ಆ ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ: ಎಚ್‌ಡಿಕೆ ವಾಗ್ದಾಳಿ
ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ..
Team Udayavani, May 22, 2024, 1:47 PM IST
ಮೈಸೂರು: ರಾಜ್ಯದ ಹಲವೆಡೆ ಬೆಳೆ ನಾಶವಾಗಿದೆ. ಸರಕಾರ ಹೇಳಿಕೆಗಳಿಗೆ ಮಾತ್ರ ಸಿಮೀತವಾಗಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಆಗುತ್ತಿವೆ. ಸರಕಾರದ ಗಮನಕ್ಕೆ ಈ ವಿಷಯ ಇದೆಯೋ ಇಲ್ಲವೋ ಗೊತ್ತಿಲ್ಲ. ಮದ್ದೂರು, ಗದಗನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳುವ ಕೆಲಸ ಆಗಿಲ್ಲ. ಬಿಜೆಪಿಯನ್ನು ದೂರುವುದಷ್ಟೆ ಕಾಂಗ್ರೆಸ್ ಕೆಲಸ ಆಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು,ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಓರ್ವ ಮೃತಪಟ್ಟಿದ್ದಾನೆ. ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಸಿದ್ದರಾಮಯ್ಯ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದು ಇದರಲ್ಲೆ ಗೊತ್ತಾಗುತ್ತಿದೆ. ಮೈಸೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನಿದೆ ಹೇಳಲಿ. ಸಿಎಂ ರಾಜಕೀಯದ ಕೊನೆ ಹಂತದಲ್ಲಿದ್ದಾರೆ ಈಗಲಾದರೂ ಮೈಸೂರು ಜಿಲ್ಲೆ ಅಭಿವೃದ್ಧಿ ಮಾಡಲಿ. ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಟೀಕೆ ಮಾಡುವ ನೈತಿಕತೆ ಸಿಎಂ ಗೆ ಇಲ್ಲ ಎಂದರು.
ವಿರೋಧಿಗಳಿಗೆ ತೊಂದರೆ ಕೊಡುವುದು. ದ್ವೇಷದ ರಾಜಕಾರಣ ಮಾಡುವುದಷ್ಟೆ ಸರಕಾರದ ಕೆಲಸ ಆಗಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ಮೇ 30 ತಾರೀಕು ಹಾಸನದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳಿಸುತ್ತೇನೆ ಎಂದರು.
ನನಗೆ ಡಿಕೆ ಶಿವಕುಮಾರ್ ಕಂಡರೆ ಅಸೂಯೆ ಅಂತಾ ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ. ವೀಡಿಯೋ ಮಾಡಿರುವುದು ಒಂದು ಭಾಗ. ವಿಡಿಯೋವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ವಾ? ವಿಡಿಯೋ ಮಾಡಿದ್ದಕ್ಕಿಂತಾ ಅದರ ವಿತರಣೆ ಅದು ಅಪರಾಧ ಅಲ್ವಾ? ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ. ಅಧಿಕಾರ ಯಾರ ಅಪ್ಪನ ಆಸ್ತಿಯಲ್ಲ. ರಾಜಕೀಯದಲ್ಲಿ ಏಳು ಬೀಳು ಅದು ಭಗವಂತ ಇಚ್ಚೆ. ಇದರಲ್ಲಿ ಅಸೂಯೆ ಯಾಕೆ? ಎಂದು ಪ್ರಶ್ನಿಸಿದರು.
ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲಾ ಅಧಿಕಾರವನ್ನು ನಾವು ನೋಡಿ ಹಾಗಿದೆ. ಸಿಡಿ ಡಿಕೆ ಶಿವು ನಮಗೆ ಅಧಿಕಾರ ಬೇಡ ಅಂದರು ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ ಎಂದರು.
ಪೆನ್ ಡ್ರೈವ್ ಮೂಲವೇ ಕಾರ್ತಿಕ್: ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಡಿಕೆ ಸುರೇಶ್ ಬಳಿಗೆ ಮೊದಲು ಹೋಗಿದ್ದ. ನಂತರ ಅದನ್ನು ಸಿಡಿ ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ. ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ. ಸಿಎಂ ಅವರೇ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ. ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನ ಆಗಿದೆ. ಈಗ ಎಂಟು ಜನ ಪೊಲೀಸ್ ರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ತೋರಿಸಿಲ್ಲ? ಕೋರ್ಟ್‌ಗೆ ಹಾಜರು ಪಡಿಸಿಲ್ಲ ಹೇಳಿ?
ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತಾ ಬೇಕಾದರೆ ನೀವು ಹೇಳ್ತೀರಾ ಎಂದರು.
ಎಸ್ ಐಟ ಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ? ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್ ಐಟಿಗೆ ಕೊಟ್ಟಿರಲಿಲ್ಲ. ಅವರೇನೂ ಟೆರರಿಸ್ಟಾ ಫೋನ್ ಟ್ಯಾಪ್ ಮಾಡೋಕೆ ಅಂತಾ ಕೆಲವರು ಕೇಳಿದ್ದಾರೆ. ಅವರ ಬಳಿ ಇರೋರೆಲ್ಲಾ ಟೆರರಿಸ್ಟ್ ಗಳೇ. ಬಹಳಷ್ಟು ಟೆರರಿಸ್ಟ್ ಗಳು ಇವರುಗಳ ಸುತ್ತಮುತ್ತವೇ ಇದ್ದಾರೆ. ಈಗ ಸಿಎಂ ಪೆನ್ ಡ್ರೈವ್ ಬಗ್ಗೆ ಯಾರ ಮಾತಾಡಬೇಡಿ ಅಂದಿದ್ದಾರೆ. ಏಕೆಂದರೆ ನಿಮ್ಮ ಬುಡಕ್ಕೆ ಬರ್ತಾ ಇದೆಯಲ್ಲ. ಅದಕ್ಕೆ ಈಗ ಮಾತಾಡಬೇಡಿ ಅಂತಿದ್ದಾರೆ ಎಂದು ಹೇಳಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ಗೂ ಪೆನ್ ಡ್ರೈಗೂ ಸಂಬಂಧ ಇಲ್ಲ. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರ್ತಾ ಇರಲಿಲ್ಲ ಇನ್ನೂ ಈಗ ಇರ್ತಾನಾ? ಪೆನ್ ಡ್ರೈವ್ ಪ್ರಕರಣದಿಂದ ದೇವೇಗೌಡರ ಫ್ಯಾಮಿಲಿ ಗೆ ಸ್ವಲ್ಪ ಡ್ಯಾಮೆಜ್ ಆಗಿರೋದು ಸತ್ಯ. ಪ್ರಜ್ವಲ್ ಎಚ್.ಡಿ. ರೇವಣ್ಣನ ಸಂಪರ್ಕದಲ್ಲೂ ಇಲ್ಲ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ, ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತಾ ಇವರು ಸುದ್ದಿ ಹಬ್ಬಿಸಿ ಬಿಡುತ್ತಾರೆ. ಯಾವ ಗ್ರಹಚಾರ ನಮಗೆ. ಪ್ರಜ್ವಲ್ ವಿದೇಶಕ್ಕೆ ಹೋಗೋದು ಆವತ್ತೇ ಗೊತ್ತಾಗಿದ್ದರೆ ನಾನು ಆವತ್ತೇ ಅದನ್ನು ನಿಲ್ಲಿಸುತ್ತಿದೆ. ಪ್ರಜ್ವಲ್ ಭಯ ಬಿದ್ದಿರಬಹುದು. ಅದಕ್ಕೆ ಬರ್ತಿಲ್ಲ. ಪ್ರಜ್ವಲ್ ಗೆ ಹೇಳ್ತಿದ್ದಿನಿ. ಈ ವಿಚಾರದಲ್ಲಿ ವಕೀಲರ ಸಲಹೆ ಬೇಡ ನೈತಿಕ ಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬಾ ಎಂದಿದ್ದೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.