5 ರಾಜ್ಯಗಳಲ್ಲಿ 5 ಸಾವಿರ ಡೋಸ್ ಲಸಿಕೆ ವೇಸ್ಟ್!
Team Udayavani, Jan 30, 2021, 10:09 AM IST
ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾ ದಾಗಿನಿಂದ ಈವರೆಗೆ ಅಂದರೆ ಜ.16ರಿಂದ 29ರವರೆಗೆ 5 ರಾಜ್ಯಗಳಲ್ಲಿ ಸುಮಾರು 5 ಸಾವಿರ ಡೋಸ್ ಗಳಷ್ಟು ಲಸಿಕೆ ವ್ಯರ್ಥವಾಗಿ ಹೋಗಿದೆ. ಈ ಪೈಕಿ ತ್ರಿಪುರಾ ಮೊದಲ ಸ್ಥಾನದಲ್ಲಿದ್ದು ಇಲ್ಲಿ ಶೇ.11ರಷ್ಟು ಲಸಿಕೆ ವೇಸ್ಟ್ ಆಗಿದೆ ಎಂದು ಹಿಂದುಸ್ತಾನ್ ಟೈಮ್ಸ್‌ನ ವರದಿ ತಿಳಿಸಿದೆ.
ಲಸಿಕೆಯ ಒಂದು ಸೀಸೆ ತೆರೆದರೆ, ಅದನ್ನು 4 ಗಂಟೆಗಳ ಒಳಗಾಗಿ ಬಳಸಬೇಕು. ತದ ನಂತರ ಬಳಸುವಂತಿಲ್ಲ. ಆದರೆ, ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾದ ಕಾರಣ, ಸೀಸೆಯಲ್ಲಿರುವ ಹನಿಗಳು ಖಾಲಿಯಾಗುತ್ತಿಲ್ಲ. ಹೀಗಾಗಿ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ವೇಸ್ಟ್ ಆಗುತ್ತಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:4 ಲಕ್ಷದತ್ತ ರಾಜಧಾನಿ ಕೊರೊನಾ ಕೇಸ್: ರಾಜ್ಯದ ಅರ್ಧದಷ್ಟು ಪ್ರಕರಣಗಳು ರಾಜಧಾನಿಯಲ್ಲಿ ಪತ್ತೆ
ಕೆಲವು ಕಡೆ ಅಧಿಕಾರಿಗಳು ನಿಗದಿತ ವ್ಯಕ್ತಿಗಳ ಹೊರತಾಗಿ ಇತರರನ್ನೂ ಕರೆದು ಲಸಿಕೆ ವಿತರಿಸುವ ಮೂಲಕ ವ್ಯರ್ಥವಾಗುವುದನ್ನು ತಡೆಯುತ್ತಿದ್ದಾರೆ. ಅನೇ ಕರು ಲಸಿಕೆ ಪಡೆಯುಲು ಹಿಂಜರಿಯುತ್ತಿದ್ದು, ಪ್ರತಿ 100 ಮಂದಿಯ ಪೈಕಿ ಕೇವಲ 55 ಮಂದಿ ಮಾತ್ರ ಲಸಿಕೆ ಪಡೆಯುತ್ತಿದ್ದಾರೆ ಎಂದೂ ವರದಿ ಹೇಳಿದೆ.
ಇನ್ನು, ಜಾರ್ಖಂಡ್, ಆಂಧ್ರ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ ಮತ್ತು ಛತ್ತೀಸ್‌ಗಡದಲ್ಲಿ ಲಸಿಕೆ ವ್ಯರ್ಥವಾಗಿಲ್ಲ ಎಂದು ಈ ರಾಜ್ಯ ಗಳ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ, ಗುರುವಾರದಿಂದ ಶುಕ್ರವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 18,855 ಮಂದಿಗೆ ಸೋಂಕು ದೃಢಪಟ್ಟಿದೆ.
ಲಂಕಾದಲ್ಲಿ ವಿತರಣೆ ಆರಂಭ: ಶ್ರೀಲಂಕಾದಲ್ಲಿ ಶುಕ್ರವಾರ ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭವಾಗಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಯೋಧರು, ಭದ್ರತಾ ಸಿಬ್ಬಂದಿಗೆ ಆರಂಭದಲ್ಲಿ ಲಸಿಕೆ ನೀಡಲಾಗುತ್ತದೆ. ಭಾರತವು ಲಂಕೆಗೆ 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಕಳುಹಿಸಿದ ಬೆನ್ನಲ್ಲೇ ವಿತರಣೆ ಪ್ರಕ್ರಿಯೆ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.