ಪುತ್ತೂರಿನ ಮುತ್ತಪ್ಪ ರೈ ಭೂಗತಲೋಕದ ಡಾನ್ ಆಗುವ ಮುನ್ನ ಬ್ಯಾಂಕ್ ಉದ್ಯೋಗಿ!
ರಿಯಲ್ ಎಸ್ಟೇಟ್ ನ ಸುಬ್ಬಾರಾಜು ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ರೈ ವಿರುದ್ಧ ವಾರಂಟ್ ಜಾರಿಗೊಳಿಸಿದ್ದರು.
Team Udayavani, May 15, 2020, 8:17 AM IST
ಮಣಿಪಾಲ:ಭೂಗತ ಲೋಕದ ಮಾಜಿ ಡಾನ್, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್ ಮುತ್ತಪ್ಪ ರೈ(68ವರ್ಷ) ಶುಕ್ರವಾರ ನಸುಕಿನ ವೇಳೆ ಸಾವನ್ನಪ್ಪಿದ್ದಾರೆ. ಪುತ್ತೂರಿನ ನೆಟ್ಟಲಾ ಮುತ್ತಪ್ಪ ರೈ ಇವರ ಪೂರ್ಣ ಹೆಸರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪುತ್ತೂರಿನ ಕಯ್ಯೂರು ಗ್ರಾಮದ ನೆಟ್ಟಲಾ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರ ಮುತ್ತಪ್ಪ ರೈ. ಇವರ ಪತ್ನಿ ರೇಖಾ 2013ರಲ್ಲಿ ನಿಧನರಾಗಿದ್ದರು. ರೈಗೆ ಇಬ್ಬರು ಗಂಡು ಮಕ್ಕಳು ರಾಖಿ ಮತ್ತು ರಿಕ್ಕಿ. ರೈ ಹಿರಿಯ ಪುತ್ರ ಕೆನಡಾದಲ್ಲಿ ವಾಸ್ತವ್ಯ ಹೂಡಿದ್ದು, ಕೋವಿಡ್ ಲಾಕ್ ಡೌನ್ ನಿಂದಾಗಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ. 2ನೇ ಪುತ್ರ ರಿಕ್ಕಿ ತಂದೆ ಜತೆ ಇದ್ದಾರೆ.
ವಿಜಯ ಬ್ಯಾಂಕ್ ಉದ್ಯೋಗಿ ರೈ…ಭೂಗತ ಲೋಕಕ್ಕೆ ಎಂಟ್ರಿ
ಬಿಕಾಂ ಪದವೀಧರ ಮುತ್ತಪ್ಪ ರೈ ಆರಂಭದಲ್ಲಿ ವಿಜಯ ಬ್ಯಾಂಕ್ ಉದ್ಯೋಗಿ. ನಂತರ ಭೂಗತಲೋಕಕ್ಕೆ ಕಾಲಿಟ್ಟಿದ್ದ ರೈ 1970-80ರ ದಶಕದಲ್ಲಿ ಭೂಗತ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು, ರೈ ಹಾಗೂ ಸಹಚರರು ಅಂದಿನ ಕುಖ್ಯಾತ ಡಾನ್ ಜಯರಾಜ್ ಹತ್ಯೆ ಪ್ರಕರಣದಲ್ಲಿ ಭಾಗಿ. ಬಳಿಕ ಮುತ್ತಪ್ಪ ರೈ ಹತ್ಯೆಗೆ ಸಂಚು ನಡೆಯುತ್ತಿತ್ತು ಎಂಬ ಸುದ್ದಿಯಿಂದ ಭಾರತ ಬಿಟ್ಟು ದುಬೈಗೆ ರೈ ಶಿಫ್ಟ್ ಆಗಿದ್ದರು.
ದುಬೈನಲ್ಲೇ ಕುಳಿತು ಭೂಗತ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೈಯನ್ನು ರಿಯಲ್ ಎಸ್ಟೇಟ್ ನ ಸುಬ್ಬಾರಾಜು ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ರೈ ವಿರುದ್ಧ ವಾರಂಟ್ ಜಾರಿಗೊಳಿಸಿದ್ದರು. ಒಟ್ಟು ರೈ ವಿರುದ್ಧ ಎಂಟು ಪ್ರಕರಣಗಳಿದ್ದವು. ಕೊನೆಗೆ 2002ರಲ್ಲಿ ಮುತ್ತಪ್ಪ ರೈಯನ್ನು ದುಬೈ ಪೊಲೀಸರು ಯುಎಇನಿಂದ ಭಾರತಕ್ಕೆ ಗಡಿಪಾರು ಮಾಡಿದ್ದರು.
ಅಂದು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ಎಚ್ ಟಿ ಸಾಂಗ್ಲಿಯಾನಾ ರೈಯನ್ನು ದುಬೈನಲ್ಲಿ ಬಂಧಿಸಿ ಭಾರತಕ್ಕೆ ಕರೆ ತಂದಿದ್ದರು. ಮುತ್ತಪ್ಪ ರೈ ಮತ್ತು ರವಿ ಪೂಜಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಸಹಚರರಾಗಿದ್ದರು.
ಈ ವೇಳೆ ಮುತ್ತಪ್ಪ ರೈಯನ್ನು ಸಿಬಿಐ, ಭಾರತದ ರಾ (ರಿಸರ್ಚ್ ಆ್ಯಂಡ್ ಅನಾಲಿಸೀಸ್ ವಿಂಗ್) ಮತ್ತು ಇಂಟೆಲಿಜೆನ್ಸ್ ಬ್ಯೂರೋ ವಿಚಾರಣೆ ನಡೆಸಿತ್ತು. ಆದರೆ ರೈ ವಿರುದ್ಧದ ವಸೂಲಿ ರಾಕೆಟ್, ಹತ್ಯೆ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಕೋರ್ಟ್ ರೈಯನ್ನು ಖುಲಾಸೆಗೊಳಿಸಿತ್ತು. ನಂತರ ಜಯ
ಕರ್ನಾಟಕ ಸಂಘಟನೆಯನ್ನು ಸ್ಥಾಪಿಸಿದ್ದ ಮುತ್ತಪ್ಪ ರೈ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.