Food safety; ಆಹಾರಕ್ಕೆ ಸುರಕ್ಷೆಗೆ ಬರಲಿದೆ ಫುಡ್ ಟೆಸ್ಟಿಂಗ್ ಲ್ಯಾಬ್
Team Udayavani, Aug 14, 2024, 7:12 AM IST
ಬೆಂಗಳೂರು: ಸಾರ್ವಜನಿಕರು ತಾವು ಖರೀದಿಸುವ ತರಕಾರಿ, ಹಣ್ಣು , ಮೀನು, ಮಾಂಸ, ಹಾಗೂ ಇತರ ತಿಂಡಿ ತಿನಸುಗಳಲ್ಲಿ ರಾಸಾಯನಿಕ ಅಂಶ ಬಳಕೆಯಾಗಿದೆ ಎನ್ನುವ ಅನುಮಾನಗಳಿದ್ದರೆ ತತ್‌ಕ್ಷಣವೇ ಸ್ವಯಂ ಆಹಾರ ಪರೀಕ್ಷೆಗೆ ಮಾಡಿಕೊಳ್ಳಲು ಸ್ಥಳದಲ್ಲಿ “ಫುಡ್ ಟೆಸ್ಟಿಂಗ್ ಪ್ರಯೋಗಾಲಯ’ ಹಾಗೂ ಗುಣಮಟ್ಟದ ಆಹಾರದ ಪೂರೈಕೆಗೆ ನಿಯಮಿತ “ಹೈಜಿನಿಕ್ ಫುಡ್ ಆಡಿಟಿಂಗ್’ ಪ್ರಾರಂಭಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಹಾಗೆಂದು ಇದು ಹೊಟೇಲ್, ರೆಸ್ಟೋರೆಂಟ್ ಸೇರಿ ಆಯಾ ಆಹಾರ ತಯಾರಿಕೆ ಸಂಸ್ಥೆಗಳ ನಿರ್ಧಾರಕ್ಕೆ ಬಿಟ್ಟಿದ್ದಾಗಿದೆ. ಒಂದು ವೇಳೆ ಅವರಿದನ್ನು ಅಳವಡಿಸಿಕೊಂಡರೆ ಗ್ರಾಹಕರ ಆರೋಗ್ಯದ ಕಾಳಜಿಯ ಜತೆ ಅವುಗಳ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸುತ್ತದೆ.
ಆಹಾರದಲ್ಲಿ ನಿಷೇಧಿತ ಕೆಮಿಕಲ್ ಹಾಗೂ ಕಲಬೆರಕೆ ಪದಾರ್ಥಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಈಗಾಗಲೇ ಕೆಮಿಕಲ್ ಗೋಬಿ, ಕಬಾಬ್, ಲಿಕ್ವಿಡ್ ನೈಟ್ರೋಜನ್‌ಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವುದಕ್ಕೆ ನಿಷೇಧ ಹೇರಿದೆ. ಇಷ್ಟಾದರೂ ನಿಷೇಧಿñಜ ಪದಾರ್ಥ ಬಳಸಿ ತಯಾರಿಸಲಾದ ಆಹಾರ ಸೇವಿಸಿ, ಅನಾರೋಗ್ಯಕ್ಕೆ ಒಳಗಾಗುವವರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಆರೋಗ್ಯ ಹಾಗೂ ಆಹಾರ ಸುರಕ್ಷತಾ-ಗುಣಮಟ್ಟ ಇಲಾಖೆ ಮುಂದಾಗಿದೆ.
ಇಲಾಖೆಯು ನೈರ್ಮಲ್ಯತೆ ಮತ್ತು ಗುಣಮಟ್ಟದ ಕಾಪಾಡುವ ದೃಷ್ಟಿಯಿಂದ ಹೊಟೇಲ್‌ಗಳಲ್ಲಿ ವಾರ್ಷಿಕ ಹೈಜಿನಿಕ್ ಫುಡ್ ಆಡಿಟಿಂಗ್’ಗೆ ಸಲಹೆ ನೀಡಿದೆ. ಫಸ್ಟ್ ಇನ್ – ಫಸ್ಟ್ ಔಟ್ ಮಾದರಿಯನ್ನು ಅಳವಡಿಸಿಕೊಂಡು ಅವಧಿ ಮೀರುವ ಗಡಿಯಲ್ಲಿ ಆಹಾರ ಕಚ್ಚಾ ಸಾಮಗ್ರಿಗಳನ್ನು ಮೊದಲು ಬಳಕೆ ಮಾಡಿಕೊಳ್ಳಬೇಕು. ವೆಜ್ ಹಾಗೂ ನಾನ್‌ವೆಜ್ ಆಹಾರ ತಯಾರಿಕೆಗೆ ಪ್ರತ್ಯೇಕ ಪಾತ್ರೆಗಳು, ಕಚ್ಚಾ ಆಹಾರ ಸಾಮಗ್ರಿ ಸಂಗ್ರಹಣೆ ಸ್ಥಳವನ್ನು ಎಫ್ಎಸ್‌ಎಸ್‌ಎಐ ನಿಯಮಾವಳಿ ಅನ್ವಯ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಜತೆಗೆ ಇತರೆ ಸಿಬ್ಬಂದಿಗೆ ತರಬೇತಿ ಸೇರಿದಂತೆ ಕೆಲ ವ್ಯವಸ್ಥೆಯನ್ನು ತ್ರೀ ಸ್ಟಾರ್ ಮತ್ತು ಅದಕ್ಕೂ ಮೇಲಿನ ಸ್ಟಾರ್ ಹೊಟೇಲ್‌ಗಳು ಅಳವಡಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ಅಜಿನೋಮೋಟೋ ನಿಷೇಧ
ಹಣ್ಣು ಮಾಗಿಸಲು ಕ್ಯಾಲ್ಶೀಯಂ ಕಾರ್ಬಡೈ ಬಳಕೆ ನಿಷೇಧಿಸಿ, ಇಥಿಲಿನ್ ಬಳಕೆಯ ಸಾಂದ್ರತೆಯನ್ನು 100 ಪಿಪಿಎಂ ಮಿತಿಯೊಳಗೆ ಬಳಕೆ ಮಾಡತಕ್ಕದ್ದು, ಆಹಾರದಲ್ಲಿ ಅಜಿನೋಮೋಟೋ ಅಥವಾ ಮಾನೋ ಸೋಡಿಯಂ ಗೊಟಾಮೇಟ್ ಬಳಸುವುದನ್ನು ನಿಷೇಧಿಸಲಾಗಿದೆ. ಇಲಾಖೆಯು ಧಾನ್ಯ, ಹಣ್ಣು, ತರಕಾರಿ ವ್ಯಾಪಾರಿಗಳು ಹಾಗೂ ಬೇಕರಿ- ಕೇಕ್ ತಯಾರಕರಿಗೆ ಕಡ್ಡಾಯವಾಗಿ ಇಲಾಖೆಯಿಂದ ನೋಂದಣಿ ಅಥವಾ ಪರವಾನಿಗೆ ಪಡೆಯುವಂತೆ ಸೂಚಿಸಿದೆ.
ಇಲಾಖೆ ಅಧಿಕಾರಿಗಳು, ಮಾಲ್ ಮಾಲಕರು, ಹೊಟೇಲ್, ತರಕಾರಿ, ಧಾನ್ಯ, ಹಣ್ಣು, ಬೇಕರಿ ಅಸೋಸಿಯೇಶನ್ ಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಆಹಾರ ಸುರಕ್ಷತಾ ಗುಣಮಟ್ಟದ ನಿಯಮಗಳನ್ನು ಪಾಲಿಸಲು ಒಪ್ಪಿಗೆ ಸೂಚಿಸಲಾಗಿದೆ. ಪ್ರಾಯೋಗಾಲಯದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.
ಟೆಸ್ಟಿಂಗ್ ಪ್ರಯೋಗಾಲಯ!
ಸಾರ್ವಜನಿಕರಿಗೆ ತಾವು ಸೇವಿಸುವ ಆಹಾರದಲ್ಲಿ ರಾಸಾಯನಿಕ ಅಂಶಗಳಿವೆ ಎನ್ನುವ ಬಗ್ಗೆ ಅನುಮಾನಗಳನ್ನು ಪರಿಶೀಲಿಸಲು ಹೊಟೇಲ್ ಹಾಗೂ ಮಾಲ್ ಸೇರಿದಂತೆ ವಿವಿಧೆಡೆ ಫುಡ್ ಟೆಸ್ಟಿಂಗ್ ಪ್ರಯೋಗಾಲಯ ಸ್ಥಾಪಿಸಲು ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಈ ಪ್ರಯೋಗಾಲಯ ಪ್ರಾರಂಭವಾಗಲಿದ್ದು, ಆಸಕ್ತರ ಆಹಾರ ಉದ್ದಿಮೆಗಳ ಮಾಲಕರಿಗೆ ಅಗತ್ಯವಿರುವ ಉಪಕರಣಗಳನ್ನು ಇಲಾಖೆಯ ಮೂಲಕ ನೀಡಲಾಗುತ್ತದೆ. ಅದರ ನಿರ್ವಹಣೆಯನ್ನು ಮಾಲಕರು ಮಾಡಬೇಕಾಗುತ್ತದೆ.
ನಿಷೇಧ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಆಹಾರ ಸೇವನೆಯಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ರಾಸಾಯನಿಕ ಪದಾರ್ಥ ಬಳಸುವ ಕಬಾಬ್, ಗೋಬಿ ಹಾಗೂ ಲಿಕ್ವಿಡ್ ನೈಟ್ರೋಜನ್ ನಿಷೇಧಿಸಲಾಗಿದೆ. “ಫುಡ್ ಟೆಸ್ಟಿಂಗ್ ಪ್ರಯೋಗಾಲಯ’ ಹಾಗೂ “ಫುಡ್ ಆಡಿಟಿಂಗ್’ನಿಂದ ಆಹಾರ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಗುಣಮಟ್ಟದ ಆಹಾರ ಜನರಿಗೆ ಸಿಗಲಿದೆ. – ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಹೈಜೆನಿಕ್ ಫುಡ್ ಆಡಿಟಿಂಗ್, ಸಿಬಂದಿಗೆ ನಿಯಮಿತ ತರಬೇತಿ, ಎಫ್ಸ್‌ಎಸ್‌ಎಐ ನಿಗದಿಪಡಿಸಿದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಇತರ ಸಲಹೆಗಳನ್ನು ಇಲಾಖೆ ನೀಡಿದೆ. – ಪಿ.ಸಿ. ರಾವ್, ಹೊಟೇಲ್ ಅಸೋಸಿಯೇಶನ್, ಬೆಂಗಳೂರು
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.