ವನ್ಯಜೀವಿಗಳ ಮೃತದೇಹ ಇನ್ನು ಮುಂದೆ ಸುಡುವಂತಿಲ್ಲ; ಹೂಳುವಂತೆಯೂ ಇಲ್ಲ..!
Team Udayavani, Apr 13, 2022, 6:30 AM IST
ಬೆಂಗಳೂರು: ಇನ್ನು ಮುಂದೆ ವನ್ಯಜೀವಿಗಳ ಮೃತದೇಹಗಳನ್ನು ಸುಡುವಂತಿಲ್ಲ. ಹಾಗೆಯೇ ಹೂಳು ವಂತೆಯೂ ಇಲ್ಲ. ವನ್ಯಜೀವಿಗಳ ಮೃತದೇಹಗಳನ್ನು ಕೊಳೆಯಲು ಬಿಟ್ಟು ಇತರ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿಸಬೇಕು. ಏಕೆಂದರೆ, ವನ್ಯಪ್ರಾಣಿಗಳ ಮೃತದೇಹಗಳು ಕೊಳೆತ ಅನಂತರ ಪೋಷಕಾಂಶಗಳಿಂದ ಸಮೃದ್ಧವಾಗುತ್ತವೆ.
ಹೀಗೆಂದು ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ವನ್ಯಜೀವಿ ತಜ್ಞ ಡಾ| ಸಂಜಯ್ ಗುಬ್ಬಿ ಅವರ ಮನವಿಯಂತೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.
ನಿರ್ಣಾಯಕ ಸಂಪನ್ಮೂಲ
ಡಾ| ಸಂಜಯ್ ಗುಬ್ಬಿಯವರ ಅಭಿಪ್ರಾಯದಂತೆ ವನ್ಯಜೀವಿಗಳ ಮೃತದೇಹಗಳು ಪರಿಸರ ವ್ಯವಸ್ಥೆ ಕಾರ್ಯನಿರ್ವಹಣೆಗೆ ನಿರ್ಣಾಯಕ ಸಂಪನ್ಮೂಲ ವಾಗಿರುವುದಲ್ಲದೇ ವನ್ಯಜೀವಿಗಳು ತಮ್ಮ ಸಾವಿನ ಅನಂತರವೂ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇನ್ನು ಮುಂದೆ ಎಲ್ಲ ವನ್ಯಜೀವಿಗಳ ಮೃತದೇಹಗಳನ್ನು ನೈಸರ್ಗಿಕ ಆವಾಸಸ್ಥಾನಗಳಲ್ಲಿ ಸುಡುವ ಅಥವಾ ಹೂಳುವ ಪದ್ಧತಿಯನ್ನು ತತ್‌ಕ್ಷಣದಿಂದ ನಿಲ್ಲಿಸಿ, ಅರಣ್ಯದೊಳಗೆ ಕೊಳೆಯಲು ಬಿಟ್ಟು, ಮೃತದೇಹ ಅವಲಂಬಿಸಿ ಬದುಕುವ ಪ್ರಾಣಿ-ಪಕ್ಷಿಗಳ ಆಹಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಸೂಚಿಸಿದೆ. ಈ ಮಾರ್ಗಸೂಚಿಗಳು ರಾಷ್ಟ್ರೀಯ ಪ್ರಾಣಿ ಹುಲಿಗೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ
ಸಸ್ಯಹಾರಿ ಮತ್ತು ಮಾಂಸಹಾರಿ ವನ್ಯಪ್ರಾಣಿಗಳು ಸ್ವಾಭಾವಿಕ ಅಥವಾ ಅಸ್ವಾಭಾವಿಕವಾಗಿ ಮೃತಪಟ್ಟರೆ ಅವುಗಳ ಮೃತದೇಹವನ್ನು ಸುಡಲಾಗುತ್ತದೆ. ಆದರೆ, ವನ್ಯಪ್ರಾಣಿಗಳ ಮೃತದೇಹ ಕೊಳೆತ ಅನಂತರ ಪೋಷಕಾಂಶಗಳಿಂದ ಸಮೃದ್ಧವಾಗಿ ಹಲವಾರು ಜಾತಿಯ ಪ್ರಾಣಿ, ಪಕ್ಷಿಗಳಿಗೆ ಆಹಾರವನ್ನು ಒದಗಿಸಿ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅದಲ್ಲದೇ, ಪ್ರಮುಖವಾಗಿ ರಣಹದ್ದುಗಳು ವನ್ಯಜೀವಿ ಮೃತದೇಹದ ಶರೀರದ ಆಹಾರವನ್ನು ಸೇವಿಸಿ ಅದರ ನೈಸರ್ಗಿಕ ಸಂಖ್ಯೆ ಹೆಚ್ಚಿಸಿಕೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.