WC;ಸೋತ ನಂತರ ಪ್ರಧಾನಿ ಆಟಗಾರರನ್ನು ಭೇಟಿಯಾದದ್ದು ಈ ಹಿಂದೆ ನೋಡಿಲ್ಲ: ಸೆಹವಾಗ್
ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ
Team Udayavani, Nov 25, 2023, 7:16 PM IST
ಹೊಸದಿಲ್ಲಿ: ”ಪಂದ್ಯವೊಂದರಲ್ಲಿ ಸೋತ ನಂತರ ಪ್ರಧಾನಿಯೊಬ್ಬರು ತಂಡದ ಆಟಗಾರರನ್ನು ಭೇಟಿಯಾಗಿ ಅವರನ್ನು ಪ್ರೇರೇಪಿಸುವುದನ್ನು ನಾನು ಈ ಹಿಂದೆ ನೋಡಿಲ್ಲ” ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಹೇಳಿದ್ದಾರೆ.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ”ನಮ್ಮ ಪ್ರಾರ್ಥನೆಗಳನ್ನು ಪ್ರೋತ್ಸಾಹಿಸಲು ಮತ್ತು ಆಟಗಾರರನ್ನು ಬೆಂಬಲಿಸಲು ಪ್ರಧಾನಿ ಮೋದಿಯವರದ್ದು ದೊಡ್ಡ ನಡೆಯಾಗಿದೆ. ಮುಂದಿನ ವಿಶ್ವಕಪ್‌ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಲು ಇದು ಸಹಾಯ ಮಾಡುತ್ತದೆ” ಎಂದರು.
”ಕ್ರಿಕೆಟ್, ಹಾಕಿ, ಫುಟ್ಬಾಲ್ ಯಾವುದೇ ಕ್ರೀಡೆ ಇರಲಿ ದೇಶದ ಪ್ರಧಾನಿ ಆಟಗಾರರನ್ನು ಭೇಟಿ ಮಾಡಿ ಪ್ರೋತ್ಸಾಹಿಸಿದರೆ ಅದು ಆಟಗಾರರಿಗೆ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸವನ್ನು ನೀಡುತ್ತದೆ” ಎಂದು ಸೆಹವಾಗ್ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಆಟಗಾರನ್ನು ಸಂತೈಸಿದ್ದರು. ವಿಶೇಷವಾಗಿ ಮೊಹಮದ್ ಶಮಿ ಅವರನ್ನು ಎದೆಗಾನಿಸಿಕೊಂಡು ಧೈರ್ಯ ತುಂಬಿ ಇದೆಲ್ಲ ಸಂಭವಿಸುತ್ತದೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.