ಸಿಂಧನೂರು ಬಳಿ ಅಪಘಾತ: ಐವರ ಸಾವು
Team Udayavani, Oct 1, 2017, 7:10 AM IST
ಸಿಂಧನೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹೊರವಲಯದ ಏಳುರಾಗಿ ಕ್ಯಾಂಪ್ ಕ್ರಾಸ್ ಬಳಿ ಶನಿವಾರ ಟಂಟಂ ರಿಕ್ಷಾ – ಐಷರ್ ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಹಿತ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಂದೇ ಕುಟುಂಬಕ್ಕೆ ಸೇರಿದ ಶಾಮೀದ್‌ಸಾಬ ಸಬjಲಿಸಾಬ (35), ಸಬjಲಿಸಾಬ ರಂಜಾನಸಾಬ (40), ಖಾಜಮ್ಮ ಸಬjಲಿಸಾಬ (65), ಲಾಲಬಿ ಸಬjಲಿಸಾಬ (12) ಹಾಗೂ ಈರಯ್ಯಸ್ವಾಮಿ ಸಣ್ಣಯ್ಯಸ್ವಾಮಿ (45) ಮೃತರು. ಇವರೆಲ್ಲ ಬೂತಲದಿನ್ನಿ ಕ್ಯಾಂಪ್ ನಿವಾಸಿಗಳು. ಐಷರ್ ಮಿನಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮೊಹರಂ ಸಂತೆಗಾಗಿ ಸಿಂಧನೂರಿಗೆ ಆಗಮಿಸಿದ್ದ ಇವರು, ಸಂತೆ ಮುಗಿಸಿಕೊಂಡು ಮರಳಿ ಟಂಟಂ ರಿಕ್ಷಾದಲ್ಲಿ ಗ್ರಾಮಕ್ಕೆ ತೆರಳುವಾಗ ಏಳುರಾಗಿ ಕ್ಯಾಂಪ್ ಬಳಿ ಮಸ್ಕಿಯಿಂದ ವೇಗವಾಗಿ ಬರುತ್ತಿದ್ದ ಐಷರ್ ಮಿನಿ ಲಾರಿ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ಟಂಟಂ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲೇ ಶವಗಳು ಸಿಕ್ಕಿಹಾಕಿಕೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.