Karnataka: ಕೊನೆಗೂ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಅಸ್ತು!

8 ಸಾವಿರ ಕೋ.ರೂ. ವೆಚ್ಚದ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ

Team Udayavani, Jan 29, 2025, 7:25 AM IST

ಕೊನೆಗೂ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಅಸ್ತು!

ಬೆಂಗಳೂರು: ದೇಶದ ಅತಿದೊಡ್ಡ “ಶರಾವತಿ ಪಂಪ್ಡ್ ಸ್ಟೋರೇಜ್‌’ ಯೋಜನೆಗೆ ಮಂಗಳವಾರ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಕೇಂದ್ರದ ಅನುಮತಿಗಾಗಿ ರಾಜ್ಯದಿಂದ ಈ ಸಂಬಂಧದ ಪ್ರಸ್ತಾವನೆ ಹೋಗಲಿದೆ.

ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ, ವಿಧಾನ ಪರಿಷತ್ತಿನ ಸದಸ್ಯರಾದ ನಸೀರ್‌ ಅಹಮದ್‌, ಪುಟ್ಟಣ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ನಡೆದ ಸುದೀರ್ಘ‌ ಚರ್ಚೆಯಲ್ಲಿ ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಕೈಗೆತ್ತಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು. ಇದರೊಂದಿಗೆ ಪಶ್ಚಿಮಘಟ್ಟ ಮತ್ತು ಶರಾವತಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಬರುವ ಈ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ.

2 ಸಾವಿರ ಮೆಗಾವಾಟ್‌ ಸಾಮರ್ಥ್ಯದ ಸ್ಥಾವರ :
ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಅನುಷ್ಠಾನಗೊಳಿಸಲು ಉದ್ದೇಶಿಸಿರುವ “ಶರಾವತಿ ಪಂಪ್ಡ್ ಸ್ಟೋರೇಜ್‌’ ಯೋಜನೆಯು ಅಂದಾಜು 8,005 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಯೋಚಿಸಲಾಗಿದೆ. ಯೋಜನೆ ಅಡಿ ತಲಾ 250 ಮೆ.ವಾ.ನಂತೆ ಎಂಟು ವಿದ್ಯುತ್‌ ಉತ್ಪಾದನಾ ಘಟಕಗಳು ಸೇರಿ ಒಟ್ಟು ಎರಡು ಸಾವಿರ ಮೆ.ವಾ. ಸಾಮರ್ಥ್ಯದ ಸ್ಥಾವರ ತಲೆಯೆತ್ತಲಿದೆ.

ಪರಿಸರವಾದಿಗಳ ತೀವ್ರ ವಿರೋಧ :
ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯಭಾಗದಲ್ಲಿ ಯೋಜನೆ ಅನುಷ್ಠಾನಕ್ಕೆ ತರುವ ಪ್ರಸ್ತಾವ ಇದೆ. ಇದಕ್ಕಾಗಿ ಹಲವು ಕಿ.ಮೀ. ಉದ್ದದ ಸುರಂಗಗಳನ್ನು ಕೊರೆದು, ನಿರ್ಮಿಸಲಿರುವ ಈ ಯೋಜನೆ ಜಾರಿಗೆ ಸ್ಥಳೀಯ ಪರಿಸರವಾದಿಗಳ ತೀವ್ರ ವಿರೋಧವೂ ಇದೆ.

ಶರಾವತಿ ಪಂಪ್ಡ್ ಸ್ಟೋರೇಜ್‌ ನಿರ್ಮಿಸುವ ಸಂಬಂಧಿಸಿದ ಸಮಗ್ರ ಯೋಜನಾ ವರದಿ (ಡಿಪಿಆರ್‌)ಗೆ ಕಳೆದ ಆಗಸ್ಟ್‌ನಲ್ಲಿ ಕೇಂದ್ರ ವಿದ್ಯುತ್‌ ಪ್ರಾಧಿಕಾರ ಅನುಮೋದನೆ ನೀಡಿತ್ತು. ಇದಕ್ಕೆ ಈಗ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ಆವಶ್ಯಕತೆ ಇತ್ತು. ಸಭೆಯಲ್ಲಿ ಅನುಮತಿ ದೊರಕಿದ್ದು, ಮುಂದಿನ ಹಂತದಲ್ಲಿ ಕೇಂದ್ರದ ಪರಿಸರ ಮತ್ತು ವನ್ಯಜೀವಿ ಮಂಡಳಿ ಅನುಮೋದನೆಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಅಂದಹಾಗೆ ಇದೇ ಕಾಂಗ್ರೆಸ್‌ ಸರ್ಕಾರದ ಈ ಹಿಂದಿನ ಅವಧಿಯಲ್ಲಿ ಯೋಜನೆ ಪ್ರಸ್ತಾವ ಇತ್ತು. ಆಗ ಡಿ.ಕೆ. ಶಿವಕುಮಾರ್‌ ಇಂಧನ ಸಚಿವರಾಗಿದ್ದರು. ತದನಂತರ 2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ನೀಡಲಾಗಿತ್ತು.

ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವುದೇ ರೀತಿ ಹಾನಿ ಆಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ಅನುಷ್ಠಾನಗೊಳಿಸಲು ಸಿಎಂ ನೇತೃತ್ವದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿದೆ. ಮುಂದಿನ ಹಂತದಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಲಿದೆ.
– ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

ಟಾಪ್ ನ್ಯೂಸ್

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Delhi-BJp

Setback: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್‌..ಆಪ್‌ನ 3 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

Maharashtra: ಲವ್‌ ಜೆಹಾದ್‌ ವಿರುದ್ಧ ಕಾನೂನಿಗೆ ಮಹಾ ಸಜ್ಜು

Maharashtra: ಲವ್‌ ಜೆಹಾದ್‌ ವಿರುದ್ಧ ಕಾನೂನಿಗೆ ಮಹಾ ಸಜ್ಜು

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

Sheesh Mahal row: ಕೇಜ್ರಿಗೆ ಸಂಕಷ್ಟ… ಶೀಷಮಹಲ್‌ ಅಕ್ರಮ ತನಿಖೆಗೆ ಸಿವಿಸಿ ಆದೇಶ

Sheesh Mahal row: ಕೇಜ್ರಿಗೆ ಸಂಕಷ್ಟ… ಶೀಷಮಹಲ್‌ ಅಕ್ರಮ ತನಿಖೆಗೆ ಸಿವಿಸಿ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Ashwin Vaishnav

Bengaluru; ನಗರದಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ: ಅಶ್ವಿನಿ ವೈಷ್ಣವ್

MUST WATCH

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

ಹೊಸ ಸೇರ್ಪಡೆ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Delhi-BJp

Setback: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್‌..ಆಪ್‌ನ 3 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.