![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Oct 16, 2017, 10:59 AM IST
ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮತ್ತೆ ಐವರು ಬಲಿಯಾಗಿದ್ದಾರೆ. ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್‌ನಲ್ಲಿ ಭಾನುವಾರ ಬೆಳಗ್ಗೆ 7.30ಕ್ಕೆ ಬಹಿರ್ದೆಸೆಗೆ ಹೋಗಿದ್ದ ನರಸಮ್ಮ (18) ಎಂಬುವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ.
ಹಾಸನ ಜಿಲ್ಲೆ ಜಾವಗಲ್ ಸಮೀಪದ ನಾಗೇನ ಹಳ್ಳಿಯಲ್ಲಿ ಸಿಡಿಲು ಬಡಿದು ಯಮುನಾ (23) ಎಂಬುವರು ಮೃತಪಟ್ಟಿದ್ದಾರೆ. ಜಮೀನಿನಿಂದ ಮನೆಗೆ ಮರಳುವ ವೇಳೆ ಸಿಡಿಲು ಬಡಿಯಿತು. ಕೋಲಾರ ಜಿಲ್ಲೆ ಮಾಲೂರಿನ ರೈಲ್ವೆ ಪೀಡರ್ ರಸ್ತೆಯಲ್ಲಿ ನರೇಂದ್ರ ರಾವ್ (35) ಎಂಬುವರು ಚರಂಡಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಮಾಲೂರು ತಾಲೂಕಿನ ಹಳಕೆಂಪನಹಳ್ಳಿಯಲ್ಲಿ ಮನೆ ಕುಸಿದು ಬಿದ್ದು ತಿಪ್ಪಣ್ಣ (65) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವೆಂಕಟೇಶಪ್ಪ ಎಂಬುವರು ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮುಕರಂಬಾ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಶಂಕರೆಪ್ಪ ಶರಣಪ್ಪ ಚೆಂಗಟಾ ಕಬ್ಬಲಿಗ (48) ಎಂಬುವರು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿಯಲ್ಲಿ ಮಳೆಗೆ ಎಂಟು ಮನೆಗಳು ಕುಸಿದು ಬಿದ್ದಿದ್ದು, ನಾಲ್ವರು ಗಾಯ ಗೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿ ಸಿಡಿಲು ಬಡಿದು 13 ಕುರಿಗಳು ಮೃತಪಟ್ಟಿವೆ. ಬೀದರ್ ಜಿಲ್ಲೆ ಹುಮನಾಬಾದ ತಾಲೂಕಿನ ಮಾಡಗೊಳ ಹಾಗೂ ಮದರಗಿ ತಾಂಡಾದಲ್ಲಿ ಸಿಡಿಲು ಬಡಿದು 26 ಜಾನು ವಾರುಗಳು ಸಾವಿಗೀಡಾಗಿವೆ. ಮಳೆ ನೀರಿಗೆ
ರಾಯಚೂರಿನ ರಾಜಲಬಂಡಾ ಜಲಾಶ ಯದ ಕಾಲುವೆಗಳು ಒಡೆದು ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ದಿಬ್ಬ ಕುಸಿದು ವ್ಯಕ್ತಿಸಾವು, ಬಲೆಗೆ ಸಿಲುಕಿ ಇಬ್ಬರ ದುರ್ಮರಣ ರಾಮನಗರ: ಪ್ರತ್ಯೇಕ ಪ್ರಕರಣದಲ್ಲಿ ಮೂವರು ನೀರು ಪಾಲಾಗಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಅವರಗೆರೆ ಗ್ರಾಮದ ಉಮೇಶ್ (31), ರವಿಕುಮಾರ್ (19) ನಲ್ಲಿಗುಡ್ಡೆ ಕೆರೆಯಲ್ಲಿ ತೆಪ್ಪದ ಮೂಲಕ ತೆರಳಿ ಮೀನು ಹಿಡಿಯಲು ಬಲೆ ಬೀಸಿದ್ದಾರೆ. ಇದೇ ವೇಳೆ ತೆಪ್ಪ ಮಗುಚಿದ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಅವರ ದೇಹ ಬಲೆಗೆ ಸಿಲುಕಿದ್ದರಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಅಗ್ನಿ ಶಾಮಕದಳ ಸಿಬ್ಬಂದಿ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಮಣ್ಣಿನ ದಿಬ್ಬ ಕುಸಿದು ದುರಂತ: ಹರಿಯುತ್ತಿದ್ದ ನೀರಿನ ಫೋಟೋ ತೆಗೆಯಲು ತೆರಳಿದ್ದ ನಂದೀಶ್ (38) ಮಣ್ಣಿನ ದಿಬ್ಬ ಕುಸಿದು ನೀರು ಪಾಲಾದರೆ. ಇದೇ ವೇಳೆ ಮೃತನ ಸ್ನೇಹಿತರಿಬ್ಬರು ಸ್ಥಳೀಯರ ಸಹಾಯದಿಂದ ಬುದುಕುಳಿದಿದ್ದಾರೆ. ತಾಲೂಕಿನ ಅರಳೀಮರದ್ದದೊಡ್ಡಿಯ ನದಿ ಪಾತ್ರದಲ್ಲಿ ಮರಳು ದಂಧೆಯ ಪರಿಣಾಮ ದೊಡ್ಡ ಗಾತ್ರದ ಗುಂಡಿ ನಿರ್ಮಾಣವಾಗಿದೆ. ಗುಂಡಿಗಳಿಂದಾಗಿ
ನೀರು ಸರಾಗವಾಗಿ ಹರಿಯಲಾಗದೆ, ರಭಸ ಹೆಚ್ಚಾಗಿದ್ದರಿಂದ ನದಿ ಪಾತ್ರದ ಅಕ್ಕಪಕ್ಕದ ಭೂಮಿಯನ್ನು ಕೊರೆದಿದೆ. ಇದರ ಅರಿವಿಲ್ಲದ ನಂದೀಶ್ ಭಾನುವಾರ ದಿಬ್ಬವೊಂದರ ಮೇಲೆ ನಿಂತು ನೀರಿನ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಅದಾಗಲೇ ದಿಬ್ಬ ಕುಸಿದು ಅವರು ಮಣ್ಣಿನಡಿ ಸಿಲುಕಿದ್ದಾರೆ.
ಕೊಲ್ಲೂರಲ್ಲಿ ಅತಿ ಹೆಚ್ಚು ಮಳೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾನುವಾರ ಕೂಡ ಮಳೆ ಮುಂದುವರಿದಿದೆ. ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಅತಿಹೆಚ್ಚು 180 ಮಿಮೀ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಪ್ರಸ್ತುತ ಚಂಡ ಮಾರುತದ ಪರಿಚಲನೆ ಕಂಡು ಬಂದಿದ್ದು, ವಾಯುಭಾರ ಕುಸಿತಕ್ಕೆ ಕಾರಣವಾಗುವ ಸಾಧ್ಯತೆಗಳಿರುವುದ ರಿಂದ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಇನ್ನೂ ಮೂರ್‍ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಲ್. ರಮೇಶ್‌ಬಾಬು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.