![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 8, 2017, 3:36 PM IST
ಬೆಂಗಳೂರು : ಬಿ.ಸಿ.ರೋಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು 4 ವರ್ಷಗಳಲ್ಲಿ 20 ಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಪ್ರಶಾಂತ್ ಪೂಜಾರಿ , ರುದ್ರೇಶ್ ಆಯ್ತು ಈಗ ಶರತ್ ಅವರ ಕೊಲೆ ನಡೆದಿದೆ. ಕೊಲೆ ನಡೆದು 3 ದಿನಗಳಾದರೂ ಆರೋಪಿಗಳ ಸುಳಿವಿಲ್ಲ. ರಾಜ್ಯವನ್ನು ಕೇರಳದಂತೆ ಅರಾಜಕತೆಗೆ ತಳ್ಳಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು.
ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಕಿಡಿ ಕಾರಿ ಆರ್‌ಎಸ್‌ಎಸ್ ಸೇರುವ ವಿದ್ಯಾರ್ಥಿಗಳ ಪಟ್ಟಿ ನೀಡಲು ಕೇಳಿದ್ದಾರೆ .ಇದರಿಂದಲೇ ಸ್ಪಷ್ಟವಾಗುತ್ತದೆ ಎಂದರು.
ಈ ರೀತಿ ಮುಂದುವರಿದರೆ ಸಮಾಜದ ಸ್ವಾಸ್ಥ್ಯಸಂಪೂರ್ಣ ಹಾಳಾಗುತ್ತದೆ.ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯಗೆ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಇಲ್ಲ
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಶರತ್ ಹತ್ಯೆ ಖಂಡಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ‘ಇದು ಅಂತ್ಯಂತ ಖಂಡನೀಯ ಘಟನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ದಕ್ಷಿಣ ಕನ್ನಡಕ್ಕೆ ತೆರಳುವ ಅಗತ್ಯ ಏನಿತ್ತು. ಅಹಿತಕರ ಘಟನೆ ನಡೆದ ಕುರಿತು ಪರಾಮರ್ಶೆ ನಡೆಸಲು ಅಧಿಕಾರಿಗಳ ಸಭೆ ಕರೆಯಬಹುದಿತ್ತಲ್ಲ. ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಯಾವ ಅರ್ಹತೆಯೂ ಇಲ್ಲ’ ಎಂದರು.
‘ಪರಮೇಶ್ವರ್ ಅವರನ್ನು ಗೃಹ ಸಚಿವ ಹುದ್ದೆಯಿಂದ ಹೇಗಾದರು ಓಡಿಸಿದರು ಅವರ ಬಳಿಯೇ ಗೃಹ ಖಾತೆ ಇದೆ ಸಭೆ ಕರೆದು ವಿವರ ಪಡೆಯಬಹುದಿತ್ತಲ್ಲ’ ಎಂದು ಪ್ರಶ್ನಿಸಿದರು.
ಯಾರದ್ದೋ ಮಕ್ಕಳು ಸತ್ತರೆ ಇವರಿಗೇನು
ಶರತ್ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಕೋಮುಗಲಭೆಗಳು ನಡೆಯಲಿ ಎನ್ನುವ ಹಿತಾಸಕ್ತಿ ರಾಜ್ಯ ಸರ್ಕಾರಕ್ಕೆ ಇದೆ ಎಂದು ನನಗನ್ನಿಸುತ್ತಿದೆ ಎಂದರು.
ರಾಷ್ಟ್ರಭಕ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ, ಅವರನ್ನು ಸರ್ಕಾರ ಪತ್ತೆ ಹಚ್ಚಲಿ ಎಂದರು.
You seem to have an Ad Blocker on.
To continue reading, please turn it off or whitelist Udayavani.