ಸಮಾಧಿಯಿಂದ ಶವ ಮೇಲಕ್ಕೆತ್ತಿ ಚಿನ್ನ ದೋಚಿದರು!!
Team Udayavani, Oct 24, 2017, 11:20 AM IST
ಕಲಬುರಗಿ: ಹಣ ಕಂಡ್ರೆ ಹೆಣ ಬಾಯಿ ಬಿಡುತ್ತೇ ಅನ್ನೋ ಮಾತಿದೆ. ಆದರೆ ಇಲ್ಲಿ ಚಿನ್ನಕ್ಕಾಗಿ ಹೆಣವನ್ನೂ ಬಿಟ್ಟಿಲ್ಲ. ಅಳಂದದ ಖಜೂರಿ ಗ್ರಾಮದಲ್ಲಿ ನಡೆದ ಘಟನೆಯೊಂದರಲ್ಲಿ ಹಣದ ಆಸೆಗೆ ಬಿದ್ದ ಖದೀಮರು ಶವವನ್ನೇ ಮೇಲಕ್ಕೆತ್ತಿ ಚಿನ್ನಾಭರಣವನ್ನು ದೋಚಿದ್ದಾರೆ.
5 ದಿನಗಳ ಹಿಂದೆ ಪ್ರೇಮಾ ಬಾಯಿ ಎನ್ನುವ ವೃದ್ಧೆ ಮೃತಪಟ್ಟಿದ್ದರು. ಅವರನ್ನು 50 ಗ್ರಾಂ ಚಿನ್ನಾಭರಣಗಳ ಸಮೇತ ಗ್ರಾಮಸ್ಥರು ಸಮಾಧಿ ಮಾಡಿದ್ದರು. ಆದರೆ ಸೋಮವಾರ ರಾತ್ರಿ ಸಮಾಧಿಯನ್ನು ಅಗೆದು ಶವದ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಶವವನ್ನು ಹಾಗೆಯೇ ಬಿಟ್ಟು ತೆರಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಅಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಕ್ಕಳಿಲ್ಲದ ಪ್ರೇಮಾ ಬಾಯಿಯ ಚಿನ್ನಾಭರಣಕ್ಕಾಗಿ ಅಂತ್ಯ ಸಂಸ್ಕಾರಕ್ಕೆ ಮುನ್ನ ಸಂಬಂಧಿಕರ ನಡುವೆ ಜಗಳ ನಡೆದಿದ್ದು, ಹೀಗಾಗಿ ಯಾರಿಗೂ ಬೇಡ, ಸಮಾಧಿಯಲ್ಲಿರಲಿ ಎಂದು ಚಿನ್ನಾಭರಣಗಳ ಸಮೇತ ಮಣ್ಣು ಮಾಡಲಾಗಿತ್ತು.
ಈ ಬಗ್ಗೆ ತಿಳಿದವರೇ ಸಮಾಧಿ ಅಗೆದು ಚಿನ್ನಾಭರಣ ದೋಚಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.