ಕೊನೆಗೂ ಗೂಗಲ್ ನಕ್ಷೆಯಲ್ಲಿ “ಕೆಟ್ಟ’ ಕನ್ನಡ!
Team Udayavani, Nov 4, 2017, 9:37 AM IST
ಬೆಂಗಳೂರು: ಕನ್ನಡ ಮಾಸ ನವೆಂಬರ್‌ನಲ್ಲಿ ಗೂಗಲ್, ನಾಡಿನ ಜನತೆಗೊಂದು ಸಿಹಿಸುದ್ದಿ ಕೊಟ್ಟಿದೆ. ಗೂಗಲ್ ನಕ್ಷೆಯಲ್ಲಿ ಇಷ್ಟು ದಿನ ಕೇವಲ ಇಂಗ್ಲಿಷ್ ಭಾಷೆಯಲ್ಲಿದ್ದ ಕರುನಾಡಿನ ಸ್ಥಳಗಳು ಶುಕ್ರವಾರದಿಂದ ಕನ್ನಡದಲ್ಲೂ ಕಾಣಿಸಿಕೊಳ್ಳುತ್ತಿವೆ. ಭಾರತದ ಕೆಲವೇ ಪ್ರಾಂತೀಯ ಭಾಷೆಗಳಿಗೆ ಸಿಕ್ಕಿದ್ದ ಗೂಗಲ್ ಗೌರವಕ್ಕೆ ಈಗ ಕನ್ನಡ ಪಾತ್ರವಾಗಿದೆ. 12 ವರ್ಷಗಳ ಹಿಂದಷ್ಟೇ ಆರಂಭವಾದ
ಗೂಗಲ್ ನಕ್ಷೆಗೆ 2014ರಲ್ಲಿ ಭಾರತದ ಮೊದಲ ಭಾಷೆ ಯಾಗಿ ಹಿಂದಿ ಸೇರ್ಪಡೆಗೊಂಡಿತ್ತು. ನಂತರ ಬಂಗಾಳಿ, ತಮಿಳು, ತೆಲುಗು, ರಾಜಸ್ಥಾನಿ, ಪಂಜಾಬಿ ಭಾಷೆಗಳಿಗೆ ಮನ್ನಣೆ ಸಿಕ್ಕಿತ್ತು. ಗೂಗಲ್‌ನಲ್ಲಿ ಕನ್ನಡ ಕೊಂಡಿಗಳು ಸೇರಿಕೊಂಡರೂ, ನಕ್ಷೆಗೆ ಪ್ರಾಧಾನ್ಯತೆ ಸಿಕ್ಕಿರಲಿಲ್ಲ.
ಸಹಿ ಚಳವಳಿಗೆ ಮಣಿದ ಗೂಗಲ್: ಈ ವರ್ಷದ ಆರಂಭದಲ್ಲಿಯೇ ಚೇಂಜ್.ಆರ್ಗ್ ವತಿಯಿಂದ ಗೂಗಲ್ ನಕ್ಷೆಯಲ್ಲಿ ಕನ್ನಡ ಭಾಷೆಗೆ ಮಾನ್ಯತೆ ನೀಡುವಂತೆ ಆನ್‌ಲೈನ್ ಸಹಿ ಚಳವಳಿ ನಡೆದಿತ್ತು. ನಕ್ಷೆಯಲ್ಲಿ ಕನ್ನಡದ ಅಗತ್ಯತೆ ಕುರಿತು ಕನ್ನಡ ಗ್ರಾಹಕರ ಕೂಟ ಕೂಡ ಗೂಗಲ್‌ನ ಗಮನಕ್ಕೆ ತಂದಿತ್ತು. ಕೊನೆಗೂ ಈ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ.
ದೋಷಗಳ ಕೊಡುಗೆ!: ನಕ್ಷೆಯಲ್ಲಿ ಕನ್ನಡವೇನೋ ಸೇರಿದೆ ಸರಿ, ಆದರೆ ಅಲ್ಲಿನ ಅಕ್ಷರ ತಪ್ಪುಗಳು ಭಾಷಾ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಮಕೂರ, ಹೆಬ್ರೆ, ಬಜೆಗೊಲಿ, ಯದಮರಣಹಳ್ಳಿ, ಮಸ್ತಿ, ರಮಸಮುದ್ರಂ, ಕೊಡಿಹಳ್ಳಿ, ಮಲಗಿ, ಅಕ್ಕಿ ಅಳುರ್, ಮತ್ತೂದು, ಬೇಗುರ್, ಕಡಿರಿಹಳ್ಳಿ, ಬಲೆಹೊನ್ನುರ್, ಗೊರುರ್… ಹೀಗೆ ಅಕ್ಷರ ತಪ್ಪುಗಳ ದೊಡ್ಡ ಪಟ್ಟಿ ಇಲ್ಲಿ ಸಿಗುತ್ತದೆ. “ಗೂಗಲ್ ಭಾಷಾಂತರದ ಪ್ರಮಾದ ಇದಾಗಿರಬಹುದು. ಮೊದಲ ಆವೃತ್ತಿಯಾದ್ದರಿಂದ ಕೆಲವು ತಪ್ಪುಗಳು ಕಂಡುಬಂದಿವೆ. ಹೆಚ್ಚು
ಕನ್ನಡಿಗರು ಬಳಸಿ, ಈ ಬಗ್ಗೆ ಅಗತ್ಯ ಸಲಹೆ ಕೊಡುವ ಮೂಲಕ ಗೂಗಲ್ ಈ ಪ್ರಮಾದವನ್ನು ಸರಿಪಡಿಸಿಕೊಳ್ಳಲಿದೆ’ ಎನ್ನುತ್ತಾರೆ, ಗೂಗಲ್ ನಕ್ಷೆಯ ರೀತಿ ವೇಝ್ ದಿಕ್ಸೂಚಿ ರಚಿಸಿರುವ ಸುಹ್ರುತಾ ಯಜಮಾನ್.
ಗೂಗಲ್ ನಕ್ಷೆ ಕನ್ನಡದಲ್ಲಿ ಬಂದಿರುವುದು ಒಳ್ಳೆಯ ಬೆಳವಣಿಗೆ. ಸದ್ಯದ ನಕ್ಷೆಯಲ್ಲಿ ಆಗಿರುವ ಪ್ರಮಾದಗಳನ್ನು ಗೂಗಲ್ ಆದಷ್ಟು ಬೇಗ ತಿದ್ದಿಕೊಳ್ಳಲಿ.
●ಸುಹ್ರುತಾ ಯಜಮಾನ್, ಕನ್ನಡ ಗ್ರಾಹಕರ ಕೂಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.