ಲೋಕಾಯುಕ್ತ, ಎಸಿಬಿಯಿಂದ ಆರ್ಥಿಕ ಹೊರೆ: ಎಸಿಬಿ, ಲೋಕಾಯುಕ್ತ ಸಿಬಂದಿಗೆ ಕೆಲಸವೇ ಇಲ್ಲ
ಸರಕಾರಕ್ಕೆ 126 ಕೋ.ರೂ. ನಷ್ಟ
Team Udayavani, Jul 16, 2022, 6:45 AM IST
ಬೆಂಗಳೂರು: ಬಿಳಿ ಆನೆಗಳಂತಾಗಿರುವ ಲೋಕಾಯುಕ್ತ ಮತ್ತು ಎಸಿಬಿ ತನಿಖಾ ಸಂಸ್ಥೆಗಳಿಂದ ಸರಕಾರಕ್ಕೆ ವಾರ್ಷಿಕವಾಗಿ 126 ಕೋಟಿ ರೂ. ಆರ್ಥಿಕ ಹೊರೆಯಾಗುತ್ತಿದೆ.
ಲೋಕಾಯುಕ್ತ ಹಾಗೂ ಎಸಿಬಿ ಸಂಸ್ಥೆಯ ಸಿಬಂದಿಯ ವೇತನ, ಕಾರ್ಯ ನಿರ್ವಹಣೆಗಾಗಿ ಸರಕಾರ ಇಷ್ಟು ಮೊತ್ತ ವ್ಯಯಿಸಿದರೂ ಪ್ರತಿಫಲ ಶೂನ್ಯ. ಭ್ರಷ್ಟರನ್ನು ಮಟ್ಟಹಾಕಲು ಹುಟ್ಟಿಕೊಂಡ ಈ ಎರಡು ತನಿಖಾ ಸಂಸ್ಥೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬಂದಿಯಿದ್ದು, ಮಾಡಲು ಕೆಲಸ ಇಲ್ಲದಂತಾಗಿದೆ.
ಲೋಕಾಯುಕ್ತದಲ್ಲಿ ರಾಜ್ಯಾದ್ಯಂತ 1,403 ಹುದ್ದೆಗಳಿದ್ದು, ಲೋಕಾಯುಕ್ತರು ಸಹಿತ 982 ನೌಕರರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. 112 ಮಂದಿ ಎ-ದರ್ಜೆಯ ಅಧಿಕಾರಿಗಳು, 88 ಬಿ-ದರ್ಜೆ, 665 ಸಿ-ದರ್ಜೆ ಹಾಗೂ ಡಿ-ದರ್ಜೆಯ 117 ಸಿಬಂದಿಯಿದ್ದಾರೆ. ಇಲ್ಲಿನ ಸಿಬಂದಿ ವೇತನ ಹಾಗೂ ಇನ್ನಿತರ ನಿರ್ವಹಣೆಗಾಗಿ ಸರಕಾರವು ವಾರ್ಷಿಕ ಸರಾಸರಿ 69 ಕೋಟಿ ರೂ. ಮೀಸಲಿಡುತ್ತಿದೆ. ಈ ಸಂಸ್ಥೆಯ ಪೊಲೀಸ್ ವಿಭಾಗವು ತನ್ನ ಅಧಿಕಾರ ಕಳೆದುಕೊಂಡ ಬಳಿಕ ಸಿಬಂದಿಗೆ ಮಾಡಲು ಕೆಲಸ ಇಲ್ಲದಂತಾಗಿದೆ.
ಇನ್ನು ಎಸಿಬಿ ಸಂಸ್ಥೆ ದಾಳಿ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಸಣ್ಣಪುಟ್ಟ ಟ್ರ್ಯಾಪ್ ಕೇಸ್‌ಗಳಲ್ಲಿ ಕೇವಲ ಶೇ.3ರಷ್ಟು ಪ್ರಮಾಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಉಳಿದಂತೆ ದೊಡ್ಡ ಭ್ರಷ್ಟರ ಮೇಲೆ ನಡೆಸಿದ ಬಹುತೇಕ ದಾಳಿ ಕೇಸ್‌ಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗುತ್ತಿವೆ.
57 ಕೋಟಿ ರೂ. ವ್ಯರ್ಥ
ಎಸಿಬಿಯಲ್ಲಿ ಸುಮಾರು 350ಕ್ಕೂ ಹೆಚ್ಚಿನ ಸಿಬಂದಿ ಇದ್ದಾರೆ. ಇಲ್ಲಿನ ನೌಕರರ ವೇತನ ಹಾಗೂ ನಿರ್ವಹಣೆಗಾಗಿ ವಾರ್ಷಿಕವಾಗಿ ಅಂದಾಜು 57 ಕೋಟಿ ರೂ.ಗಳನ್ನು ಸರಕಾರ ವ್ಯಯಿಸುತ್ತದೆ. ಬೆಂಗಳೂರಿನಲ್ಲಿರುವ ಖನಿಜ ಭವನದ ಕಟ್ಟಡಕ್ಕೆ ತಿಂಗಳಿಗೆ 18 ಲಕ್ಷ ರೂ. ಬಾಡಿಗೆ ಪಾವತಿಯಾಗುತ್ತಿದೆ. ಎಸಿಬಿಯು ಡಿ.ಪಿ.ಎ.ಆರ್. ವಿಭಾಗದ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿ ಎಸಿಬಿ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿಗೆ ಆಡಳಿತಾತ್ಮಕ ವಿಷಯಗಳಲ್ಲಿ ಸಹಕರಿಸಲು ಓರ್ವ ಐಜಿಪಿ ಅಧಿಕಾರಿ ಇರುತ್ತಾರೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳಿದ್ದರೆ, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ 1 ಎಸ್‌ಪಿ, 1 ಡಿವೈಎಸ್‌ಪಿ ಹಾಗೂ 2 ಇನ್‌ಸ್ಪೆಕ್ಟರ್‌ಗಳಿದ್ದಾರೆ. ಇದಲ್ಲದೆ, ಸಬ್ ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್, ಎಂಜಿನಿಯರ್, ತಹಶೀಲ್ದಾರರು ಹಾಗೂ ಆರ್ಥಿಕ ಅಧಿಕಾರಿಗಳಿದ್ದಾರೆ. ಕೆಲವು ದಾಳಿ ಪ್ರಕರಣದ ತನಿಖೆ ನಡೆಸುವುದು ಬಿಟ್ಟರೆ ಇವರಿಗೆ ಉಳಿದ ಸಮಯದಲ್ಲಿ ಕೆಲಸವೇ ಇಲ್ಲದಂತಾಗಿದೆ.
ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ನಡೆಯುತ್ತಿರುವ ತನಿಖೆಯ ವಿವರ ಹಾಗೂ ಇನ್ನಿತರ ಮಾಹಿತಿಗಳನ್ನು ಲೋಕಾಯುಕ್ತರಿಗೆ ನೀಡುತ್ತಿದ್ದೇವೆ. ಲೋಕಾಯುಕ್ತ ಪೊಲೀಸರು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ.
– ಪ್ರಶಾಂತ್ ಕುಮಾರ್ ಠಾಕೂರ್,
ಎಡಿಜಿಪಿ, ಲೋಕಾಯುಕ್ತ ಪೊಲೀಸ್ ವಿಭಾಗ.
– ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.