ಜನಪದಕ್ಕೆ ಸ್ಕೂಲಿಂಗ್ ಆಗಬೇಕು, ಇದು ಶಾಸ್ತ್ರವಾಗದ ಹೊರತು ಶಾಶ್ವತವಾಗದು: ಹಂಸಲೇಖ

ಜನಪದ ನಾದಕ್ಕೆ ಐದನಿ ಶಾಸ್ತ್ರ, ತಾಳಕ್ಕೆ ದುಂದುಮೆ ಶಾಸ್ತ್ರ ಪಠ್ಯ ಸಿದ್ಧ

Team Udayavani, Feb 7, 2021, 4:55 PM IST

Folklore requires schooling, which is not permanent unless it is classical

ಚಾಮರಾಜನಗರ: ಜನಪದಕ್ಕೆ ಸ್ಕೂಲಿಂಗ್ ಆಗಬೇಕು. ಇದು ಶಾಸ್ತ್ರವಾಗದ ಹೊರತು ಶಾಶ್ವತವಾಗುವುದಿಲ್ಲ. ಪ್ರದರ್ಶನದಿಂದ ಪ್ರದರ್ಶನಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಆದ್ದರಿಂದ 20 ವರ್ಷಗಳ ಸಂಶೋಧನೆ ನಡೆಸಿ ಜನಪದ ನಾದಕ್ಕೆ ಐದನಿ ಶಾಸ್ತ್ರ,  ತಾಳಕ್ಕೆ ದುಂದುಮೆ ಶಾಸ್ತ್ರವನ್ನು ಸಿದ್ಧಪಡಿಸಲಾಗಿದೆ. ಇದರ ಪಠ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಖ್ಯಾತ ಚಲನಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಡಾ. ಹಂಸಲೇಖ ಮನವಿ ಮಾಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ್ದ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಹಾಗೂ 2018-19ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು, ಜನಪದ ಎಂದರೆ ಮೆರವಣಿಗೆ. ಮೆರವಣಿಗೆ ಇಲ್ಲದಿದ್ದರೆ ಜನಪದ ಇಲ್ಲ. ಜನಪದಕ್ಕೀಗ ಬರವಣಿಗೆ ಬಂದಿದೆ. ಆದರೆ ಇನ್ನೂ ಶಾಸ್ತ್ರೋಕ್ತವಾಗಿಲ್ಲ ಎಂದರು.

ಇಷ್ಟು ದೊಡ್ಡ ಸಂಭ್ರಮವನ್ನು ಶಾಸ್ತ್ರದಲ್ಲಿ ಕೂಡಿಟ್ಟು ಕಲಿಸುವುದು ಬಹಳ ಕಷ್ಟದ ಕೆಲಸ.  ಸ್ವರಗಳನ್ನು ಕಲಿಸುವುದಕ್ಕೆ ಶಾಸ್ತ್ರ ಮಾಡಬಹುದು. ಸೊಗಡನ್ನು ಕಲಿಸುವುದಕ್ಕೆ ಯಾವುದೇ ಶಾಸ್ತ್ರವಿಲ್ಲ. ಸೊಗಡನ್ನು ವಿವರಿಸುವುದಕ್ಕೆ ಜಗತ್ತಿನಲ್ಲಿ ತಾಯಿಯ ಲಾಲಿಯನ್ನು ಬಿಟ್ಟು, ಗುರುವಿನ ಅಪ್ಪುಗೆ ಬಿಟ್ಟು ಬೇರಾವುದೇ ಮಾರ್ಗವಿಲ್ಲ. ಹಾಗಾಗಿ ಜನಪದ ಸೊಗಡಿನ ಶಾಸ್ತ್ರ ಸಿದ್ಧಪಡಿಸಬೇಕು. ಎಲ್ಲ ಗುರುಕುಲಗಳೂ ಪ್ರಾರಂಭಿಸಬೇಕು. ಆ ದಿಸೆಯಲ್ಲಿ  20 ವರ್ಷಗಳಿಂದ ಸಂಶೋಧನೆ ಮಾಡಿ ಜನಪದ ನಾದಕ್ಕೆ ಐದನಿ ಸಂಗೀತ ಶಾಸ್ತ್ರ, ತಾಳಕ್ಕೆ ದುಂದುಮೆ ಸಂಗೀತ ಶಾಸ್ತ್ರ  ಎಂದು ಎಲ್ಲ ಹಿರಿಯರ ಜೊತೆ ಕೂತು ಚರ್ಚಿಸಿ ಸಿದ್ಧಪಡಿಸಿದ್ದೇವೆ.

ಈ ಶಾಸ್ತ್ರದ ಪಠ್ಯಕ್ರಮ ಸಿದ್ಧಪಡಿಸಿಕೊಡುತ್ತೇವೆ. ಕರ್ನಾಟಕ ಸಂಗೀತಕ್ಕೆ ಎಸ್‌ಎಸ್‌ಎಲ್‌ಸಿ ಬೋರ್ಡ್‌ನಲ್ಲಿ ಪರೀಕ್ಷೆ ಕೊಡುತ್ತೀರಿ. ಅದೇ ರೀತಿ ಐದನಿ, ದುಂದುಮಕ್ಕೆ ಅನುಮೋದನೆ ನೀಡಿದರೆ, ಸಂಗೀತ ಕಲಿಸುವ ಶಾಲೆಗಳಲ್ಲಿ, ಜನಪದ ವಿವಿಯಲ್ಲಿ, ಪರೀಕ್ಷೆಗಳಲ್ಲಿ ಈ ಶಾಸ್ತ್ರವನ್ನು ಪರಿಚಯಿಸಬಹುದು.  ಜನಪದಕ್ಕೆ ಸ್ಕೂಲಿಂಗ್ ಆಗಬೇಕು. ಶಾಸ್ತ್ರ ಕಲಿಯದ ಹೊರತು  ಇದು ಶಾಶ್ವತವಾಗುವುದಿಲ್ಲ. ಪ್ರತಿ ಪ್ರದರ್ಶನ ವ್ಯತ್ಯಾಸವಾಗುತ್ತದೆ. ಶಾಸ್ತ್ರ ಬೇರೆಯವರಿಗೆ ಬೋಧನೆ ನೀಡುತ್ತದೆ. ಇದು ಜಾರಿಯಾಗಲು  ಸಚಿವರಾದ ಅರವಿಂದ ಲಿಂಬಾವಳಿ, ಸುರೇಶ್‌ಕುಮಾರ್ ಅವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ದೇಸಿ ಸಂಗೀತ ಲಿಪಿ: ಜನಪದ ಸಂಗೀತ ಬರೆಯುವುದಕ್ಕೆ ದೇಸಿ ಸಂಗೀತ ಲಿಪಿಯನ್ನೂ ನಾನು ಕಂಡು ಹಿಡಿದಿದ್ದೇನೆ. ಕರ್ನಾಟಕ ಸಂಗೀತಕ್ಕೆ 700 ವರ್ಷಗಳ ಹಿಂದೆ ಪುರಂದರದಾಸರು ಪಠ್ಯ ಕ್ರಮ ರೂಪಿಸಿದರು. ಈಗ  ನಿಮ್ಮ ಕಾಲದಲ್ಲಿ ಜನಪದ ಕಲಿಯುವುದಕ್ಕೆ ಪಠ್ಯಕ್ರಮ ಸಿದ್ಧಪಡಿಸೋಣ. ಇದು  700 ವರ್ಷಗಳ ನಂತರ ಆಗುವ ದೊಡ್ಡ ಆಂದೋಲನ. ದೇಸಿ ಲಿಪಿ, ಐದನಿ ನಾದ ಶಾಸ್ತ್ರ, ದುಂದುಮೆ ತಾಳಶಾಸ್ತ್ರ. ಈ ಮೂರು ಜಾರಿಗೆ ಬಂದರೆ ಮುಂದಿನ 500 ವರ್ಷಗಳ ಕಾಲ ಚಲಾವಣೆಗೆ ಬರುತ್ತದೆ ಎಂದು ಹಂಸಲೇಖ ಅಭಿಪ್ರಾಯಪಟ್ಟರು.

ಇದಾದರೆ, ಜನಪದರೆಲ್ಲ ಜಾನಪದರಾಗುತ್ತಾರೆ ನಂತರ,  ಜಾಣಪದರಾಗುತ್ತಾರೆ. ಜಾಣಪದರೆಲ್ಲ ವಿಜ್ಞಾನಿಪದರೂ ಆಗುತ್ತಾರೆ. ಜನಪದ ವಿವಿಯನ್ನು ಗಟ್ಟಿ ಮಾಡೋಣ ಎಂದು ಅವರು ಹೇಳಿದರು.

ಕಂಸಾಳೆ ನಾಡು ಚಾಮರಾಜನಗರ: ಚಾಮರಾಜಗರವನ್ನು ಕಂಸಾಳೆ ನಾಡು ಚಾಮರಾಜನಗರ ಎಂದು ಕರೆಯೋಣ. ಈ ಹಬ್ಬ ಜನಪದ ರತ್ನಗಳಿಗೆ ಸನ್ಮಾನ  ಮಾಡಿ ಅಭಿನಂದಿಸುವ ಹಬ್ಬ. ಈ ಹಬ್ಬ ನಡೆಯುವುದಕ್ಕೆ ಬಹಳ ಜನಪದ ತಜ್ಞರು ಕನಸು ಕಂಡಿದ್ದರು. ಇವತ್ತು ಈ ಸ್ಥಿತಿಗೆ ಅವರ ಶ್ರಮ ಕಾರಣ. 1967ರಲ್ಲಿ ತರೀಕೆರೆಯಲ್ಲಿ ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ಕನ್ನಡ ನಾಡಿಗೆ ಜನಪದ ವಿಶ್ವವಿದ್ಯಾನಿಲಯವಾಗಬೇಕು ಎಂಬ ಮಾತು ಹೊರಡಿತು. ಅದಾದ 6-7 ದಶಕದ ನಂತರ ಅದು ಈಡೇರಿತು. ಬಿಎಸ್‌ವೈ ಸರ್ಕಾರದಲ್ಲಿ ಜನಪದ ವಿಶ್ವ ವಿದ್ಯಾಲಯ ದೊರಕಿತು. ಅದು ಭಾರತದ ಪ್ರಥಮ ಜನಪದ ವಿಶ್ವವಿದ್ಯಾಲಯ ಎಂದು ಅವರು ತಿಳಿಸಿದರು.

ಜನಪದದ ಪುನರುತ್ಥಾನ ಮಾಡುವುದೇ ಪ್ರತಿ ಸರ್ಕಾರಗಳ ಕರ್ತವ್ಯವಾಗಬೇಕು ಎಂಬುದು ಸಾಹಿತಿ ಡಾ.ದೇಜಗೌ  ಅವರ ಆಶಯವಾಗಿತ್ತು. ಜನಪದ ವಿ.ವಿ. ಮ್ಯೂಸಿಯಂ, ಕಲಾಶಾಲೆಗಳಾಗಿವೆ.  ಯಾವುದೇ ಸರ್ಕಾರವಿರಲಿ, ಜನಪದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು.

ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಜಿ.ಪಂ. ಅಧ್ಯಕ್ಷೆ ಎಂ. ಅಶ್ವಿನಿ, ನಗರಸಭಾಧ್ಯಕ್ಷೆ ಆಶಾ ನಟರಾಜು, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ,  ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ,  ಜಿ.ಪಂ, ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಎಸ್ಪಿ ದಿವ್ಯಾ ಸಾರಾ ಥಾಮಸ್ ಮತ್ತಿತರರು ಇದ್ದರು.

ಚಾ.ನಗರದಲ್ಲಿ ಕಾರ್ಯಕ್ರಮ ನಡೆಯಲು ಸಿಎಂ ನರಸಿಂಹಮೂರ್ತಿ ಕಾರಣ:  ಈ ಕಾರ್ಯಕ್ರಮ ನಡೆಯಲು ಅಕಾಡೆಮಿ ಸದಸ್ಯ ಚಾಮರಾಜನಗರದವರಾದ ಸಿ.ಎಂ. ನರಸಿಂಹಮೂರ್ತಿ ಕಾರಣ ಎಂದು ಡಾ. ಹಂಸಲೇಖ ಪ್ರಶಂಸಿಸಿದರು.

15 ವರ್ಷಗಳ ಹಿಂದೆ ದೇಸಿ ಶಾಲೆಗೆ ಹಾಡುವ ಗಾಯಕರು ಬೇಕು ಎಂದು ಹುಡುತ್ತಿದ್ದಾಗ ಚಾಮರಾಜನಗರದಲ್ಲಿ ಸಿಕ್ಕಿದ ಪ್ರತಿಭೆ ನರಸಿಂಹಮೂರ್ತಿ. ಈಗ ಜಾನಪದ ಅಕಾಡೆಮಿ ಸದಸ್ಯರಾಗಿದ್ದಾರೆ. ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟಣೆ ಮಾತ್ರವಲ್ಲದೇ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಚಲುವ ಚಾಮರಾಜನಗರದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ ಸಲುವಾಗಿ ಅದು ಇಲ್ಲಿ ನಡೆಯುತ್ತಿದೆ ಎಂದು ಅವರು ಶ್ಲಾಘಿಸಿದರು.

ಇದನ್ನೂ ಓದಿ:ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್‌ ಮೀಡಿಯಾ ಪಾಠ ಮಾಡಿದ ಡಿಸಿಎಂ ‌ಅಶ್ವತ್ಥನಾರಾಯಣ

ನಾಡಿನ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ(ಫೆ.7) ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಗಣ್ಯರು ನಾಡಿನ ವಿವಿಧ ಕಲಾವಿದರಿಗೆ ಪ್ರದಾನ ಮಾಡಿದರು.

ಡಾ. ಜೀಶಂಪ ಜಾನಪದ ತಜ್ಞ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಅವರಿಗೆ,  ಡಾ. ಬಿ.ಎಸ್. ಗದ್ದಗೀಮಠ ಪ್ರಶಸ್ತಿಯನ್ನು ಕಲಬುರಗಿ ಜಿಲ್ಲೆಯ  ಡಾ. ಬಸವರಾಜ ಸಬರದ ಅವರಿಗೆ ಪ್ರದಾನ ಮಾಡಲಾಯಿತು.

2018ನೇ ಸಾಲಿನ ಪುಸ್ತಕ ಬಹುಮಾನವನ್ನು, ಜನಪದ ಸಾಹಿತ್ಯದಲ್ಲಿ ತವರು ಮನೆ ಕೃತಿಗೆ ಡಾ. ಮುಮ್ತಾಜ್ ಬೇಗಂ ಅವರಿಗೆ, 2019ನೇ ಸಾಲಿನ ಪುಸ್ತಕ ಬಹುಮಾನವನ್ನು ಜಾನಪದ ಜ್ಞಾನ ವಿಜ್ಞಾನ ಕೃತಿಗೆ ಡಾ. ಎಚ್.ಡಿ. ಪೋತೆ  ಅವರಿಗೆ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:ಭಾರತದ ಚಹಾದ ಹೆಸರನ್ನು ಕೆಡಿಸಲು ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆದಿದೆ: ಪ್ರಧಾನಿ ಮೋದಿ

2020ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪಡೆದ ಕಲಾವಿದರು:

ಬೆಂಗಳೂರು ಜಿಲ್ಲೆಯ ಜನಪದ ಗಾಯಕ, ಎಂ.ಕೆ. ಸಿದ್ಧರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಬಾನೆ ಪದದ ಹೊನ್ನಗಂಗಮ್ಮ, ರಾಮನಗರ ಜಿಲ್ಲೆಯ ತಮಟೆ ವಾದನದ ತಿಮ್ಮಯ್ಯ, ಕೋಲಾರ ಜಿಲ್ಲೆಯ ತತ್ವಪದ ಭಜನೆ ಕಲಾವಿದ ಕೆ.ಎನ್. ಚೆಂಗಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಕೀಲುಕುದುರೆ ಕಲಾವಿದ ನಾರಾಯಣಪ್ಪ, ತುಮಕೂರು ಜಿಲ್ಲೆಯ ವೀರಭದ್ರನ ಕುಣಿತದ ಸಿ.ವಿ. ವೀರಣ್ಣ,  ದಾವಣೆಗೆರೆ ಜಿಲ್ಲೆಯ ಸೋಬಾನೆ ಪದದ ಭಾಗ್ಯಮ್ಮ, ಚಿತ್ರದುರ್ಗ ಜಿಲ್ಲೆಯ ಮದುವೆ ಹಾಡಿನ ಕೆಂಚಮ್ಮ, ಶಿವಮೊಗ್ಗ ಜಿಲ್ಲೆಯ ಜಾನಪದ ಗಾಯಕ ಕೆ. ಯುವರಾಜ್,  ಮೈಸೂರು ಜಿಲ್ಲೆಯ ಕಂಸಾಳೆ ಕಲಾವಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಕೋಲಾಟ ಕಲಾವಿದ ಭೂಮಿಗೌಡ, ಚಿಕ್ಕಮಗಳೂರು ಜಿಲ್ಲೆಯ ಚೌಡಿಕೆ ಪದದ ಎಂ.ಸಿ. ಭೋಗಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಗೊಂಬೆ ಕುಣಿತದ ಗೋಪಾಲಕೃಷ್ಣ ಬಂಗೇರಾ, ಉಡುಪಿ ಜಿಲ್ಲೆಯ ಕರಗ ಕೋಲಾಟದ ರಮೇಶ್ ಕಲ್ಮಾಡಿ, ಕೊಡಗು ಜಿಲ್ಲೆಯ ಬಾಳೋಪಾಟ್‌ನ ಕೆ.ಕೆ. ಪೊನ್ನಪ್ಪ, ಚಾಮರಾಜನಗರ ಜಿಲ್ಲೆಯ ಸೋಬಾನೆ ಕಲಾವಿದೆ ಬಿ. ಹೊನ್ನಮ್ಮ. ಹಾಸನ ಜಿಲ್ಲೆಯ ಹಾಡುಗಾರಿಕೆ ಕಲಾವಿದ ಗ್ಯಾರಂಟಿ ರಾಮಣ್ಣ, ಬೆಳಗಾವಿ ಜಿಲ್ಲೆಯ ತತ್ವಪದ ಕಲಾವಿದ ಮುತ್ತಪ್ಪ ಅಲ್ಲಪ್ಪ ಸವದಿ, ಧಾರವಾಡ ಜಿಲ್ಲೆಯ ತತ್ವಪದ ಕಲಾವಿದ ಮಲ್ಲೇಶಪ್ಪ ತಡಸದ, ವಿಜಯಪುರದ ಡೊಳ್ಳು ಕುಣಿತದ ಸುರೇಶ್ ರಾಮಚಂದ್ರ ಜೋಶಿ, ಬಾಗಲಕೋಟೆ ಜಿಲ್ಲೆಯ ಭಜನೆ ಕಲಾವಿದ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ, ಹಾವೇರಿ ಜಿಲ್ಲೆಯ ತತ್ವಪದ ಕಲಾವಿದ ಬಸವರಾಜ ಶಿಗ್ಗಾಂವಿ,  ಗದಗ ಜಿಲ್ಲೆಯ ಮುತ್ತಪ್ಪ ರೇವಣ್ಣಪ್ಪ ರೋಣ, ಹಲಗೆ ಸಾಹೇಬಣ್ಣ, ಕೊಪ್ಪಳ ಜಿಲ್ಲೆಯ ಗೋಂದಳಿ  ತಿಪ್ಪಣ್ಣ, ಬಳ್ಳಾರಿ ಜಿಲ್ಲೆಯ ಗೋಂದಳಿ ರಾಮಣ್ಣ,  ಯಾದಗಿರಿ ಜಿಲ್ಲೆಯ ಮದುವೆಹಾಡು ಬಸವಲಿಂಗಮ್ಮ  ಮತ್ತು ಲಾವಣಿ ಕಲಾವಿದ ಸಹದೇವಪ್ಪ ಈರಪ್ಪ ನಡಗೇರ ಅವರಿಗೆ ನೀಡಿ ಗೌರವಿಸಲಾಯಿತು.

 

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

HDk05

Police FIR: ಎಫ್ಐಆರ್‌ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.