ನೆರೆ ಹಾನಿ; ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
Team Udayavani, Aug 16, 2019, 3:00 AM IST
ಬಾಗಲಕೋಟೆ: ಪ್ರವಾಹಕ್ಕೆ ಮನೆ, ಬೆಳೆ ಸಂಪೂರ್ಣ ಹಾನಿಯಾಗಿದ್ದಕ್ಕೆ ಮನನೊಂದ ಮಹಿಳೆಯೊಬ್ಬರು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುನಗುಂದ ತಾಲೂಕಿನ ರಾಮಥಾಳ ಬಳಿ ನಡೆದಿದೆ. ರೇಣವ್ವ ಮಲ್ಲೇಶಪ್ಪ ಯರನಾಳ (58) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆ.8ರಂದು ಇತಿಹಾಸದಲ್ಲೇ ಮೊದಲ ಬಾರಿ ಮಲಪ್ರಭಾ ನದಿಗೆ 1.10 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿತ್ತು.
ಪ್ರವಾಹ ಹಿನ್ನೆಲೆಯಲ್ಲಿ ರಾಮಥಾಳದ ರೇಣವ್ವ ಅವರಿಗೆ ಸೇರಿದ ಮನೆ ಸಂಪೂರ್ಣ ಜಲಾವೃತಗೊಂಡಿತ್ತು. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆಯೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದರಿಂದ ಮನನೊಂದ ರೇಣವ್ವ, ಮಂಗಳವಾರ ಮಲಪ್ರಭಾ ನದಿಗೆ ಹಾರಿದ್ದಳು. ಗುರುವಾರ ಸಂಜೆ ರಾಮಥಾಳ-ಬೇನಾಳ ಮಧ್ಯೆ ಇರುವ ಇಂಗಳಗಿ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ರೇಣವ್ವಳ ಪತಿ ಅಮೀನಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಮೂವರು ಸಾವು
BJP Politics: ನಿರುದ್ಯೋಗಿಯಾಗಿದ್ದೇನೆ, ರಾಜ್ಯಾಧ್ಯಕ್ಷ ಕೆಲಸ ಕೊಡಿ: ಶ್ರೀರಾಮುಲು ಬೇಡಿಕೆ!
Girl; ಇಂದು ಜನಿಸುವ ಹೆಣ್ಣು ಶಿಶುವಿಗೆ ಸರಕಾರದಿಂದ ವಿಶೇಷ ಉಡುಗೊರೆ!
ಕಾಂತಾರಾ-1 ಚಿತ್ರೀಕರಣದ ಸಂದರ್ಭ ನಿಯಮ ಉಲ್ಲಂಘನೆ ಆಗಿಲ್ಲ: ಡಿಎಫ್‌ಒ
Mangaluru; ಅಂಡರ್‌ಪಾಸ್ ಗಳ ಕಾಮಗಾರಿ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ
MUST WATCH
ಹೊಸ ಸೇರ್ಪಡೆ
Bengaluru Crime: ಪತ್ನಿ ಮನೆ ಬಳಿ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
Sandalwood: ʼರಾಯಲ್ʼ ಎಂಟ್ರಿಯಲ್ಲಿ ʼವಿರಾಟʼ ದರ್ಶನ್; ತೆರೆಗೆ ಬಂತು ರಾಯಲ್
Gudibanda: ಧರಣಿ ನಿರತ ವ್ಯಕ್ತಿಗೆ ಹೃದಯಾಘಾತ, ಸಾವು
Showroom: ತಡರಾತ್ರಿ ಕಾಣಿಸಿಕೊಂಡ ಬೆಂಕಿ… ಶೋರೂಂನಲ್ಲಿದ್ದ ಹೊಸ ಕಾರುಗಳು ಸುಟ್ಟು ಕರಕಲು
Trump ಹೊಸ ನೀತಿಗೆ ಹಿನ್ನಡೆ: ಪೌರತ್ವ ರದ್ದು ಆದೇಶಕ್ಕೆ ಅಮೆರಿಕ ಕೋರ್ಟ್ ತಡೆಯಾಜ್ಞೆ