ಮತದಾರರ ಸಂಖ್ಯೆ: ಪ್ರಮೀಳಾ ಪಾರುಪತ್ಯ
Team Udayavani, Jan 25, 2022, 10:36 AM IST
ಬೆಂಗಳೂರು: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರ ಮೇಲುಗೈ ಎಂಬುದು ಸರ್ವೇಸಾಮಾನ್ಯ. ಆದರೆ, ರಾಜ್ಯದ ಒಟ್ಟು ಮತದಾರರಲ್ಲೂ ಮಹಿಳೆಯರದ್ದೇ ಪಾರುಪಾತ್ಯ ಆಗಿದೆ. ಪರಿಷ್ಕೃತ ಮತದಾರರ ಪಟ್ಟಿಯಂತೆ ಅರ್ಧ ರಾಜ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು ಇದ್ದಾರೆ.
ರಾಜ್ಯದ ಒಟ್ಟು ಮತದಾರರಲ್ಲಿ ಮಹಿಳೆಯ ಸಂಖ್ಯೆ ಕಡಿಮೆ ಇದ್ದರೂ 15 ಜಿಲ್ಲೆಗಳಲ್ಲಿ ಮಹಿಳಾಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2022ರ ಅಂತಿಮ ಮತದಾರರ ಪಟ್ಟಿಪ್ರಕಟವಾಗಿದ್ದು, ಅದರಂತೆ 5.25 ಕೋಟಿಮತದಾರರು ಇದ್ದು, ಅದರಲ್ಲಿ 2.64 ಕೋಟಿ ಪುರುಷರು, 2.60 ಕೋಟಿ ಮಹಿಳೆಯರು ಇದ್ದಾರೆ. ಇತರರು 4,715 ಮತದಾರರು ಇದ್ದಾರೆ.
2021ರ ಅಂತಿಮ ಮತದಾರರ ಪಟ್ಟಿಯಂತೆ 3.27 ಲಕ್ಷ ಮತದಾರರು ಹೆಚ್ಚಾಗಿದ್ದಾರೆ. 4.01ಲಕ್ಷ ಯುವ ಮತದಾರರು ಇದ್ದು, ಅದರಲ್ಲಿ 1.04ಲಕ್ಷ 18 ವರ್ಷದ ಮತದಾರರು ಇದ್ದಾರೆ.ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಪ್ರಕಟಿಸಿರುವ ಮಾಹಿತಿಯಂತೆ ಬಾಗಲಕೋಟೆ,ರಾಯಚೂರು, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ,ಕೋಲಾರ, ರಾಮನಗರ, ಮಂಡ್ಯ, ದಕ್ಷಿಣ ಕನ್ನಡ,ಕೊಡಗು, ಮೈಸೂರು ಹಾಗೂ ಚಾಮರಾಜನಗರಜಿಲ್ಲೆಗಳಲ್ಲಿ ಪುರಷರಿಗಿಂತ ಮಹಿಳಾ ಮತದಾರರುಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ವೇಳೆ ಗೋಕಾಕ್,ವಿಜಯಪುರ ನಗರ, ಸೇಡಂ, ಕೊಪ್ಪಳ, ಕಾರವಾರ, ಭದ್ರಾವತಿ, ಬೈಂದೂರು, ನರಸಿಂಹರಾಜ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಅಧಿಕವಾಗಿದ್ದಾರೆ.
2022ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2021ರ ಆಗಸ್ಟ್‌ನಿಂದ ಆರಂಭವಾಗಿತ್ತು. 2022ರ ಜ.13ರಂದು ಅಂತಿಮ ಮತದಾರರ ಪಟ್ಟಿಪ್ರಕಟಿಸಲಾಗಿದ್ದು, ಮತದಾರರ-ಜನಸಂಖ್ಯಾಅನುಪಾತ ಶೇ.70.76 ಇದೆ. ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿಎಪಿಕ್ ನಂಬರ್ ನೀಡುವ ಮತ್ತು ಫೋಟೋ ಜೋಡಣೆ ಶೇ.100ರಷ್ಟುಆಗಿದೆ. 47,776 ಸೇವಾ ಮತ ದಾರರು(ಸರ್ವಿಸ್ ಓಟರ್), 4.23 ಸಾವಿರ ಅಂಗವಿಕಲ ಮತದಾರರು ಇದ್ದಾರೆ.
ಉಡುಪಿ, ತುಮಕೂರು, ಕೋಲಾರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಪರಿಣಾಮ ಕಾರಿಯಾಗಿ ನಡೆದಿದೆ ಎಂದು ಚುನಾವಣಾಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಿಂಗಾನುಪಾತ ಕೊಂಚ ಏರಿಕೆ: 2011ರ ಜನಗಣತಿ ಪ್ರಕಾರ ಲಿಂಗಾನುಪಾತ 973 ಇದ್ದರೆ,2022ರ ಅಂತಿಮ ಮತದಾರರ ಪಟ್ಟಿ ಪ್ರಕಾರಲಿಂಗಾನುಪಾತ 984 ಆಗಿದ್ದು, ಕಳೆದ ನಾಲ್ಕುವರ್ಷಗಳಲ್ಲಿ ಲಿಂಗಾನುಪಾತ ಸಣ್ಣ ಪ್ರಮಾಣದಲ್ಲಿಏರಿಕೆ ಕಂಡಿದೆ. 2108ರಲ್ಲಿ ಲಿಂಗಾನುಪಾತ 972,2019ರಲ್ಲಿ 976, 2020ರಲ್ಲಿ 981, 2021ರಲ್ಲಿ 983 ಹಾಗೂ 2022ರಲ್ಲಿ 984 ಆಗಿದೆ. ಈ ವರ್ಷಗಳಲ್ಲಿಮಹಿಳಾ ಮತದಾರರ ನೋಂದಣಿ ಸಹ ಹೆಚ್ಚಾಗಿದೆ.ಅದರ ಪರಿಣಾಮ ಲಿಂಗಾನುಪಾತದಲ್ಲೂ ಕೊಂಏರಿಕೆ ಕಂಡಿದೆ. 2022ರ ಅಂತಿಮ ಪಟ್ಟಿ ಪ್ರಕಾರ ಸಾವಿರ ಪುರಷ ಮತದಾರರಿಗೆ 984 ಮಹಿಳಾ ಮತದಾರರು ಇದ್ದಾರೆ.
ಶೇ.74ರಷ್ಟು ಆನ್‌ಲೈನ್ ಅರ್ಜಿ :
ಮತದಾರರ ಪಟ್ಟಿ ಪರಿಷ್ಕರಣೆಗೆ 2021ರ ನ.1ರಿಂದ ಡಿ.8ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು ಸಲ್ಲಿಕೆಯಾದ 6.12 ಲಕ್ಷಕ್ಕೂ ಹೆಚ್ಚು ಅರ್ಜಿಗಳಲ್ಲಿ 4.61 ಲಕ್ಷಕ್ಕೂ ಹೆಚ್ಚು, ಅಂದರೆ ಶೇ.76ರಷ್ಟು ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದು 1.51 ಲಕ್ಷಕ್ಕೂ ಹೆಚ್ಚು ಅರ್ಜಿಗಳು (ಶೇ.24) ಆಫ್ಲೈನ್ ಮೂಲಕಸಲ್ಲಿಕೆಯಾಗಿವೆ. ಕಳೆದ ಬಾರಿಗೆ ಹೊಲಿಸಿದರೆ ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಂದರೆ ಶೇ.34ರಷ್ಟು ಏರಿಕೆಯಾಗಿದೆ.
ಪುರುಷರ ಮೇಲುಗೈ : ಅರ್ಧ ರಾಜ್ಯದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ದ್ದರೆ, ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿ ಗಿಂತ ಪುರುಮತದಾರರು ಹೆಚ್ಚಿದ್ದಾರೆ. ಬೆಂಗಳೂರು ನಗರ ಸೇರಿಕೊಂಡತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ, ಉತ್ತರ, ದಕ್ಷಿಣ ವಲಯದಲ್ಲೂ ಮಹಿಳೆಯರಿಗಿಂತ ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
2022ರ ಅಂತಿಮ ಮತದಾರರ ಪಟ್ಟಿ :
ಪುರುಷರು: 2,64,60,225
ಮಹಿಳೆಯರು: 2,60,42,784
ಇತರರು : 4,715
ಒಟ್ಟು : 5,25,07,724
-ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.