಾನ ಗೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಸಂತೋಷ ಮತ್ತು ಸಾರ್ಥಕತೆ ಮತ್ತೂಂದಿಲ್ಲ. ಇದರ ಲಾಭ ಪಡೆದು, ರೈತ ಮಕ್ಕಳು ಭವಿಷ್ಯದಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬೇಕು. ಆಗ, ಯೋಜನೆ ಮತ್ತಷ್ಟು ಸಾರ್ಥಕತೆ ಪಡೆದುಕೊಳ್ಳುತ್ತದೆ’ ಎಂದರು.
ಸರಕಾರ 18 ಲಕ್ಷ ರೈತ ಮಕ್ಕಳಿಗೆ ಒಟ್ಟಾರೆ ಸಾವಿರ ಕೋಟಿ ರೂ. ಶಿಷ್ಯ ವೇತನ ನೀಡಲಿದೆ. ಇದು ಸರ್ಕಾರದ ಮೇಲಿನ ಹೊರೆ ಅಲ್ಲ. ಭವಿಷ್ಯದ ಆದಾಯಕ್ಕೆ ಹೂಡಿಕೆಯಾಗಿರುತ್ತದೆ ಎಂದರು.
60 ರೈತ ಸಂಜೀವಿನಿ ವಾಹನ :
ರಾಜ್ಯದಲ್ಲಿ ರೈತರಿಗೆ ತ್ವರಿತ ಸೇವೆಗಳನ್ನು ಒದಗಿಸಲು 60 ರೈತ ಸಂಜೀವಿನಿ ವಾಹನಗಳನ್ನು ಒದಗಿಸಲಾಗಿದೆ. ಇವು ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಸಚಿವರಾದ ಪ್ರಭು ಚೌವ್ಹಾಣ್, ಎನ್. ಮುನಿರತ್ನ, ನಾಗೇಶ್, ರಾಜ್ಯ ಸಾವಯವ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಕೃಷಿ ಡಿಜಿಟಲ್ ತಂತ್ರಜ್ಞಾನ ದೇಶಕ್ಕೆ ಮಾದರಿ: ನರೇಂದ್ರ ಸಿಂಗ್ ತೋಮರ್ :
ಕೃಷಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ ಅಳವಡಿಸಿಕೊಂಡ ಡಿಜಿಟಲ್ ತಂತ್ರಜ್ಞಾನ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದೇ ಮಾದರಿಯನ್ನು ಅನುಸರಿಸುವಂತೆ ವಿವಿಧ ರಾಜ್ಯಗಳಿಗೂ ಸಲಹೆ ನೀಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು. ಕಾರ್ಯಕ್ರಮದಲಿ ಮಾತನಾಡಿದ ಅವರು, ಮುಂದಿನ 2 ದಿನಗಳ ಕಾಲ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರೊಂದಿಗೆ ಕೃಷಿ ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಯ ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಅಳವಡಿಸಿಕೊಂಡ ಡಿಜಿಟಲ್ ಮಾದರಿಯನ್ನು ಅನುಸರಿಸಲು ಸಲಹೆ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.