HD Devegowda: ರಾಮೇಶ್ವರ ದೇವರ ದರ್ಶನ ಪಡೆದ ಮಾಜಿ ಪ್ರಧಾನಿ
Team Udayavani, Apr 17, 2024, 2:37 PM IST
ಚಿಕ್ಕಮಗಳೂರು: ರಾಮನವಮಿಯಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಬಿದರಹಳ್ಳಿಯ ರಾಮೇಶ್ವರನ ದರ್ಶನ ಪಡೆದರು.
ಚುನಾವಣಾ ಪ್ರಚಾರ ಸಭೆಗೂ ಮುನ್ನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದ ರಾಮೇಶ್ವರ ದೇವರ ದರ್ಶನ ಪಡೆದು ನಂತರ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಪ್ರಚಾರ ಆರಂಭಿಸಿದರು.
ಮಾಜಿ ಪ್ರಧಾನಿಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಮುಖಂಡರೊಂದಿಗೆ ದೇವೇಗೌಡ ಅವರು ಸಭೆ ನಡೆಸಿದ್ದು, ಕೋಟಾ ಶ್ರೀನಿವಾಸ್ ಪೂಜಾರಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಅಡ್ಯಂತಾಯ ಬಯಲು ಮಂದಿರದಲ್ಲಿ ಪ್ರಚಾರ ಸಭೆ ನಡೆಸಲಾಯಿತು.
ಚಿಕ್ಕಮಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಐಕ್ಯತೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನ ಜೀವನದಲ್ಲಿ ಇಷ್ಟೊಂದು ಸಾಮಾರಸ್ಯದ ಹೋರಾಟದ ದಿನ ನೋಡಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಿಸಿದರು.
ಬುಧವಾರ ಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಮತಯಾಚನೆ ಸಭೆಗೂ ಮುನ್ನ ಬಿದರಹಳ್ಳಿಯಲ್ಲಿರುವ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಸುದ್ದಿಗಾರರ ಜತೆ ಮಾತನಾಡಿದರು.
ಮೈಸೂರು ಸಮಾವೇಶ ನನ್ನ ಅನುಭವದಲ್ಲಿ ಬೃಹತ್ ಸಭೆ. ಪ್ರಧಾನಿ ಕರುನಾಡಿಗೆ ಕೊಟ್ಟ ಭರವಸೆ, ರಾಜ್ಯ ಸರ್ಕಾರದ ಭರವಸೆಗೆ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯ ಆಳುವ ಕಾಂಗ್ರೆಸ್ 94 ಶಾಸಕರಿಗೆ ಮಂತ್ರಿ ಸ್ಥಾನ ದರ್ಜೆ ಕೊಟ್ಟಿದ್ದಾರೆ. ರಾಜ್ಯದ ಆರ್ಥಿಕ ಸಮಸ್ಯೆಯ ಬಿಕ್ಕಟ್ಟಿಗೆ ಕೇಂದ್ರದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ದೂರಿದರು.
136 ಸ್ಥಾನದಲ್ಲಿ 94 ಶಾಸಕರಿಗೆ ಮಂತ್ರಿ ದರ್ಜೆ ಸ್ಥಾನ ನೀಡಿ ವಿವಿಧ ಜವಾಬ್ದಾರಿ ನೀಡಿದ್ದಾರೆ. ಸಿದ್ದರಾಮಯ್ಯ ಹಣಕಾಸಿನ ಸಚಿವರಾಗಿದ್ದರು. ನಾನು ಸಿ.ಎಂ. ಎಷ್ಟೇ ಒತ್ತಡ ಬಂದ್ರು ನಮಗೆ ಸಿಕ್ಕಿದ್ದು 113 ಸ್ಥಾನ 94 ಶಾಸಕರಿಗೆ ಹುದ್ದೆ ಕಲ್ಪಿಸುವ ಅಗತ್ಯವಿತ್ತಾ ಹಿಂದೆ ಯಾರು ಮಾಡಿಲ್ಲ ಎಂದರು.
ಮೋದಿ ಬಗ್ಗೆ ಹಗುರವಾಗಿ ಮಾತಾನಾಡುತ್ತಾರೆ. ಸಿ.ಎಂ. ಒಬ್ಬ ಪಿ.ಎಂ.ಬಗ್ಗೆ ಬಳಸುವ ಮಾತು ಎಂತದ್ದು, ನಾನು ಸಿ.ಎಂ. ಆಗಿ ಹಾಗೂ ಪಿ.ಎಂ.ಆಗಿಯೂ ಕೆಲಸ ಮಾಡಿದ್ದೇನೆ, ಆದರೆ ಪದ ಬಳಕೆ ಹಾಗೇ ಮಾಡಿಲ್ಲ. ದೇವೇಗೌಡರು ಕೊನೆ ಘಟ್ಟದಲ್ಲಿ ಇದ್ದಾರೆ. ಕಾರಣ ಯಾರು, ಅದು ಇರಲಿ. ಸೋನಿಯಾ ಗಾಂಧಿ ಠಾಕ್ರೆ ಜತೆ ಹೋದ್ರಲ್ಲ ಸಿದ್ದು ಸಮರ್ಥನೆ ಮಾಡಿಕೊಳ್ತಾರ? ಕಾಂಗ್ರೆಸ್ ದುಸ್ಥಿತಿಗೆ ಬರಲು ಕಾರಣ ಯಾರು? ಯುಪಿಯಲ್ಲಿ ಸೋನಿಯಾ, ರಾಹುಲ್ ನಿಲ್ಲಲು ಆಗ್ಲಿಲ್ಲ. ಇಂಧಿರಾ ಗಾಂಧಿ 16, ರಾಜೀವ್ ಗಾಂಧಿ 17ವರ್ಷ ಆಡಳಿತ ನಡೆಸಿದ್ದಾರೆ. ಇಂದು ಸೋನಿಯಾ ರಾಜಸ್ತಾನಕ್ಕೆ ಹೋಗಿ ರಾಜ್ಯ ಸಭೆ ಮೆಂಬರ್, ರಾಹುಲ್ ಗಾಂಧಿ ಕೇರಳ ಹೋಗಿ ಸಂಸದ. ಕಾಂಗ್ರೆಸ್ ಈ ಸ್ಥಿತಿಗೆ ಬರಲು ಕಾರಣ ಯಾರು ಎಂದು ಪ್ರಶ್ನಿಸಿದರು.
ಸಾಲಮನ್ನಾ ಮಾಡಲು ಮನಮೋಹನ್ ಸಿಂಗ್ ನಬಾರ್ಡ್ ಒಪ್ಪಲಿಲ್ಲ. ತೆರಿಗೆ ಸಂಗ್ರಹಿಸಿ ಸಾಲ ವಾಪಾಸ್ ನೀಡ್ತೀವಿ ಅಂದ್ರು ಒಪ್ಪಲಿಲ್ಲ. ಇಂದು ಆಳುವ ಮಹಾನುಭಾವರು ಬಿಡಿ, ಕಾರ್ಪೋರೇಷನ್ ಎಲ್ಲಾ ಅವರ ಕೈನಲ್ಲೇ ಇದೆ ಎಂದು ಪರೋಕ್ಷವಾಗಿ ಡಿ.ಕೆ.ಶಿ ವಿರುದ್ದ ವಾಗ್ದಾಳಿ ನಡೆಸಿದರು.
ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರು ಬಹಳ ನಿಪುಣರು. ಬಹಳ ಅನುಭವವಿದೆ. ಈ ರಾಜ್ಯ ಹೇಗೆ ದುರ್ಬಳಕೆ ಆಯ್ತು 10ತಿಂಗಳಲ್ಲಿ ಅವರು ನಡೆಸಿದ ಅವ್ಯವಹಾರ, ಅಕ್ರಮ ಎಷ್ಟು, ಜನ ಅವರ ಗ್ಯಾರೆಂಟಿಗಳ ಬಗ್ಗೆ ನಂಬುದ್ರು ಇಂದು ರಾಜ್ಯದ ಅಭಿವೃದ್ಧಿ ಏನಾಗಿದೆ. ಗ್ಯಾರೆಂಟಿ ಜನರಿಗೆ ತಲುಪಿದ್ಯೋ ಇಲ್ವೋ ಅಂತ ಚೆಕ್ ಮಾಡಕ್ಕೆ ಮತ್ತೋರ್ವ ಚೇರಮನ್ ಗ್ಯಾರೆಂಟಿ ಮೇಲೆ ಮತ್ತೊಂದು ಗ್ಯಾರೆಂಟಿ ಇದು ಎಂತಹ ಅದ್ಬುತವಾದ ಆಡಳಿತ ಎಂದು ಲೇವಡಿ ಮಾಡಿದರು.
ಜನ 136 ಸ್ಥಾನ ನೀಡಿದ್ದಾರೆ. ಸಿದ್ದರಾಮಯ್ಯ ಹಣಕಾಸು ಸಚಿವ ಆಗಿದ್ದಾಗ 113 ಸ್ಥಾನ. ನಾನು ಒಬ್ಬರಿಗೂ ಒಂದು ಸ್ಥಾನ ನೀಡಲಿಲ್ಲ. ಯಾರ ಮೆಚ್ಚಿಸಲು ಮಾಡಿದ್ದೀರಾ ಓಡಾಡಲು ಕಾರು, ಪೆಟ್ರೋಲ್ ಕೊಟ್ಟೀದ್ದೀರಾ, ಕ್ಷೇತ್ರ ಜನರಿಗೆ ಹಣ ನೀಡಿದ್ದೀರಾ ಎಂದ ಅವರು ಮೈಸೂರಿನಲ್ಲಿ ಒಡೆಯರನ್ನು ಸೋಲಿಸಲು ಸಾಧ್ಯವಾ? ಒಡೆಯರ್ ಅಜ್ಜ ಮಾಡಿದ ಕೆಲಸವನ್ನ ಜನ ಮರೆತಿಲ್ಲ ಮೈಸೂರಿನ ಜನತೆ ಆನಂದವಾಗಿ ಇದ್ದಾರೆ. ಗೆಲ್ಲಿಸುತ್ತಾರೆ ಎಂದರು.
ಕೈ ಬಲಪಡಿಸಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಬಲಪಡಿಸಬೇಕೆ? 9 ವರ್ಷದ ಹುಡುಗಿಯನ್ನು ತಗೆಸುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕಾ? ಸುಪ್ರೀಂ ಕೋರ್ಟ ನಲ್ಲಿ ಡಿಕೆಶಿಗೆ ಮುಖಭಂಗವಾಗುತ್ತದೆ. ಅಮೆರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿದ್ದರು. ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ ಅವರು ಒಂದು ಐಟಿ ಸ್ಥಾಪನೆ ಮಾಡಿದರು.ನನ್ನ ಮುಂದೆ ದಾಖಲೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.