ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ
Team Udayavani, Mar 9, 2021, 9:55 AM IST
ಬೆಂಗಳೂರು: ಸಿಡಿ ಪ್ರಕರಣ ಬಯಲಾದ ಬಳಿಕ ಮೊದಲ ಬಾರಿಗೆ ಮಾಧ್ಯಮದೆದರು ಬಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಪತ್ರಿಕಾಗೋಷ್ಠಿ ನಡೆಸಿದರು.
ಈ ಸಿಡಿ ಸಂಪೂರ್ಣ ನಕಲಿಯಾಗಿದೆ. ನಾನು ನಿರಪರಾಧಿ. ನನ್ನ ರಾಜಕೀಯ ಏಳಿಗೆ ಸಹಿಸದ 2+3+4 ಇದ್ದಾರೆ. ಅವರು ಯಾವ ತನಿಖೆಗೆ ಆಗ್ರಹಿಸುತ್ತಾರೆ ಅದಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.
ಈ ಸಿಡಿ ನಾಲ್ಕು ತಿಂಗಳ ಹಿಂದೆ ಮಾಡಿರೋದು. ನನ್ನ ಸಹೋದರ ಎರಡು ಬಾರಿ ನಾಗರಾಜ್ ಮೂಲಕ ನನಗೆ ಕೇಳಿದ್ದರು.
ನಮ್ಮ ಹೈ ಕಮಾಂಡ್ 26 ಗಂಟೆ ಮುಂಚೆಯೇ ನನಗೆ ಕರೆ ಮಾಡಿ ಸಿಡಿ ಬಗ್ಗೆ ಮಾಹಿತಿ ನೀಡಿದ್ದರು. ಧೈರ್ಯವಾಗಿರು ಕಾನೂನು ಪ್ರಕಾರ ಹೋರಾಟ ಮಾಡೋನ ಅಂತ ಹೇಳಿದ್ದರು ಎಂದರು.
ಅಂದು ಬೆಳಿಗ್ಗೆ ಸಿಎಂ ರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಈ ರೀತಿ ನಾನು ಮಾಡಿದ್ದರೆ ಚಾಮುಂಡಿ ತಾಯಿ ಭೇಟಿ ಮಾಡುತ್ತಿದ್ದೇನಾ ?ನಾನು ಬಹಳ ದುಖದಲ್ಲಿದ್ದೇನೆ. ದಯವಿಟ್ಟು ನನಗೆ ಸಹಕಾರ ಕೊಡಿ ಎಂದರು.
ಇದೊಂದು ಮಹಾ ದೊಡ್ಡ ಷಡ್ಯಂತ್ರ ಇದೆ. ಅವರ ಹೆಸರು ಗೊತ್ತಿದೆ ಆದರೆ ಹೇಳುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಚಾರ. ಬೆಂಗಳೂರಿನ ಎರಡು ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಶವಂತಪುರ ಮತ್ತು ಹುಳಿಮಾವುನಲ್ಲಿ ಷಡ್ಯಂತ್ರ ನಡೆಸಲಾಗಿದೆ. ಒಂದು ನಾಲ್ಕನೇ ಮಹಡಿ ಮತ್ತು ಒಂದು ಐದನೇ ಮಹಡಿಯಲ್ಲಿ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಉಡುಪಿಯ ಪುತ್ತೂರು ಬಳಿಯ ಮನೆಯೊಂದಕ್ಕೆ ಎಸಿಬಿ ದಾಳಿ: ಪರಿಶೀಲನೆ
ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರನ್ನು ಬಿಡುವುದಿಲ್ಲ. ಏನೇ ಆಗಲಿ ಅವರನ್ನು ಬಿಡುವುದಿಲ್ಲ. ಅವರು ಎಷ್ಟೇ ದೊಡ್ಡ ಪ್ರಭಾವಿ ಇರಲಿ, ಎಷ್ಟೇ ಖರ್ಚಾಗಲಿ ಅವರನ್ನು ಜೈಲಿಗೆ ಹಾಕಿಸದೇ ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ನನಗೆ ರಾಜಕೀಯಕ್ಕಿಂತ ನನಗೆ ನನ್ನ ಕುಟುಂಬದ ಮರ್ಯಾದೆ ಮುಖ್ಯ. ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿರುವ ಎಲ್ಲಾ ಮಾಹಿತಿಗಳಿಗೆ ನಾನು ಬದ್ಧವಾಗಿದ್ದೇನೆ. ಐವತ್ತು ಲಕ್ಷ ನೀಡಿರುವುದಲ್ಲ, ಐದು ಕೋಟಿ ನೀಡಿದ್ದಾರೆ. ಅದಲ್ಲದೆ ಎರಡು ಪ್ಲಾಟ್ ನ್ನು ಯುವತಿಗೆ ನೀಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ರಕ್ಷಣೆಗೆ ಧಾವಿಸಿದವರೂ ಸೇರಿ 9 ಜನರ ದುರ್ಮರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.