ಫೇಸ್‌ಬುಕ್ ಯುವತಿಯ ಮಾತಿನ ಮೋಡಿಗೆ ಮರುಳಾದ ಯುವಕ: 1.8 ಲಕ್ಷ ರೂ ಕಳೆದುಕೊಂಡ
Team Udayavani, Sep 2, 2022, 1:25 PM IST
ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಮಾತಿನ ಮೋಡಿಗೆ ಮರುಳಾದ ಯುವಕನೊಬ್ಬ ಆಕೆಯ ಪ್ರೀತಿಯ ಬಲೆಗೆ ಸಿಲುಕಿ ಇದೀಗ 1.8 ಲಕ್ಷ ರೂ. ಕಳೆದುಕೊಂಡಿದ್ದು, ಇದೀಗ ಪೇಚಿಗೆ ಸಿಲುಕಿ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾನೆ.
ಜರಗನಹಳ್ಳಿಯ ನಿವಾಸಿ ಪವನ್ ಕುಮಾರ್ (34) ವಂಚನೆ ಗೊಳಗಾದ ಯುವಕ. ವಿದೇಶಿ ಮಹಿಳೆ ಕೇಟೀ ಮದೀನಾ ಎಂಬಾಕೆ ಖಾಸಗಿ ಕಂಪನಿ ಉದ್ಯೋಗಿ ಪವನ್ ಕುಮಾರ್‌ಗೆ ಆ.16ರಂದು ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಇದನ್ನು ಸ್ವೀಕರಿಸಿದ್ದ ಪವನ್ ಆಕೆಯ ಜತೆಗೆ ಚಾಟ್ ಮಾಡಿದ್ದ. ಇಷ್ಟಕ್ಕೆ ಸುಮ್ಮನಾಗದ ಮದೀನಾ ದೂರುದಾರ ಯುವಕನ ಜತೆಗೆ ಸಲುಗೆಯಿಂದ ಆತ್ಮೀಯವಾಗಿ ಮಾತನಾಡಿದ್ದಳು. ಆಕೆಯ ಮಾತಿನ ಮೋಡಿಗೆ ಮರುಳಾದ ಪವನ್ ತನ್ನ ವೈಯಕ್ತಿಕ ಮಾಹಿತಿಯನ್ನು ಆಕೆಯ ಜತೆ ಹಂಚಿಕೊಂಡಿದ್ದ.
ಇದನ್ನೂ ಓದಿ:ರಾಷ್ಟ್ರೀಯ ಭಾಷೆಯಾಗಿ ಸಂಸ್ಕೃತ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಆ.23 ರಂದು ಪವನ್‌ಗೆ ಕರೆ ಮಾಡಿದ ಮದೀನಾ, ನಾನು ನಿನ್ನನ್ನು ಕಾಣಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ನನ್ನ ದೇಶದ ಕರೆನ್ಸಿಯನ್ನು ಇಲ್ಲಿ ತೆಗೆದುಕೊಳ್ಳುತ್ತಿಲ್ಲ. ದಯವಿಟ್ಟು ಏರ್‌ಫೋರ್ಟ್ ಅಧಿಕಾರಿಗಳ ಬ್ಯಾಂಕ್ ಖಾತೆಗೆ ಹಣ ಹಾಕಿದರೆ, ನಾನು ನಿನ್ನನ್ನು ಭೇಟಿಯಾಗಬಹುದು. ಆಗ ನಿನ್ನ ಹಣವನ್ನು ಹಿಂತಿರುಗಿಸುತ್ತೇನೆ’ ಎಂದು ನಂಬಿಸಿದ್ದಳು. ಆಕೆಯ ಸೂಚನೆಯಂತೆ ಪವನ್ ಆಕೆ ಕೊಟ್ಟ ಬ್ಯಾಂಕ್ ಖಾತೆಗೆ ಹಂತ-ಹಂತವಾಗಿ 1.8 ಲಕ್ಷ ರೂ. ಜಮೆ ಮಾಡಿದ್ದ. ನಂತರ ಮಹಿಳೆಯು ಪವನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇತ್ತ ಪವನ್ ಪರಿಚಿತರ ಬಳಿ ಈ ವಿಚಾರ ಹೇಳಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.