Varthur; ಈಜುಗೊಳದಲ್ಲಿ ವಿದ್ಯುತ್ ಶಾಕ್: 10 ವರ್ಷದ ಬಾಲಕಿ ಮೃತ್ಯು
ಅಪಾರ್ಟ್ ಮೆಂಟ್ ನಿವಾಸಿಗಳಿಂದ ಆಕ್ರೋಶ
Team Udayavani, Dec 29, 2023, 6:43 PM IST
ಮಹದೇವಪುರ : ಈಜುಗೊಳದಲ್ಲಿ ವಿದ್ಯುತ್ ಶಾಕ್ ಸಂಭವಿಸಿ ಹತ್ತು ವರ್ಷದ ಬಾಲಕಿಯೋರ್ವಳು ದುರ್ಮರಣ ಹೊಂದಿರುವ ಘಟನೆ ವರ್ತೂರಿನ ಪ್ರೆಸ್ಟೀಜ್ ಅಪಾರ್ಟ್ ಮೆಂಟ್‌ನಲ್ಲಿ (Prestigious Apartment) ಗುರುವಾರ ರಾತ್ರಿ ನಡೆದಿದೆ. ಮಾನ್ಯ ಮೃತ ದುರ್ದೈವಿಯಾಗಿದ್ದು, ಭದ್ರತಾ ಸಿಬಂದಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈ ಹಿಂದೆ ಕೂಡ ಅಪಾರ್ಟ್‌ಮೆಂಟ್ ಆಡಳಿತ ಸಮಿತಿಯಿಂದ ಈ ರೀತಿ ಘಟನೆಗಳು ನಡೆದಿರುವುದಾಗಿ ಆರೋಪಿಸಿರುವ ಅಪಾರ್ಟ್ಮೆಂಟ್ ನಿವಾಸಿಗಳು ಸಮಸ್ಯೆಯನ್ನು ಕೂಡಲೇ ಬಗೆ ಹರಿಸಲು ಆಗ್ರಹಿಸಿದ್ದಾರೆ. ಅಪಾರ್ಟ್‌ಮೆಂಟ್ ಬಿಲ್ಡರ್‌ಗಳು ಕನಿಷ್ಠ ವಿದ್ಯುತ್ ಲೈನ್ ಗಳನ್ನು ಕೂಡಾ ಸರಿ ಹಾಕಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಮಕ್ಕಳು ಆಟವಾಡುವಾಗ ಶಾಕ್ ಹೊಡೆದಿತ್ತು ಎಂದು ಆಡಳಿತ ಮಂಡಳಿಗೆ ದೂರು ನೀಡಲಾಗಿತ್ತು. ಕೆಲದಿನಗಳ ಹಿಂದಷ್ಟೇ ಮಗುವೊಂದು ಆಟವಾಡುತ್ತಾ ಒಂದು ಕಂಬವನ್ನು ಹಿಡಿದು ನಿಂತಾಗ ಅದರಲ್ಲಿ ಶಾಕ್ ಹೊಡೆದಿತ್ತು. ಈ ದೂರು ಕೇಳಿ ಬಂದ ಬಳಿಕವೂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿತ್ತು ಎಂದು ಹೇಳಲಾಗಿದೆ. ವರ್ತೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.