Health Department ಡೆಂಗ್ಯೂಗೆ ವಾರ್ ರೂಂ, ಟಾಸ್ಕ್ ಫೋರ್ಸ್ ರಚನೆ
2ಕ್ಕಿಂತ ಹೆಚ್ಚು ಪ್ರಕರಣವಿದ್ದರೆ ಅದು ಹಾಟ್‌ಸ್ಪಾಟ್ ; ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ
Team Udayavani, Jul 12, 2024, 7:35 AM IST
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಸೂಕ್ಷ್ಮ ಮೇಲ್ವಿಚಾರಣೆ ಹಾಗೂ ಉಸ್ತುವಾರಿಗೆ ಎನ್‌ವಿಬಿಡಿಸಿಪಿ (ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ) ವಿಭಾಗದಿಂದ ಆರೋಗ್ಯಸೌಧದಲ್ಲಿ “ಡೆಂಗ್ಯೂ ವಾರ್ ರೂಂ’ ತೆರೆದು ಡೆಂಗ್ಯೂ ನಿಯಂತ್ರಣ ಹಾಗೂ ಮುಂಜಾಗ್ರತೆಗೆ ಸಂಬಂಧಿಸಿ ಹೊಸ ಸುತ್ತೋಲೆಯನ್ನು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದೆ.
ರಾಜ್ಯದ ಪ್ರತೀ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪರಿಸ್ಥಿತಿ ಮೇಲ್ವಿಚಾರಣೆ ಹಾಗೂ ದತ್ತಾಂಶ, ಮಾಹಿತಿ ಸಂಗ್ರಹಕ್ಕಾಗಿ ಕಂಟ್ರೋಲ್ ರೂಂ ಹಾಗೂ ಡೆಂಗ್ಯೂ ವಾರ್ ರೂಂ ಪ್ರಾರಂಭಿಸಬೇಕು. ಪರಿಸ್ಥಿತಿಯ ದೈನಂದಿನ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆಯಾಗಬೇಕು. ವಾರಕ್ಕೊಮ್ಮೆ ಸಭೆ ಸೇರಿ ಡೆಂಗ್ಯೂ ನಿಯಂತ್ರಣವನ್ನು ಪರಿಶೀಲನೆ ನಡೆಸಿ, ಸ್ಥಳೀಯ ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಿರುವ ಸೂಚನೆಯನ್ನು ನೀಡಬೇಕು ಎಂದು ತಿಳಿಸಲಾಗಿದೆ.
14 ದಿನಗಳ ಆರೋಗ್ಯ ವರದಿ
ಡೆಂಗ್ಯೂ ಲಕ್ಷಣ ಕಂಡು ಬಂದ ದಿನದಿಂದ 14 ದಿನಗಳ ವರೆಗೆ ಆರೋಗ್ಯ ಸ್ಥಿತಿಯನ್ನು ಅನುಪಾಲನೆ ಮಾಡಬೇಕು. ಆರೋಗ್ಯ ಸಿಬಂದಿ ನಿಗದಿತ ವರದಿ ನಮೂನೆಯಲ್ಲಿ ರೋಗಿಯ ಸಂಪೂರ್ಣ ವಿವರವನ್ನು ರಾಜ್ಯ ಡೆಂಗ್ಯೂ ವಾರ್ ರೂಂಗೆ ಸಲ್ಲಿಸಬೇಕು. ಸಾಧಾರಣ, ಮಧ್ಯಮ ಹಾಗೂ ತೀವ್ರ ಜ್ವರ ಚಿನ್ಹೆಗಳ ಕುರಿತು ಜನರಿಗೆ ಅರಿವು ಮೂಡಿಸ ಬೇಕು ಎಂದು ಸೂಚಿಸಲಾಗಿದೆ.
200 ರೂ. ಗೌರವಧನ
ಆರೋಗ್ಯ ಸಿಬಂದಿ ಹಾಗೂ ಆಶಾ ಕಾರ್ಯಕರ್ತೆರು ತಮ್ಮ ವ್ಯಾಪ್ತಿಯ ಎಲ್ಲ ಮನೆಗಳ, ಶಾಲಾ, ಕಾಲೇಜು, ಕಚೇರಿಗಳಲ್ಲಿ 15 ದಿನಗಳಿಗೊಮ್ಮೆ ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು. ನಗರ/ಪಟ್ಟಣ ಪ್ರದೇಶದಲ್ಲಿ ಈ ಚಟುವಟಿಕೆಗೆ ಬಳಸಿಕೊಳ್ಳುವ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಯಾ ಸ್ಥಳೀಯ ಸಂಸ್ಥೆಗಳು ದಿನಕ್ಕೆ 200 ರೂ. ಗೌರವಧನ ಪಾವತಿಸಬೇಕು. ಜತೆಗೆ ಅಗತ್ಯ ಸಂಖ್ಯೆಯ ಸ್ವಯಂ ಸೇವಕರನ್ನು ಒದಗಿಸಬೇಕು ಎಂದು ಇಲಾಖೆ ಸೂಚಿಸಿದೆ.
ಹೆಚ್ಚುವರಿ ಅನುದಾನ ಜಿ.ಪಂ., ತಾ.ಪಂ. ಹೆಗಲಿಗೆ
ಬಿಬಿಎಂಪಿ, ಜಿಲ್ಲೆಗಳಲ್ಲಿನ ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಸಂಪೂರ್ಣ ವಿವರವನ್ನು ರಾಜ್ಯ ಡೆಂಗ್ಯೂ ವಾರ್ ರೂಂಗೆ ಸಲ್ಲಿಸಬೇಕು. ಆ ಪ್ರದೇಶದಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಸಕ್ರಿಯಗೊಳಿಸುವುದರ ಜತೆಗೆ ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆ, ಸೊಳ್ಳೆ ಪರದೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಎಆರ್‌ಎಸ್/ಎಬಿಎಕೆಆರ್-ಕೆ ನಿಯಮಾನುಸಾರ ಬಳಸಿಕೊಳ್ಳಬೇಕು. ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಭರಿಸುವಂತೆ ಸೂಚಿಸಿದೆ.
ಮುಂಜಾಗ್ರತೆ-ಮುನ್ನೆಚ್ಚರಿಕೆ ಕ್ರಮಗಳು
-ಒಂದೇ ಸ್ಥಳದಲ್ಲಿ ಎರಡಕ್ಕಿಂತ ಹೆಚ್ಚು ಪ್ರಕರಣ ವರದಿಯಾದರೆ ಆ ಸ್ಥಳಗಳನ್ನು ಹಾಟ್‌ಸ್ಪಾಟ್‌ಗಳಾಗಿ ಗುರುತಿಸುವಿಕೆ
– ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು
– ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 5ರಿಂದ 10 ಬೆಡ್ ಮೀಸಲು
– ಡೆಂಗ್ಯೂ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣೆಯ ಸೌಲಭ್ಯ ಸಂಪೂರ್ಣ ಉಚಿತ
– ಚಿಕಿತ್ಸೆಗೆ ಅಗತ್ಯವಿರುವ ಔಷಧ, ಬಿಳಿ ರಕ್ತಕಣ ಹಾಗೂ ಇತರ ಅಗತ್ಯ ಔಷಧ ಶೇಖರಣೆ
– ನ್ಯಾಶನಲ್ ಗೈಡ್‌ಲೈನ್ಸ್ ಆನ್ ಡೆಂಗ್ಯೂ ಫೀವರ್ ಮ್ಯಾನೇಜ್ಮೆಂಟ್ ಶಿಷ್ಟಾಚಾರ ಪಾಲನೆ
– ಡೆಂಗ್ಯೂ ಹಾಟ್‌ಸ್ಪಾಟ್ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಸಕ್ರಿಯ
– ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ತೀವ್ರಗೊಳಿಸಲು ಸೂಚನೆ
– ಹಾಟ್‌ಸ್ಪಾಟ್‌ನ ಬಿಪಿಎಲ್ ಕುಟುಂಬಕ್ಕೆ ಸೊಳ್ಳೆ ನಿರೋಧಕ ಎಣ್ಣೆ ವಿತರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.