ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ- ಮೋಸ ಸರಿಪಡಿಸಿ: ಸಿಎಂ ಗೆ ನಿರಾಶ್ರಿತ ಕುಟುಂಬಗಳ ಮನವಿ

Team Udayavani, Oct 21, 2023, 2:41 PM IST

ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ- ಮೋಸ ಸರಿಪಡಿಸಿ: ಸಿಎಂ ಗೆ ನಿರಾಶ್ರಿತ ಕುಟುಂಬಗಳ ಮನವಿ

ಬೆಂಗಳೂರು: ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆಯು ನಿರ್ಮಿಸುತ್ತಿರುವ ವಾಯುನೆಲೆಯನ್ನು ವಿಸ್ತರಿಸಿ, ಸಿವಿಲ್‌ ಎನ್‌ಕ್ಲೇವ್‌ ನಿರ್ಮಿಸುವ ಯೋಜನೆಗೆ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ನಿಗದಿಯಲ್ಲಿ ತಾರತಮ್ಯ ಆಗಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, 2013ರ ಭೂಸ್ವಾಧೀನ ಕಾಯ್ದೆಯನ್ವಯ ಇದನ್ನು ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅವರು ಇಂದು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ತಾರತಮ್ಯ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್‌ ಸೈಲ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.

ಬಿಜೆಪಿ ಸರ್ಕಾರ ಮಾಡಿದ ಅನ್ಯಾಯ ಮತ್ತು ಮೋಸ ಸರಿಪಡಿಸಿ ಎಂದು ಸಭೆಯಲ್ಲಿ ಮೂರು ಗ್ರಾಮಗಳ ನಿರಾಶ್ರಿತ ಕುಟುಂಬಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ  ಮುಖ್ಯಮಂತ್ರಿಗಳು ವೈಜ್ಞಾನಿಕವಾಗಿ, ನಿಯಮಬದ್ದವಾಗಿ ಪರಿಹಾರ ಕೊಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯ ಕಾರ್ಯದರ್ಶಿಗಳು ಮತ್ತು ಸಂಬಂಧಿಸಿದ ಇತರ ಹಿರಿಯ ಅಧಿಕಾರಿಗಳೊಂದಿಗೆ, ಭೂಸ್ವಾಧೀನ ಪರಿಹಾರ ನಿಗದಿ, ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವ ಕುರಿತು ಹಾಗೂ ಸೂಕ್ತ ನಿವೇಶನ ನೀಡುವ ಕುರಿತಂತೆ ಸಭೆ ನಡೆಸಿ ಚರ್ಚಿಸುವಂತೆ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲರಿಗೆ ಸೂಚಿಸಿದರು.

ಸೀಬರ್ಡ್‌ ಮೊದಲ ಹಂತದ ಯೋಜನೆಯಡಿ ಭೂಮಿ ಕಳೆದುಕೊಂಡವರ ಕುಟುಂಬದವರಿಗೂ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ್‌ ಸೈಲ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಿಯಾವುಲ್ಲಾ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್‌, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

army

Kashmir; ಉಗ್ರರಿಂದ ಗ್ರೆನೇಡ್‌, ಗುಂಡಿನ ದಾಳಿ: 5 ಯೋಧರು ಹುತಾತ್ಮ

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Eshwarappa

Shivamogga; ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ: ಈಶ್ವರಪ್ಪ

Parameshwar

Guarantee Schemeಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಗೃಹ ಸಚಿವ ಪರಮೇಶ್ವರ್‌

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Puttur ತಾಳಮದ್ದಳೆಯಿಂದ ಬುದ್ಧಿಗೆ ಗ್ರಾಸ: ಎಡನೀರು ಶ್ರೀ

Puttur ತಾಳಮದ್ದಳೆಯಿಂದ ಬುದ್ಧಿಗೆ ಗ್ರಾಸ: ಎಡನೀರು ಶ್ರೀ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

army

Kashmir; ಉಗ್ರರಿಂದ ಗ್ರೆನೇಡ್‌, ಗುಂಡಿನ ದಾಳಿ: 5 ಯೋಧರು ಹುತಾತ್ಮ

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.