ಜೆಟ್ ಏರ್‌ವೇಸ್‌ನಿಂದ ಬೆಂಗಳೂರು-ಅಮ್‌ಸ್ಟರ್‌ಡ್ಯಾಂಗೆ ವಿಮಾನ ಸೇವೆ
Team Udayavani, Oct 5, 2017, 10:05 AM IST
ಬೆಂಗಳೂರು: ಭಾರತದ ಪ್ರಮುಖ ವೈಮಾನಿಕ ಸಂಸ್ಥೆಯಾದ ಜೆಟ್ ಏರ್‌ವೇಸ್ ಬೆಂಗಳೂರು ಮತ್ತು ನೆದರ್ ಲ್ಯಾಂಡ್ ರಾಜಧಾನಿ ಅಮ್‌ಸ್ಟರ್ ಡ್ಯಾಂಗೆ ನೇರ ವಿಮಾನ ಸೇವೆಯನ್ನು ಅ.29ರಿಂದ ಆರಂಭಿಸಲಿದೆ.
ಜೆಟ್ ಏರ್‌ವೇಸ್ 9ಡಬ್ಲ್ಯೂ 235 ವಿಮಾನವು ಪ್ರತಿ ದಿನ ಬೆಳಗ್ಗೆ 2.30ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಹೊರಟು, 8.45ಕ್ಕೆ ಅಮ್‌ಸ್ಟರ್‌ಡ್ಯಾಂ ತಲುಪಲಿದೆ. ಉದ್ಘಾಟನೆಯ ಕೊಡುಗೆಯಾಗಿ ಬೆಂಗಳೂರಿನಿಂದ ಅಮ್‌ಸ್ಟರ್‌ಡ್ಯಾಂಗೆ ಹೋಗಿ ಬರಲು ಎಕನಾ ಮಿಕ್ ಕ್ಲಾಸ್‌ಗೆ 39,999 ರೂ. ಹಾಗೂ ಬಿಜಿನಸ್ ಕ್ಲಾಸ್‌ಗೆ 1.20 ಲಕ್ಷ ರೂ. ನಿಗದಿ ಮಾಡಲಾಗಿದೆ. ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಸಂಸ್ಥೆ ಹೊಸ ಸೇವೆ ಪ್ರಯಾಣಿಕರ ಜತೆಗೆ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ಪ್ರಗತಿಗೂ ನೆರವಾಗಲಿದೆ. ಪ್ರಯಾಣಿ ಕರಿಗೆ ಉತ್ಕೃಷ್ಟ ಸೇವೆ ಒದಗಿಸುವುದೇ ಸಂಸ್ಥೆಯ ಮೂಲ ಉದ್ದೇಶ ಎಂದರು.
ಸಂಪರ್ಕ ಸೇವೆ: ಜೆಟ್ ಏರ್‌ವೇಸ್ ಸಂಸ್ಥೆಯು ಅಮ್‌ಸ್ಟರ್‌ಡ್ಯಾಂಗೆ ಬೆಂಗಳೂರಿನ ಮೂಲಕ ಮಂಗಳೂರು, ಕೋಯಿಕೊಡ್, ಕೊಯಮತ್ತೂರು, ಕೊಲಂಬೊ, ಹೈದರಾಬಾದ್, ಮುಂಬೈ, ಪುಣೆ ಹಾಗೂ ತಿರುವನಂತಪುರ ಸೇರಿ 9 ತಾಣಗಳಿಂದ ಸಂಪರ್ಕ ಕಲ್ಪಿಸುತ್ತಿದೆ. ಅಮ್‌ಸ್ಟರ್‌ಡ್ಯಾಂನಿಂದ ಯುರೋಪ್ ಮತ್ತು ದಕ್ಷಿಣ ಅಮೆರಿಕಕ್ಕೂ ಸಂಪರ್ಕ ಸೇವೆ ಒದಗಿಸುತ್ತಿದೆ. ಅಮ್‌ಸ್ಟರ್‌ಡ್ಯಾಂನಿಂದ 64 ತಾಣಗಳಿಗೆ ಏರ್ ಫ್ರಾನ್ಸ್, ಕೆಎಲ್‌ಎಂ, ರಾಯಲ್ ಡಚ್, ಏರ್‌ಲೈನ್ಸ್, ಡೆಲ್ಟಾ ಏರ್‌ಲೈನ್ಸ್ ಸಹ ಯೋಗ ದೊಂದಿಗೆ ಸೇವೆ ಒದಗಿಸಲಿದೆ ಎಂದು ವಿವರಿಸಿದರು.
ಸೇವೆ ಒದಗಿಸುವ ನಗರಗಳು: ಲಂಡನ್, ಪ್ಯಾರಿಸ್, ಬಾರ್ಸಿಲೀನಾ, ಬರ್ಲಿನ್, ಬರ್ಮಿಂಗ್‌ಹ್ಯಾಂ, ಬ್ರಿಸ್ಟೊಲ್, ಕೋಪನ್‌ಹೆಗನ್, ಫ್ರಾಂಕ್‌ಫರ್ಟ್, ಜೆನಿವಾ, ರೋಮ್ ಮೊದಲಾದ ಯುರೋಪಿನ ಪ್ರಮುಖ ನಗರಕ್ಕೆ ಮತ್ತು ದಕ್ಷಿಣ ಅಮೆರಿಕಾದ ಅಟ್ಲಾಂಟಾ, ಚಿಕಾಗೋ, ಬಾಸ್ಟನ್, ಡೆಟ್ರಾಯಿಟ್, ಲಾಸ್ ಏಂಜಲೀಸ್, ಮಿನೆಪಾಲಿಸ್, ಮಿಯಾಮಿ, ನ್ಯೂಯಾರ್ಕ್ ಸಿಯಾಚಿಲ್ ಮೊದಲಾದ ನಗರಕ್ಕೆ
ಕೆಎಲ್‌ಎಂ ಮತ್ತು ಡೆಲ್ಟಾ ಸಹಯೋಗದಲ್ಲಿ ಸೇವೆ ಒದಗಿಸಲಿದ್ದೇವೆ ಎಂದರು.
ರಫ್ತು: ಈ ನೂತನ ಸೇವೆಯಲ್ಲಿ ಜೆಟ್ ಏರ್‌ವೇಸ್ ಸರಕು ಸಾಗಣೆ ಸಾಮರ್ಥ್ಯವನ್ನು 15 ಟನ್‌ಗೆ ಏರಿಸಿದ್ದು, ಹೂವು, ಔಷಧ, ಅಧಿಕ ತೂಕದ ಯಂತ್ರಗಳು, ಗಾರ್ಮೆಂಟ್ಸ್, ಎಲೆಕ್ಟ್ರಿಕಲ್ ಮತ್ತು ಮೆಡಿಕಲ್ ಪರಿಕರ, ಬಿಡಿಭಾಗಗಳ ಸಾಗಣೆ ಮಾಡಬಹುದು. ಪ್ರಯಾಣಕ್ಕೆ ವಿಶಾಲವಾದ ಸ್ಥಳಾವಕಾಶ, ಲೈಫ್ಲಟ್ ಬೆಡ್‌ಗಳು, ಸಾಂಸ್ಕೃತಿಕ ಮನೋರಂಜ ನೆಯೂ ಇಲ್ಲಿ ಇದೆ. ರಜಾವಧಿಯ ಜೆಟ್ ಎಸ್ಕೇಪ್ಸ್ ಹಾಲಿಡೇಸ್ ಸೇವೆಯನ್ನು ಆಕರ್ಷಕ ದರದಲ್ಲಿ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಜೆಟ್ ಏರ್‌ವೇಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ (ದಕ್ಷಿಣ) ಯು.ಹರೀಶ್ ಶೆಣೈ, ವಾಣಿಜ್ಯ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್ ಅಯ್ಯರ್ ಇತರರಿದ್ದರು.
ಭಾರತದಿಂದ ನೆದರ್ ಲ್ಯಾಂಡ್ ಹಾಗೂ ಯುರೋಪ್ ದೇಶಕ್ಕೆ ಬರುವ, ಇಲ್ಲಿಂದ ಭಾರತಕ್ಕೆ ತೆರಳುವ ಸಂಖ್ಯೆ ಹೆಚ್ಚಾಗಿದೆ ಮತ್ತು ಪ್ರವಾಸೋದ್ಯಮವೂ ಬಿರುಸಾಗಿದೆ. ಯುರೋಪ್ ಖಂಡಕ್ಕೆ ರಫ್ತಾಗುವ ಸರಕುಗಳಲ್ಲಿ ಶೇ.20ರಷ್ಟು ನೆದರ್‌ಲ್ಯಾಂಡ್‌ಗೆ ಬರುತ್ತಿದೆ. ನೆದರ್‌ಲ್ಯಾಂಡ್‌ಗೆ ಬರುವ ಪ್ರವಾಸಿಗರ ಸಂಖ್ಯೆ ವಾರ್ಷಿಕ ಶೇ.25ರಷ್ಟು ಏರಿಕೆಯಾಗುತ್ತಿದೆ. 2017ರಲ್ಲಿ ಶೇ.30ರಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ.
●ಅಲ್ಪೋನುಸ್ ಎಚ್. ಎಂ.ಸ್ಟೊಲಿಂಗಾ, ಭಾರತದ ನೆದರ್‌ಲ್ಯಾಂಡ್ ರಾಯಭಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.