ಕದ್ದು ಮುಚ್ಚಿ ಬಂದ ಮಹಾ ಸಚಿವನಿಗೆ ಗೇಟ್‌ಪಾಸ್!
Team Udayavani, Jan 18, 2020, 3:05 AM IST
ಬೆಳಗಾವಿ: ಕಳ್ಳ ದಾರಿ ಹಿಡಿದು ಮಾರುವೇಷದಲ್ಲಿ ಮಹಾರಾಷ್ಟ್ರದಿಂದ ಸರ್ಕಾರಿ ಬಸ್‌ನಲ್ಲಿ ಬೆಳಗಾವಿ ನಗರದ ಎಂಇಎಸ್ ಹುತಾತ್ಮ ದಿನಾಚರಣೆಗೆ ಶುಕ್ರವಾರ ಬಂದಿದ್ದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ ಯಡ್ರಾವಕರ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಮಹಾರಾಷ್ಟ್ರಕ್ಕೆ ಕಳುಹಿಸಿ ಬಂದಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಬೆಳಗಾವಿಗೆ ಬಸ್ ಮೂಲಕ ಸಚಿವ ಯಡ್ರಾವಕರ ಆಗಮಿಸಿದ್ದರು. ಬಸ್ ನಿಲ್ದಾಣದಿಂದ ನೇರವಾಗಿ ಆಟೋ ಮೂಲಕ ಕಾವೇರಿ ಕೋಲ್ಡಿಂಕ್ಸ್ ಬಳಿಯ ವೃತ್ತದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪೂಜೆ ಸಲ್ಲಿಸಿ ಇನ್ನೇನು ಭಾಷಣ ಮಾಡಬೇಕೆನ್ನುವಷ್ಟರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಸಚಿವರೊಬ್ಬರು ಆಗಮಿಸಬಹುದು ಎನ್ನುವ ಅನು ಮಾನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಎಸಿಪಿ ನಾರಾಯಣ ಭರಮಣಿ ಹಾಗೂ ಇನ್ಸ್ ಪೆಕ್ಟರ್ ಬಿ.ಆರ್. ಗಡ್ಡೇಕರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸಿದ್ದರು.
ಆದರೆ ಸಚಿವ ಯಡ್ರಾವಕರ ಬಸ್ ಮೂಲಕ ಎಲ್ಲರ ಕಣ್ಣು ತಪ್ಪಿಸಿ ಬೆಳಗಾವಿ ಬಂದಿದ್ದರು. ಯಡ್ರಾವಕರ ಅವರನ್ನು ವಶಕ್ಕೆ ಪಡೆದು ಅವರ ಕಾರಿನಲ್ಲಿಯೇ ಕೊಗನೊಳ್ಳಿ ಟೋಲ್‌ನಾಕಾವರೆಗೆ ಬಿಟ್ಟು ಬರಲಾಯಿತು. ಇದನ್ನು ಖಂಡಿಸಿ ಮಹಾರಾಷ್ಟ್ರದ ಅನೇಕ ಕಡೆ ಯಡ್ರಾವಕರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.