ಚುನಾವಣ ಪ್ರಚಾರದಲ್ಲಿ ಬಿರುಸುಗೊಂಡ ಮಾತಿನೇಟು
Team Udayavani, Feb 8, 2023, 5:45 AM IST
ವಿಧಾನಸಭಾ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಯಾತ್ರೆ-ಸಮಾವೇಶಗಳ ಅಬ್ಬರದ ನಡುವೆ ಮೂರೂ ಪಕ್ಷಗಳ ನಾಯಕರ ನಡುವಿನ ವಾಗ್ಯುದ್ಧ ಜೋರಾಗಿದೆ. ಪರಸ್ಪರ ಮಾತಿನೇಟಿನ ಮೂಲಕ ಆಯಾ ಪಕ್ಷಗಳ ನಾಯಕರನ್ನು ಹಣಿಯುವ ಬೆಳವಣಿಗೆಯೂ ನಡೆಯುತ್ತಿದೆ.
ಡಿವಿಎಸ್ ವಿರುದ್ಧ ಜೆಡಿಎಸ್ ವಾಗ್ಧಾಳಿ
ಬೆಂಗಳೂರು: ಪಂಚರತ್ನ ಯಾತ್ರೆ “ಪಂಕ್ಚರ್’ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ವಿರುದ್ಧ ಜೆಡಿಎಸ್ ಟ್ವಿಟರ್‌ನಲ್ಲಿ ಹರಿಹಾಯ್ದಿದೆ.ಕರುನಾಡಿನ ಸಮಗ್ರ ಏಳಿಗೆಗಾಗಿ ಸಿದ್ಧಪಡಿಸಿರುವ “ಪಂಚರತ್ನ’ ಪಂಕ್ಚರ್ ಆಗಿದೆ ಎಂದು ಸದಾನಂದ ಗೌಡರು ನಾಲಿಗೆ ಹರಿಬಿಟ್ಟಿದ್ದಾರೆ. “ವೀಡಿಯೊ ಕಾಲ್ ‘ನಲ್ಲಿ ಏನನ್ನೋ ನೋಡಿ ಹಲ್ಕಿರಿದು ಮಾತನಾಡಿ ಜನಪ್ರಿಯ’ ರಾದ ಸದಾನಂದ ಗೌಡರೇ, ವರ್ಚುವಲ್ ಜಗತ್ತಿನಿಂದ ಮೊದಲು ಹೊರಬನ್ನಿ’ ಎಂದು ಟಾಂಗ್ ನೀಡಿದೆ. ಪಂಚರತ್ನ ಕಾರ್ಯಕ್ರಮವು ಈಗಾಗಲೇ ರಾಜ್ಯದ 6,700 ಕಿ.ಮೀ. ಕ್ರಮಿಸಿದೆ. ಕಾರ್ಯಕ್ರಮ ನಡೆದಲ್ಲೆಲ್ಲ ನಮಗೆ ಸಿಗುತ್ತಿರುವ ಜನ ಸ್ಪಂದನೆ ನೋಡಿ ಸರಕಾರ ಪತರಗುಟ್ಟಿದೆ. ವೀಡಿಯೊ ಕಾಲ್ ನಲ್ಲಿ ಮುಳುಗುವ ಸದಾನಂದ ಗೌಡರೇ, ಒಮ್ಮೆ ಪಂಚರತ್ನ ಕಾರ್ಯಕ್ರಮಕ್ಕೆ ಬಂದು ನೋಡಿ. ಆಗಲಾದರೂ ಸತ್ಯ ಗೊತ್ತಾಗಲಿದೆ ಎಂದು ಜೆಡಿಎಸ್ ಹೇಳಿದೆ.
ಅದಾನಿ, ಪ್ರಧಾನಿ ಮೋದಿ ಒಂದೇ ನಾಣ್ಯದ ಎರಡು ಮುಖ: ಉಗ್ರಪ್ಪ
ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು, ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಅದಾನಿ ಆಸ್ತಿ 2018ರಲ್ಲಿ 71,200 ಕೋ. ರೂ. ಗಳಷ್ಟಿತ್ತು. 2022ಕ್ಕೆ 10.94 ಲಕ್ಷ ಕೋಟಿಗಳಿಗೆ ಏರಿದೆ. ಕೇವಲ ಒಂದು ವರ್ಷದಲ್ಲೇ 5.88 ಲಕ್ಷ ಕೋಟಿ ಆಸ್ತಿ ಗಳಿಕೆಯಾಗಿದೆ. ಅದಾನಿ ಒಂದು ದಿನದ ಆದಾಯ 1,600 ಕೋ. ರೂ.ಗಳಷ್ಟಿದೆ. ಕೇವಲ ಎಸ್‌ಬಿಐ ಬ್ಯಾಂಕ್ ಒಂದರಿಂದಲೇ ಸುಮಾರು 81 ಸಾವಿರ ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಈಗ ಅದಾನಿ ವಂಚನೆಯಿಂದ ಎಸ್‌ಬಿಐ, ಎಲ್‌ಐಸಿಗೆ ಸುಮಾರು 80 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ. ದೇಶದ ಆರ್ಥಿಕ ಸ್ಥಿತಿ ಬುಡಮೇಲು ಆಗುವ ಪರಿಸ್ಥಿತಿ ಬಂದಿದೆ ಎಂದರು.
“ನಪುಂಸಕ ಸರಕಾರ’ ಎಂದ ಎಚ್.ಡಿ. ಕುಮಾರಸ್ವಾಮಿ
ರಾಜ್ಯ ಬಿಜೆಪಿ ಸರಕಾರವನ್ನು “ನಪುಂಸಕ’ ಎಂದು ಟ್ವಿಟರ್‌ನಲ್ಲಿ ಟೀಕಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕ ಬಿಜೆಪಿ ಪಾಲಿಗೆ ಇಂದು “ಪಾಲಕರನ್ನು ಶಾಲೆಗೆ ಬರಮಾಡಿಕೊಳ್ಳುವ ದಿನ’ದ ಹಾಗೆ. ಪ್ರಧಾನಿ ಮೋದಿ ಯವರು ರಾಜ್ಯಕ್ಕೆ ಆಗಮಿಸುತ್ತಿರುವ ಈ ವೇಳೆ, ಅವರನ್ನು ಸ್ವಾಗತಿಸಿ ಚುನಾವಣೆ ಗೆಲ್ಲಲು ಅಣಿಯಾಗುವ ಉತ್ಸಾಹಲ್ಲಿ ರಾಜ್ಯ ಬಿಜೆಪಿಯವರಿದ್ದಾರೆ ಎಂದು ಟೀಕಿಸಿದ್ದಾರೆ. ಕರುನಾಡು ಬರಗಾಲ, ಪ್ರವಾಹದಿಂದ ತತ್ತರಿಸಿದಾಗೆಲ್ಲ “ಮಾಯವಾಗುವ’ ಪ್ರಧಾನಿ ಯವರು, ಚುನಾವಣೆ ಹತ್ತಿರ ಬಂದ ಕೂಡಲೇ ಪ್ರತ್ಯಕ್ಷ ರಾಗುತ್ತಾರೆ. ಇಡೀ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿ ರುವ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕದ ಸಮಸ್ಯೆಗಳಿಗೆ ಕುರುಡಾಗಿ ವರ್ತಿಸುವವರು, ಈಗ ಮತ ಕೇಳಲು ಯಾವ ಮುಖ ಹೊತ್ತು ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿಯೂ ನಪುಂಸಕ ವಾಗಿರುವುದು ದಿಟ. ಬರಡು ಭೂಮಿ ಯಂತೆ ಯಾವ ಪ್ರಯೋಜನವೂ ಇಲ್ಲದ ರಾಜ್ಯ ಸರಕಾರವಿದು. ಜನರ ಹಣ ಬಾಚುವ, ದೋಚುವುದಷ್ಟೆ ಇವರ ಕೆಲಸ. ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿ ಯುವ ಕೀಚಕ ಸರಕಾರವನ್ನು ಜನರು ಕಿತ್ತೂಗೆಯುವುದು ಖಚಿತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.