ಇಂದಿನಿಂದ ಚಿತ್ರೋತ್ಸವ ಆರಂಭ
Team Udayavani, Feb 2, 2017, 3:45 AM IST
ಬೆಂಗಳೂರು: ಒಂಬತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಗುರುವಾರ ರಾಜಧಾನಿಯಲ್ಲಿ ಪ್ರಾರಂಭವಾಗಲಿದ್ದು ಸಂಜೆ 6ಕ್ಕೆ ವಿಧಾನ ಸೌಧ ಮುಂಭಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ.
ಅತಿಥಿಗಳಾಗಿ ಬಂಗಾಲಿಯ ಹೆಸರಾಂತ ನಿರ್ದೇಶಕ ಬುದ್ಧದೇವದಾಸ್ ಗುಪ್ತ, ಈಜಿಪ್ಟ್ನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ನಟ ಪುನೀತ್ ರಾಜ್‌ಕುಮಾರ್ ಭಾಗವಹಿಸಲಿದ್ದು, ನಟಿ ಸುಹಾಸಿನಿ ಮಣಿರತ್ನಂ ಮತ್ತು ರಮೇಶ್ ಅರವಿಂದ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಫೆ. 3ರಿಂದ 9ರ ವರೆಗೆ ನಡೆಯಲಿರುವ ಚಿತ್ರೋತ್ಸವ ಬೆಂಗಳೂರಿನ ಒರಾಯನ್ ಮಾಲ್‌ನ ಪಿವಿಆರ್ ಸಿನಿಮಾಸ್‌ನ 11 ಪರದೆಗಳು ಹಾಗೂ ಮೈಸೂರಿನ ಮಾಲ್ ಆಫ್ ಮೈಸೂರು ಐನಾಕ್ಸ್ ಸಿನೆಮಾಸ್‌ನ 4 ಪರದೆಗಳಲ್ಲಿ ನಡೆಯಲಿದೆ.
ಈ ಬಾರಿ 60 ದೇಶಗಳ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ. ಉದ್ಘಾಟನೆ ಚಿತ್ರವಾಗಿ ಅಲ್ಗೇರಿಯಾದ ಮಹ್ಮದ್ ಹಮಿದಿ ನಿರ್ದೇಶನದ “ಲಾ ವಚೆ’ ಚಿತ್ರ ಪ್ರದರ್ಶನವಾಗಲಿದೆ. ಚಿತ್ರೋತ್ಸವದಲ್ಲಿ ಹಲವು ವಿಭಾಗಗಳಿದ್ದು, ಸಮಕಾಲೀನ ವಿಶ್ವ ಸಿನೆಮಾ, ದೇಶ ನೋಟ ವಿಭಾಗದಲ್ಲಿ ಲಕ್ಸಂಬರ್ಗ್, ವಿಯೆಟ್ನಾಂ ಮತ್ತು ಈಜಿಪ್ಟ್ ದೇಶಗಳ ಸಿನೆಮಾ ನೋಟ, ಪುನರವಲೋಕನ ವಿಭಾಗ ದಲ್ಲಿ ನಿರ್ದೇಶಕರಾದ ಹಂಗೇರಿಯ ಜೋಲ್ಟನ್ ಫಾಬ್ರಿ, ಯುಎಸ್‌ಎನ್ ಹಸ್ಕೆಲ್ ವೆಕ್ಸ$Éರ್, ಭಾರತದ ಬುದ್ಧದೇವ್‌ದಾಸ್ ಗುಪ್ತ ಅವರ ಕುರಿತ ಸಾಕ್ಷ್ಯಚಿತ್ರಗಳು ಪ್ರದರ್ಶನವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.