92.7 ಬಿಗ್ FMನಲ್ಲಿ “ಫುಲ್ ಟೈಮ್ ಪಾಸ್” ಹೊಸ ಕಾರ್ಯಕ್ರಮ ಶುರು!
Team Udayavani, Feb 12, 2019, 4:44 AM IST
ಬೆಂಗಳೂರು: ಭಾರತದ ಅತಿದೊಡ್ಡ ರೇಡಿಯೊ ಜಾಲವಾದ ಬಿಗ್ ಎಫ್ಎಂ ಸಂಪೂರ್ಣ ಪರಿಷ್ಕರಣೆ ಮತ್ತು ಧನಾತ್ಮಕ ಬದಲಾವಣೆಯನ್ನು ಕಾರ್ಯಕ್ರಮದಲ್ಲಿ ಅಳವಡಿಸಲು ನಿರ್ಧರಿಸಿದೆ. ಬಿಗ್ ಎಫ್ಎಂನ ಹೊಸ ಬದಲಾವಣೆಯ ಮೂಲಭೂತ ಅಂಶವೆಂದರೆ ‘ಯೋಚನೆ ಯಾಕೆ, ಚೇಂಜ್ ಓಕೆ’. ಇದರ ಭಾಗವಾಗಿ ಎಫ್ ಎಂನಲ್ಲಿ ‘ಫುಲ್ ಟೈಮ್ ಪಾಸ್ ’ ಹೆಸರಿನ ಹೊಸ ಕಾರ್ಯಕ್ರಮ ಪ್ರಾರಂಭಿಸಿದೆ. ಇದರ ಮೂಲಕ ಬೆಂಗಳೂರಿನ ರೇಡಿಯೊ ಉದ್ಯಮದ ನೀಲಿ ಕಣ್ಣಿನ ಹುಡುಗ, ಆರ್.ಜೆ. ಪ್ರದೀಪ್ ಎಫ್ ಎಂಗೆ ಮರಳುತ್ತಿದ್ದಾರೆ. ಸಂಗೀತ ಪ್ರೇಮಿಗಳ ಹೃದಯವನ್ನು ಮುಟ್ಟುವ ಹಾಡುಗಳೊಂದಿಗೆ, ಹಾಸ್ಯಭರಿತ ಸಂಭಾಷಣೆಗಳು ಈ ಕಾರ್ಯಕ್ರಮದಲ್ಲಿರಲಿವೆ. ಹಾಸ್ಯದ ಸಂಗತಿಗಳ ಹಂಚಿಕೆಯೊಂದಿಗೆ ಹಿತವಾದ ಮತ್ತು ಸಂಗೀತದೊಂದಿಗೆ ಆರ್.ಜೆ. ಪ್ರದೀಪ್ ಸಂಜೆ 5 ರಿಂದ 9ರವರೆಗಿನ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.
ರೇಡಿಯೋದಿಂದಲೇ ತನ್ನ ವೃತ್ತಿ ಜೀವನ ಆರಂಭಿಸಿದ್ದ ಕನ್ನಡದ ಪ್ರಸಿದ್ಧ ನಟ ರಮೇಶ್ ಅರವಿಂದ್ ಅವರು ಬಿಗ್ ಎಫ್ ಎಂ ನಲ್ಲಿ ಆರ್.ಜೆ ಆಗಿ ಬೆಳಗಿನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಟಿ ಪಾರುಲ್ ಯಾದವ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು. ನಟ –ನಿರ್ಮಾಪಕರ ತಂಡವು ಬಿಗ್ ಎಫ್ ಎಂ ಸ್ಟುಡಿಯೋಗೆ ಭೇಟಿ ನೀಡಿ ಹೊಸ ಪ್ರಯತ್ನಕ್ಕೆ ಶುಭ ಕೋರಿದ್ದಾರೆ.
ರೇಡಿಯೊಗೆ ಪುನರಾಗಮನದ ಬಗ್ಗೆ ಮಾತನಾಡಿದ ಆರ್ ಜೆ ಪ್ರದೀಪ್, “ನಾನು ಸಂಪೂರ್ಣವಾಗಿ ಭರವಸೆ ಹೊಂದಿದ ಬಿಗ್ ಎಫ್ಎಂಗೆ ಮರಳಲು ನನಗೆ ಬಹಳ ಸಂತೋಷವಿದೆ. “ಫುಲ್ ಟೈಮ್ ಪಾಸ್” ಎಂಬುದು ಆಸಕ್ತಿದಾಯಕ ಪರಿಕಲ್ಪನೆಯಾಗಿದೆ. ಮುದ ನೀಡುವ ಸಂಗೀತದೊಂದಿಗೆ ವಿನೋದದ ಸಂಭಾಷಣೆಗಳು , ಕೇಳುಗರ ಒತ್ತಡ ನಿವಾರಿಸಲಿವೆ ಎಂದರು.
ನಟ ಚಲನಚಿತ್ರ ನಿರ್ಮಾಪಕ ರಮೇಶ್ ಅರವಿಂದ್, “ಬಿಗ್ ಎಫ್ಎಂ ಅದ್ಭುತವಾದ ಮತ್ತು ಶಕ್ತಿಯುತ ವೇದಿಕೆಯಾಗಿದೆ. ನನ್ನ ಹೃದಯದಲ್ಲಿ ಬಿಗ್ ಎಫ್.ಎಂಗೆ ವಿಶೇಷವಾದ ಸ್ಥಾನವಿದೆ. ಸೆಲೆಬ್ರಿಟಿ ಹೋಸ್ಟ್ ಆಗಿ ಇಂದು ಬೆಳಗ್ಗಿನ ಕಾರ್ಯಕ್ರಮದಲ್ಲಿ ನಮ್ಮ ಮುಂಬರುವ ಸಿನಿಮಾ ಬಟರ್ ಫ್ಲೈಯ ಕುರಿತಾದಂತೆ ಕೆಲವು ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಸಂತೋಷವಿದೆ ಎಂದರು.
ಬಿಗ್ ಎಫ್ ಎಂ ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು ದಿನದ 24 ಗಂಟೆಯೂ ಕನ್ನಡದ ಕಾರ್ಯಕ್ರಮಗಳು ಬಿತ್ತರಗೊಳ್ಳಬೇಕು ಎಂಬ ಧ್ಯೇಯದೊಂದಿಗೆ ‘ಪ್ರತಿದಿನ ಕನ್ನಡ ಪ್ರತಿಕ್ಷಣ ಕನ್ನಡ’ ಎಂಬ ಯೋಜನೆ ರೂಪಿಸಿದೆ. ಈ ಮೂಲಕ ಕನ್ನಡದ ಅತ್ಯುತ್ತಮ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ವಿಭಿನ್ನ ಕಾರ್ಯಕ್ರಮಗಳಿಂದ ಚಾನೆಲ್ ಹೊಸ ಸ್ಥಾನಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.