ಪಿಸ್ತೂಲ್ ತೋರಿಸಿ ಐವರು ಗ್ರಾಪಂ ಸದಸ್ಯರು ಸೇರಿ 7 ಜನರ ಅಪಹರಣ
Team Udayavani, Jan 1, 2018, 9:28 AM IST
ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಕಿಷ್ಕಿಂದ ವಾಲೀಕಿಲ್ಲಾದ ಆದಿಶಕ್ತಿ ದೇವಾಲಯದ ಹತ್ತಿರ
ಭಾನುವಾರ ಬೆಳಗಿನ ಜಾವ ಪ್ರವಾಸಕ್ಕೆ ಆಗಮಿಸಿದ್ದ ಗ್ರಾಪಂ ಸದಸ್ಯರಿಗೆ ಪಿಸ್ತೂಲ್ ತೋರಿಸಿ ಐವರು ಸದಸ್ಯರೂ ಸೇರಿ 7
ಜನರನ್ನು ವಾಹನ ಸಮೇತ ಅಪಹರಿಸಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೊಮ್ಮನಳ್ಳಿ ಗ್ರಾಮ ಪಂಚಾಯಿತಿ
ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ.
ಬೊಮ್ಮನಳ್ಳಿ ಗ್ರಾಪಂನ ಮೂರನೇ ಅವಧಿಗೆ ಅಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಮ್ಮ ಗುರಣ್ಣ ಹವಣಗಿ ನೇತೃತ್ವದಲ್ಲಿ 7 ಜನ ಸದಸ್ಯರು ಮೂರು ವಾಹನಗಳಲ್ಲಿ ಹಂಪಿ, ಕಿಷ್ಕಿಂದ, ಅಂಜನಾದ್ರಿಬೆಟ್ಟದ ಪ್ರವಾಸಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಆನೆಗೊಂದಿ ಕಿಷ್ಕಿಂದಾ ವಾಲೀಕಿಲ್ಲಾ ಆದಿಶಕ್ತಿ ದರ್ಶನ ಮಾಡಿ ಮಲಗಿದ್ದ ವೇಳೆ ಬೆಳಗಿನ ಜಾವ 2.30ರ ಸುಮಾರಿಗೆ ಗುಂದಗಿ ಗ್ರಾಮದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯ ಪತಿ ಸೇರಿ ಐವರು ಪಿಸ್ತೂಲ್ ತೋರಿಸಿ ಕ್ರೂಸರ್ ವಾಹನದಲ್ಲಿ ಇವರನ್ನು ಕರೆದೊಯ್ದರು. ಶಿವಮ್ಮ ಗುರಣ್ಣ ಹಾವಳಗಿ (38), ಶರಣಮ್ಮ ಶರಣೇಗೌಡ ಬೀರಾದಾರ್(62), ಶ್ರೀದೇವಿ ಮಹಾದೇವಪ್ಪ
ಪೂಜಾರಿ(40), ಶಶಿಕಲಾ ಶಿವಣ್ಣ ದೊಡ್ಮನಿ(25), ಶಿವಣ್ಣ ದೊಡ್ಮನಿ(28) ಹಾಗೂ ಮೂರು ಜನ ಮಕ್ಕಳನ್ನು ಅಪಹರಿಸಲಾಗಿದೆ. ಬಳಿಕ, ಕ್ರೂಸರ್ ಚಾಲಕ ಬಸವರಾಜ ಕೊಂಡಗೂಳಿ ಎಂಬಾತನನ್ನು ತಾಲೂಕಿನ ಹೇರೂರು ಹತ್ತಿರ ಪಿಸ್ತೂಲ್ ತೋರಿಸಿ ಕೆಳಗಿಳಿಸಿದ್ದಾರೆ. ಅಪಹರಣಕ್ಕೆ ಸಂಬಂಧಿ ಸಿದಂತೆ ಬೊಮ್ಮನಳ್ಳಿ ಚಂದ್ರಕಾಂತ ಶರಣ್ಣ ಸಗರ ಇತರರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ.
ಹಿನೆಲೆ ಏನು?: 17 ಸದಸ್ಯ ಬಲದ ಬೊಮ್ಮನಳ್ಳಿ ಗ್ರಾಪಂ ಅಧ್ಯಕ್ಷೆಯಾಗಿದ್ದ ಗಂಗೂಬಾಯಿ ಮಾಶ್ಯಾಳ ಎಂಬುವರು ರಾಜೀನಾಮೆ ನೀಡಿದ್ದು, ಇದರಿಂದ ತೆರ ವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಗುರಪ್ಪ ಹಾವಳಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 7 ಜನ ಸದಸ್ಯರೊಂದಿಗೆ ಅವರು ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಪ್ರವಾಸ ಮಾಡಿ ಶನಿರಾತ್ರಿ ಆದಿಶಕ್ತಿ ದೇವಾಲಯದಲ್ಲಿ ತಂಗಿದ್ದರು. ಎದು ರಾಳಿ ಗುಂಪಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯ ಪತಿ ಮಲ್ಲನ ಗೌಡ ಪಾಟೀಲ ಕಟ್ಟಿ ಹಾಗೂ ಗುಂಪಿನ ಸದಸ್ಯರು ಶನಿರಾತ್ರಿ
ಆನೆಗೊಂದಿಗೆ ಆಗಮಿಸಿ ಕ್ರೂಸರ್‌ನಲ್ಲಿ ಮಲಗಿದ್ದ 7 ಜನರನ್ನು ಪಿಸ್ತೂಲ್ ತೋರಿಸಿ ಅಪಹರಣ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.