ಸ್ಪರ್ಧಿಸುವುದಾದರೆ ಮಂಡ್ಯದಿಂದ; ಅದೂ ಕಾಂಗ್ರೆಸ್‌ನಿಂದ


Team Udayavani, Feb 10, 2019, 12:34 AM IST

sumalata.jpg

ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ವರದಿಗಳು ಬಂದ ಬೆನ್ನಲ್ಲೇ ಹಲವು ರಾಜಕೀಯ ಆರೋಪ- ಪ್ರತ್ಯಾರೋಪಗಳು ಆರಂಭವಾಗಿವೆ. ಅಂಬರೀಷ್‌ ಅಭಿಮಾನಿಗಳು ಸುಮಲತಾ ಪ್ರವೇಶಕ್ಕೆ ಕಾತರದಿಂದ ಕಾಯುತ್ತಿದ್ದರೆ, ‘ರಾಜಕೀಯ ವಿರೋಧಿ’ಗಳು ಹೊಸ ವರಸೆ ಆರಂಭಿಸಿವೆ. ಈ ಹಂತದಲ್ಲಿ ಸುಮಲತಾ ಏನಂತಾರೆ?

ನೀವಿನ್ನೂ ಸ್ಪರ್ಧೆ ಮಾಡುವುದಾಗಿ ಹೇಳಿಲ್ಲ. ಅಷ್ಟರಲ್ಲೇ ‘ಗೌಡ್ತಿ’ ವಿವಾದ ಶುರುವಾಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಆ ತರಹದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅದರ ಅಗತ್ಯ ಕೂಡಾ ನನಗಿಲ್ಲ. ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಲು ನಾನು ರಾಜಕಾರಣಿಯಲ್ಲ. ನಮಗೆ ನಮ್ಮದೇ ಆದ ಸ್ಟಾಂಡರ್ಡ್‌ ಇದೆ. ಘನತೆ, ಗೌರವ ಏನೆಂಬುದನ್ನು ನಾನು ಅಂಬರೀಶ್‌ ಅವರಿಂದ ಕಲಿತಿದ್ದೇನೆ. ದ್ವೇಷದ ರಾಜಕಾರಣವನ್ನು ಅವರು ಯಾವತ್ತೂ ಮಾಡಿಲ್ಲ. ನಮಗೆ ಅವರೇ ಸ್ಟಾಂಡರ್ಡ್‌. ಹಾಗಾಗಿ, ಆ ಬಗ್ಗೆ ನಾನು ಏನೂ ಮಾತನಾಡಲು ಇಚ್ಛೆ ಪಡೋದಿಲ್ಲ. ನನ್ನ ಪ್ರತಿಕ್ರಿಯೆಗಿಂತ ಜನಾನೇ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ.

ನಾಳೆ ಚುನಾವಣಾ ಅಖಾಡದಲ್ಲಿ ಇದೇ ವಿಚಾರ ಬರಬಹುದು. ಇದನ್ನು ಹೇಗೆ ಎದುರಿಸುತ್ತೀರಿ?
– 
ಪಾಲಿಟಿಕ್ಸ್‌ಗೆ ಬರಬೇಕೆಂದು ನಾನು ಯಾವತ್ತೂ ಕನಸು ಕಂಡವಳಲ್ಲ. ಆ ಆಸೆ ಇದ್ದಿದ್ದರೆ ಯಾವತ್ತೋ ಬರುತ್ತಿದ್ದೆ. ರಾಜಕೀಯಕ್ಕೆ ನಾನು ಬರಲೇಬೇಕೆಂಬುದು ಜನರ ಆಸೆಯೇ ಹೊರತು ನನ್ನದಲ್ಲ. ಅಂಬರೀಶ್‌ ಅವರು, ತನ್ನ ಹೆಂಡ್ತಿ, ಮಗನನ್ನು ರಾಜಕೀಯಕ್ಕೆ ಕರೆದುಕೊಂಡು ಬರಲ್ಲ ಅಂತಾನೇ ಹೇಳುತ್ತಿದ್ದರು. ಅವರು ತನ್ನ ಕುಟುಂಬದವರನ್ನು ರಾಜಕೀಯಕ್ಕೆ ತರಬೇಕೆಂದು ಯಾವತ್ತೂ ಅಂದುಕೊಂಡಿಲ್ಲ. ನಮಗೂ ಆ ತರಹದ ಆಸಕ್ತಿ ಇರಲಿಲ್ಲ. ಅವರಿಗೆ ಹಿಂದಿನಿಂದ ಪ್ರೋತ್ಸಾಹ ಕೊಡುತ್ತಿದ್ದೆವು ಅಷ್ಟೇ. ಹಾಗಾಗಿ, ನನಗೆ ಇದು ಎಫೆಕ್ಟ್ ಆಗಲ್ಲ. ರಾಜಕೀಯಕ್ಕೆ ಬಂದು 25-30 ವರ್ಷ ರಾಜಕೀಯದಲ್ಲಿದ್ದು, ಏನೇನೋ ಆಗಿಬಿಡಬೇಕು ಎಂಬ ಆಸೆ ಇದ್ದಿದ್ದರೆ, ನಾನು ಇಂತಹ ಹೇಳಿಕೆಗಳಿಗೆ ಭಯಪಡಬೇಕು. ನನಗೆ ಆ ತರಹದ ಯಾವ ಉದ್ದೇಶವೂ ಇಲ್ಲ. ಇದು ಜನರಿಗೆ ಬಿಟ್ಟ ವಿಚಾರ. ಅಂತಿಮ ಉತ್ತರವನ್ನು ಅವರೇ ಕೊಡುತ್ತಾರೆ.

ಸ್ಪರ್ಧಿಸುವುದಾದರೆ ಯಾವ ಪಕ್ಷದಿಂದ?
– 
ರಾಜಕೀಯಕ್ಕೆ ಬರೋದಾದ್ರೆ ಮಂಡ್ಯದಿಂದ. ಯಾವ ಪಕ್ಷದವರ ಜೊತೆಯೂ ಮಾತನಾಡಿಲ್ಲ. ನಾನು ಮಾನಸಿಕವಾಗಿ ಸಿದ್ಧಳಾಗೋಕೆ ಮುಂಚೆ ನಾನ್ಯಾಕೆ ಬೇರೆಯವರ ಜೊತೆ ಮಾತನಾಡಲಿ?

ನಿಮ್ಮ ಆಲೋಚನೆ, ಚಿಂತನೆ ಯಾವ ಪಕ್ಷಕ್ಕೆ ಹೊಂದುತ್ತದೆ?
– 
ಖಂಡಿತಾ ಕಾಂಗ್ರೆಸ್‌. ಆ ಪಕ್ಷದಲ್ಲೇ ನನ್ನ ಪತಿ 20 ವರ್ಷ ಇದ್ದಿದ್ದು. ಕಾಂಗ್ರೆಸ್‌ ಪಕ್ಷಕ್ಕೆ ಅವರ ಸೇವೆ ಸಾಕಷ್ಟಿದೆ. ಜೊತೆಗೆ ಅವರು ಸಚಿವರಾಗಿದ್ದು ಕೂಡಾ ಆ ಪಕ್ಷದಿಂದಲೇ. ಅವರು ನಿಷ್ಠಾವಂತ ಕಾಂಗ್ರೆಸಿಗರಾಗಿದ್ದವರು. ಹಾಗಾಗಿ, ಕಾಂಗ್ರೆಸ್‌ನಿಂದಲೇ ಎದುರು ನೋಡುತ್ತೇನೆ. •4ನೇ ಪುಟಕ್ಕೆ

ಮಂಡ್ಯ ಅಭಿವೃದ್ಧಿ ಬಗ್ಗೆ ಏನು ಕನಸು ಹೊಂದಿದ್ದೀರಿ?
– 
ಮಂಡ್ಯ ಬಗ್ಗೆ ಅಂಬರೀಶ್‌ ಅವರಿಗೆ ತುಂಬಾ ಕನಸಿತ್ತು. ಮಂಡ್ಯವನ್ನು ತುಂಬಾ ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡಿದ್ದರು. ಐಟಿಬಿಟಿ ಈಗ ಕೇವಲ ಬೆಂಗಳೂರಿನಲ್ಲಿ ಮಾತ್ರ ಇದೆ. ಅದು ಮಂಡ್ಯಕ್ಕೂ ಬರೋ ತರಹ ಆಗಬೇಕೆಂಬ ಆಸೆ ಅವರಿಗಿತ್ತು. ಮಂಡ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದ್ದರು. ಮಂಡ್ಯ ಯುವಕರನ್ನು ಮುಂದೆ ತಂದು, ಮಂಡ್ಯ ಇಂಡಿಯಾದಲ್ಲೇ ನಂಬರ್‌ ಒನ್‌ ಆಗಬೇಕೆಂಬ ಆಸೆ ಹೊಂದಿದ್ದರು. ಅದು ಅವರ ಫೆವರಿಟ್ ಡ್ರೀಮ್‌. ಅವರ ಕನಸನ್ನು ಮುಂದೆ ತಗೊಂಡು ಹೋಗಬೇಕೆಂಬುದು ನನ್ನ ಕನಸು.

ಇಷ್ಟು ದಿನ ಕಲಾವಿದರಾಗಿದ್ದ ನಿಮಗೆ ರಾಜಕೀಯ ಹೊಂದಿಕೆಯಾಗುತ್ತಾ?
– 
ನಾನು ಸಿನಿಮಾಕ್ಕೆ ಬಂದಾಗಲೂ ನನಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ನೀರಿಗೆ ಬಿದ್ದ ನಂತರವೇ ಈಜು ಕಲಿಯೋದು. ಆಚೆ ನಿಂತುಕೊಂಡು ಈಜು ಕಲಿಯಲು ಆಗಲ್ಲ. ನೀರಿಗೆ ಬಿದ್ದ ಮೇಲೆ ಈಜಲು ಕಲಿಯಲೇಬೇಕು. ರಾಜಕೀಯ ಕೂಡಾ ಅದೇ ರೀತಿ. ಮುಂದೆ ನೋಡೋಣ …

ನೀವು ರಾಜಕೀಯಕ್ಕೆ ಬರುವ ಬಗ್ಗೆ ಅಂಬರೀಶ್‌ ನಿಮ್ಮಲ್ಲೇನಾದರೂ ಮಾತನಾಡಿದ್ದು ಇದೆಯಾ?
– 
ಅವರು ತಮಾಷೆಗೆ ಅಂದಿರಬಹುದು. ಗಂಭೀರವಾಗಿ ಯಾವತ್ತೂ ಹೇಳಿಲ್ಲ. ಕುಟುಂಬದ ಯಾರಾದರೂ ಒಬ್ಬರು ರಾಜಕೀಯದಲ್ಲಿರಬೇಕು. ಉಳಿದವರು ಅವರಿಗೆ ಬೆಂಬಲವಾಗಿರಬೇಕೆಂದುಕೊಂಡಿದ್ದರು. ಎಲ್ಲರೂ ರಾಜಕೀಯಕ್ಕೆ ಬಂದರೆ ಅದಕ್ಕೆ ಅರ್ಥವಿರೋದಿಲ್ಲ. ರಾಜಕೀಯ ವೃತ್ತಿಯಲ್ಲ, ಅದು ಸೇವೆ. ಆ ನಿಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ ಕೂಡಾ.

ನಿಮ್ಮ ರಾಜಕೀಯ ಎಂಟ್ರಿ ಬಗ್ಗೆ ಪುತ್ರ ಅಭಿಷೇಕ್‌ ಏನಂತಾರೆ?
– 
‘ಅಮ್ಮ ನಿನಗೆ ಸಾಮರ್ಥ್ಯವಿದೆ’ ಅಂತಾನೆ. ‘ನಿನಗೆ ಧೈರ್ಯವಿದ್ದರೆ ಮುಂದೆ ಹೋಗು, ನಾವೆಲ್ಲರೂ ಜೊತೆಗಿರುತ್ತೇನೆ’ ಎನ್ನುತ್ತಾನೆ.

ಮುಂದಿನ ದಿನಗಳಲ್ಲಿ ಅಭಿಷೇಕ್‌ ರಾಜಕೀಯಕ್ಕೆ ಬರುತ್ತಾರಾ?
– 
ಅದನ್ನು ಈಗಲೇ ಹೇಳ್ಳೋದು ಕಷ್ಟ. ಆದರೆ, ಅವನಿಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇದೆ. ಆತ ಲಂಡನ್‌ನಲ್ಲಿ ಓದಿರೋದು ಕೂಡಾ ಎಂಎ ಇನ್‌ ಪಾಲಿಟಿಕ್ಸ್‌. ನನ್ನ ಮೂಲಕ ಅವನಿಗೆ ಇದೊಂದು ಅನುಭವ ಆಗಬಹುದು.

ನಿಮ್ಮ ರಾಜಕೀಯ ಪ್ರವೇಶಕ್ಕೆ ಚಿತ್ರರಂಗದ ಬೆಂಬಲ ಹೇಗಿದೆ?
– 
ನಾನು ಯಾರ ಜೊತೆಯೂ ಈ ಬಗ್ಗೆ ಚರ್ಚೆ ಮಾಡಿಲ್ಲ. ‘ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ’ ಎನ್ನುತ್ತಾರೆಂಬ ವಿಶ್ವಾಸವಿದೆ.

ಅಭಿಮಾನಿಗಳಿಗೆ ಏನು ಹೇಳಲು ಇಚ್ಛೆಪಡುತ್ತೀರಿ?
– 
ಅಂಬರೀಶ್‌ ಅವರ ಜೊತೆ ಇದ್ದ ಬಾಂಧವ್ಯವನ್ನು ನಮಗೂ ಮುಂದುವರೆಸಿದ್ದಾರೆ. ನಾನು ಅಂಬರೀಶ್‌ ಅವರನ್ನು ಎಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೇನೋ, ಅಭಿಮಾನಿಗಳು ಕೂಡಾ ಅಷ್ಟೇ ಮಿಸ್‌ ಮಾಡ್ತಿದ್ದಾರೆ. ಅಂಬರೀಶ್‌ ಅವರ ನಂತರ ಈ ತರಹದ ಪ್ರೀತಿ ನಮಗೆ ಸಿಗುತ್ತೆ ಅನ್ನೋದನ್ನು ನಿರೀಕ್ಷಿಸಿರಲಿಲ್ಲ. ಅದು ಅವರಿಗಷ್ಟೇ ಅಂದುಕೊಂಡಿದ್ದೆ. ಆದರೆ, ಅದನ್ನು ಮುಂದುವರೆಸುತ್ತಿದ್ದಾರೆ. ಅಂಬರೀಶ್‌ ಅವರನ್ನು ನಟ, ರಾಜಕಾರಣಿಗಿಂತ ವ್ಯಕ್ತಿಯಾಗಿ ಜನ ಪ್ರೀತಿಸುತ್ತಿದ್ದರು. ವ್ಯಕ್ತಿತ್ವಕ್ಕೆ ತೋರಿಸಿದ ಪ್ರೀತಿ ಅದು. ಆ ಪ್ರೀತಿಯನ್ನು ಉಳಿಸಿಕೊಂಡು ಹೋಗುತ್ತೇನೆ.

— ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.