Congress ಜಿ.ಸಿ.ಚಂದ್ರಶೇಖರ್, ರಾಯರೆಡ್ಡಿ ರಾಜ್ಯ ಕಾಂಗ್ರೆಸ್ ಚುನಾವಣ ಉಸ್ತುವಾರಿ
Team Udayavani, Mar 18, 2024, 12:43 AM IST
ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಎರಡು ಹಂತದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಿಸಿದ್ದು, ಚುನಾವಣೆ ಹಿನ್ನೆಲೆ ಯಲ್ಲಿ ನಾಯಕರ ಪ್ರವಾಸ, ಪ್ರಚಾರ ಮತ್ತಿತರ ಕಾರ್ಯಕ್ರಮಗಳ ನಿರ್ವ ಹಣೆಗೆ ಸಂಬಂಧಿಸಿದ ರೂಪುರೇಷೆಯನ್ನು ಈ ಉಸ್ತುವಾರಿಗಳು ಸಿದ್ಧಪಡಿಸಲಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತ(ದೇಶದಲ್ಲಿ 2ನೇ ಹಂತ)ದಲ್ಲಿ ಚುನಾವಣೆ ನಡೆಯಲಿರುವ ಬಹುತೇಕ ದಕ್ಷಿಣ ಭಾಗದ ಜಿಲ್ಲೆಗಳಿಗೆ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಹಾಗೂ 2ನೇ ಹಂತ (ದೇಶದಲ್ಲಿ 3ನೇ ಹಂತ)ದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಎರಡೂ ಹಂತಗಳ ಚುನಾವಣೆಗೆ ಸಂಬಂಧಿಸಿದ ಪಕ್ಷದ ಕಾರ್ಯಕ್ರಮಗಳ ನಿರ್ವಹಣೆ ಸಂಪೂರ್ಣ ಜವಾಬ್ದಾರಿ ಈ ಇಬ್ಬರೂ ಉಸ್ತುವಾರಿಗಳದ್ದಾಗಿದೆ.
ಚುನಾವಣ ಪ್ರಚಾರಕ್ಕೆ ಆಯಾ ಜಿಲ್ಲೆಗಳಿಗೆ ಆಗಮಿಸುವ ಪಕ್ಷದ ನಾಯಕರ ಪ್ರವಾಸ ಮತ್ತು ಪ್ರಚಾರ ಕಾರ್ಯಕ್ರಮ ಆಯೋಜನೆ ಮತ್ತಿತರ ಜವಾಬ್ದಾರಿ ಉಸ್ತುವಾರಿಗಳಿಗೆ ವಹಿಸಲಾಗಿದೆ. ಈ ಕಾರ್ಯಕ್ರಮದ ಮಾರ್ಗ ಮತ್ತು ನಕ್ಷೆ ಸಿದ್ಧಪಡಿಸಿ ವಾರದೊಳಗೆ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಯಾವುದಕ್ಕೆ ಯಾರು ಉಸ್ತುವಾರಿ?
ಹಂತ 1- ಜಿ.ಸಿ. ಚಂದ್ರಶೇಖರ್: ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು-ಕೊಡಗು, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ಹಾಸನ, ತುಮಕೂರು.
ಹಂತ 2- ಬಸವರಾಜ ರಾಯರೆಡ್ಡಿ: ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೆಳಗಾವಿ, ಚಿಕ್ಕೋಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಎಟಿಎಂಗೆ ಹಣ ಜಮೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ನಡಿಸಿ 93 ಲಕ್ಷ ರೂ ದರೋಡೆ
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.