ಹುಲಿ ಓಡಿಸಲು ಬಂಡೀಪುರ ಅರಣ್ಯಕ್ಕೆ ಬೆಂಕಿ ಇಟ್ಟರು!
Team Udayavani, Mar 3, 2019, 12:30 AM IST
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿಯಿಟ್ಟಿದ್ದ ಮತ್ತಿಬ್ಬರು ಆರೋಪಿಗಳನ್ನು ಅರಣ್ಯ
ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು, ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಓಡಿಸಲು ತಾವು ಕಾಡಿಗೆ ಬೆಂಕಿ ಹಚ್ಚಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ತಾಲೂಕಿನ ಚೌಡಹಳ್ಳಿಯ ಹನುಮಂತಯ್ಯ (70) ಹಾಗೂ ಗೋಪಯ್ಯ (60) ಎಂಬ ಕುರಿಗಾಹಿಗಳು ಬಂಧಿತರು. 15 ದಿನಗಳ ಹಿಂದೆ ಗ್ರಾಮದ ಕುಮಾರ್ ಎಂಬುವರ ಬಾಳೆಯ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿತ್ತು.
ನಂತರ, ಗ್ರಾಮ ಸಮೀಪದ ಹಳ್ಳದಲ್ಲಿ ಅಡಗಿ ಸಾಕುಪ್ರಾಣಿಗಳನ್ನು ಕೊಂದು ಹಾಕುತ್ತಿದೆ ಎಂಬ ವದಂತಿ
ಹರಡಿತ್ತು. ರೊಚ್ಚಿಗೆದ್ದ ಇವರು ಸಮೀಪದ ಕುಂದಕೆರೆವಲಯದ ಅರಣ್ಯಕ್ಕೆ ಬೆಂಕಿ ಇಟ್ಟಿದ್ದರು. ಪ್ರಕರಣಕ್ಕೆ
ಸಂಬಂಧಪಟ್ಟಂತೆ ಮೂವರನ್ನು ಬಂಧಿಸಿದಂತಾಗಿದೆ.
ಬೆಂಕಿ ಅವಘಡ ತಪ್ಪಿಸಲು ಆಧುನಿಕ ತಂತ್ರಜ್ಞಾನ
ಬೆಳಗಾವಿ: ಬಂಡೀಪುರ ಅರಣ್ಯದ ಬೆಂಕಿ ಅವಘಡ ಹಿನ್ನೆಲೆಯಲ್ಲಿ ಮುಂದೆ ಇಂತಹ ಅನಾಹುತ ತಪ್ಪಿಸಲು ಅರಣ್ಯದಲ್ಲಿ ಸೆಟ್‌ಲೈಟ್ ನಿಯಂತ್ರಿತ ಸ್ಮೋಕ್‌ಡಿಟೆಕ್ಟರ್ ಕ್ಯಾಮರಾ ಅಳವಡಿಕೆ ಮಾಡಲಾಗುವುದು ಎಂದು ಪರಿಸರ, ಜೈವಿಕ ಸಚಿವ ಸತೀಶ ಜಾರಕಿ ಹೊಳಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಆಧುನಿಕ ತಂತ್ರಜ್ಞಾನ ಬಳಕೆ ಮಾಡುವುದರಿಂದ ಇಂಥ ಅವಘಡ ತಪ್ಪಿಸಬಹುದಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಸ್ತಾವ ಇದ್ದು, ಕೂಡಲೇ ಇದನ್ನು ಅಳವಡಿಸ ಲಾಗುವುದು ಎಂದರು. ಅರಣ್ಯದಲ್ಲಿ ಹನಿ ನೀರಾವರಿ ತಂತ್ರಜ್ಞಾನ ಬಳಸಿ ಗಿಡಗಳನ್ನು ಬೆಳೆಸಲಾಗುವುದು. ರಾಜ್ಯದ 5 ವಲಯದಲ್ಲಿ ಸ್ಥಳ ಗುರುತಿಸಲಾಗುತ್ತಿದೆ. ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.