ಸರ್ಕಾರ ಈಗಲೂ ಸುಭದ್ರ: ಜೆಡಿಎಸ್ ಶಾಸಕರ ವಿಶ್ವಾಸ
Team Udayavani, Jul 15, 2019, 3:06 AM IST
ದೇವನಹಳ್ಳಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತದೆ. ಬಹುಮತ ಸಾಬೀತು ಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ಸು ಸಾಧಿಸುತ್ತಾರೆಂದು ಜೆಡಿಎಸ್ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಕೋಡಗುರ್ಕಿ ಸಮೀಪದಲ್ಲಿರುವ ಪ್ರಸ್ಟೀಜ್ ಗಾಲ್ಫ್ಶೈರ್ ರೆಸಾರ್ಟ್‌ಗೆ ತೆರಳುವ ವೇಳೆ ಹಲವು ಶಾಸಕರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾರ್ವಜನಿಕರ ಹಣ ಬಳಸುತ್ತಿಲ್ಲ: ರೆಸಾರ್ಟ್‌ನ ಎಲ್ಲ ಖರ್ಚನ್ನು ಸ್ವಂತ ಹಣದಲ್ಲಿ ನಿಭಾಯಸುತ್ತಿದ್ದೇವೆ. ನಮಗೆ ವ್ಯವಸಾಯ, ಉದ್ದಿಮೆ ಸೇರಿ ಸಾಕಷ್ಟು ಆದಾಯವಿದೆ. ಅದರಲ್ಲೇ ಎಲ್ಲ ಖರ್ಚುಗಳನ್ನು ಭರಿಸುತ್ತಿದ್ದೇವೆ. ಈ ಖರ್ಚನ್ನು ಭರಿಸುವ ಸಾಮರ್ಥ್ಯ ನಮಗಿದೆ. ರೆಸಾರ್ಟ್‌ನ ಒಂದು ವಿಲ್ಲಾಗೆ 30 ಸಾವಿರ ರೂ. ಇದ್ದು, 5 ಮಂದಿ ವಾಸ್ತವ್ಯ ಮಾಡಬಹುದು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಣ ಬಳಸುತ್ತಿಲ್ಲ ಎಂದು ಶಾಸಕರು ತಿಳಿಸಿದರು.
ಅತೃಪ್ತರ ಮನವೊಲಿಸುತ್ತೇವೆ – ಸಾ.ರಾ.ಮಹೇಶ್: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ರಾಜ್ಯ ರಾಜಕೀಯ ಹಲವು ತಿರುವುಗಳನ್ನು ಪಡೆಯುತ್ತಿದೆ. ಎರಡೂ ಪಕ್ಷಗಳ ನಾಯಕರು ಅತೃಪ್ತರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಉಸ್ತುವಾರಿ ಮುರಳೀಧರ್ ಮತ್ತು ಈಶ್ವರಪ್ಪ ಜತೆಗಿನ ನನ್ನ ಭೇಟಿ ಆಕಸ್ಮಿಕವಾದುದು. ಇದಕ್ಕೆ ರಾಜಕೀಯ ಲೇಪನ ಬಳಿಯುವುದು ಸರಿಯಲ್ಲ. ಅಲ್ಲದೆ,ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಕೆಲ ಶಾಸಕರು ಇನ್ನೂ ನಾವು ಜನತಾದಳದಲ್ಲಿಯೇ ಇದ್ದೇವೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗುವ ಉದ್ದೇಶದಿಂದಲೇ ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಸೋಮವಾರ ಅಧಿವೇಶನವಿದ್ದು, ಎಲ್ಲರೂ ಹಾಜರಾಗುತ್ತೇವೆ ಎಂದು ಹೇಳಿದರು.
ಸರ್ಕಾರ 5 ವರ್ಷ ಪೂರೈಸುತ್ತದೆ – ಶರವಣ: ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಸರ್ಕಾರ ಸುಭದ್ರವಾಗಿಯೇ ಇದೆ. ಮೈತ್ರಿ ಸರ್ಕಾರ 5 ವರ್ಷ ಪೂರ್ಣಗೊಳಿಸುತ್ತದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತು ಮಾಡಲಿದ್ದಾರೆ. ಎಲ್ಲವೂ ಶುಭ ಸೂಚಕವಾಗಿಯೇ ಇದೆ. ಭಗವಂತನ ಆಶೀರ್ವಾದದಿಂದ ಈ ಸರ್ಕಾರ ರಚನೆ ಆಗಿದೆ. ಸುಧಾಕರ್ ಸೇರಿ ಯಾರ ನಡೆಯ ಬಗ್ಗೆಯೂ ನಾನು ಈಗ ಮಾತನಾಡೋದಿಲ್ಲ. ನಿಮಗೆಲ್ಲ ಶುಭ ಸೂಚನೆ ಸಿಗುತ್ತದೆ ಎಂದು ಹೇಳಿದರು.
ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಸಿಎಂಗಿದೆ – ಅನ್ನದಾನಿ: ಮಳವಳ್ಳಿ ಶಾಸಕ ಅನ್ನದಾನಿ ಮಾತನಾಡಿ, ಆಯಾ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ. ಹಿಂದೆ ಸೋನಿಯಾ ಗಾಂಧಿ, ಗುಲಾಂ ನಬೀ ಆಜಾದ್ ನಿರ್ಧರಿಸಿದಂತೆ ಎಚ್.ಡಿ.ಕುಮಾರಸ್ವಾಮಿ 5 ವರ್ಷಗಳವರೆಗೆ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಎರಡು ಪಕ್ಷಗಳು ಸೇರಿ ಮೈತ್ರಿ ಸರ್ಕಾರ ನಡೆಸುವಾಗ ಭಿನ್ನಮತ ಸರ್ವೇ ಸಾಮಾನ್ಯ. ಎಲ್ಲ ಸಮಸ್ಯೆಯನ್ನೂ ಬಗೆಹರಿಸುವ ಸಾಮರ್ಥ್ಯ ಮುಖ್ಯಮಂತ್ರಿಗಿದೆ. ಭಿನ್ನಮತೀಯರ ಎಲ್ಲ ಬೇಡಿಕೆಗಳನ್ನು ಆಲಿಸಿ, ಹಿರಿಯ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಸ್ವಾರ್ಥಕ್ಕಾಗಿ ಕೆಲವರ ರಾಜೀನಾಮೆ – ಬಾಲಕೃಷ್ಣ: ಶ್ರವಣಬೆಳಗೋಳ ಶಾಸಕ ಬಾಲಕೃಷ್ಣ ಮಾತನಾಡಿ, ಮೋಜು-ಮಸ್ತಿಗಾಗಿ ಶಾಸಕರು ರೆಸಾರ್ಟ್ ವಾಸ್ತವ್ಯ ಮಾಡ್ತಿಲ್ಲ. 14 ತಿಂಗಳು ಯಶಸ್ವಿಯಾಗಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಡಳಿತ ನಡೆಸಿದೆ. 5 ವರ್ಷ ಆಡಳಿತ ನಡೆಸುವುದು ಖಚಿತ. ಕೆಲ ಶಾಸಕರು ಸ್ವಾರ್ಥಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಸೇರಿ ಅತೃಪ್ತರ ಮನವೊಲಿಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.