ಕೆಲ ರೈತರಿಗೆ ಶಾಕ್;ರಾಗ ಬದಲಿಸಿದ ಸರ್ಕಾರ:ಸಾಲ ಮನ್ನಾಕ್ಕೆ14 ಷರತ್ತು!
Team Udayavani, Jun 24, 2017, 4:27 PM IST
ಬೆಂಗಳೂರು : ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಅಧಿಕೃತ ಆದೇಶವನ್ನು ಸಿಎಂ ಸಿದ್ಧರಾಮಯ್ಯ 3 ದಿನಗಳ ಬಳಿಕ ಶನಿವಾರ ಹೊರಡಿಸಿದ್ದು ಇದೇ ವೇಳೆ 14 ಷರತ್ತುಗಳನ್ನು ವಿಧಿಸಿ ಕೆಲ ರೈತರಿಗೆ ಶಾಕ್ ನೀಡಿದ್ದಾರೆ.
ಜೂನ್ 21 ರಂದು ವಿಧಾನಸಭೆಯಲ್ಲಿ ಸಾಲಮನ್ನಾ ಘೋಷಿಸುವ ವೇಳೆ ಯಾವುದೇ ಷರತ್ತು ವಿಧಿಸದೆ ರೈತರಲ್ಲಿ ಖುಷಿ ಮೂಡಿಸಿದ್ದ ಸಿದ್ದರಾಮಯ್ಯ ಇದೀಗ ಷರತ್ತುಗಳನ್ನು ವಿಧಿಸುವ ಮೂಲಕ ಕೆಲ ರೈತರು ಭ್ರಮನಿರಸನಗೊಳ್ಳುವಂತೆ ಮಾಡಿದ್ದಾರೆ.
ಷರತ್ತುಗಳು ಇಲ್ಲಿವೆ
ರೈತರಿಗೆ ಷರತ್ತುಗಳು
1. ಸಂಪೂರ್ಣ ಸಾಲ ಚುಕ್ತಾವಾದರೂ ನಿಮ್ಮ ಸಾಲದ ಮರುಪಾವತಿ ಅವಧಿ ಮುಗಿಯು ವವರೆಗೆ ಹೊಸ ಸಾಲ ಅಸಾಧ್ಯ(ಅಂದರೆ ಕಳೆದ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ಸಾಲ ಪಡೆದಿದ್ದು, ಅದು ಮನ್ನಾ ಆದರೂ, ಈಗಲೇ ಹೊಸ ಸಾಲ ಸಿಕ್ಕಲ್ಲ. ಏನಿದ್ದರೂ ಮುಂದಿನ ಮಾರ್ಚ್ ಅಥವಾ ಎಪ್ರಿಲ್‌ಗೆ ಸಿಗೋದು.)
2. ರೂ. 50 ಸಾವಿರಕ್ಕಿಂತ ಹೆಚ್ಚು ಸಾಲ ಪಡೆದವರು,ಮರು ಪಾವತಿಯ ಅವಧಿಯೊಳಗೆ 50 ಸಾವಿರ ಕ್ಕಿಂತ ಹೆಚ್ಚು ಅಸಲು ಪಾವತಿಸಿರಬೇಕು.(ಅಂದರೆ 2017ರ ಜೂನ್ 20ಕ್ಕೆ ಹೊರಬಾಕಿ ಇರುವ ಸಾಲ ಚಾಲ್ತಿಯಲ್ಲಿದ್ದರೆ ಸಾಲ ಪಡೆದ ರೈತರು 2017ರ ಜೂ. 20 ಅಥವಾ ಸಾಲ ಮರುಪಾವತಿಗೆ ಇರುವ ಅಂತಿಮ ಗಡುವಿನೊಳಗೆ ಈ ಮೊತ್ತ ಪಾವತಿಸಿರಬೇಕು)
3. 20-06-2017ಕ್ಕೆ ಹೊರಬಾಕಿ ಇರುವ ಸಾಲ ಸುಸ್ತಿಯಾಗಿದ್ದಲ್ಲಿ, ಈ ಅವಧಿಗೆ ಬಾಕಿ ಇರುವ ಅಸಲು ಮತ್ತು ಬಡ್ಡಿ ಸೇರಿ ರೂ. 50 ಸಾವಿರವನ್ನು ಈ ವರ್ಷಾಂತ್ಯದೊಳಗೆ ಪಾವತಿಸಬೇಕು.
4. ಯಾವುದೇ ಸದಸ್ಯರು ಒಂದಕ್ಕಿಂತ ಹೆಚ್ಚು ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದರೆ ಒಂದು ಸಂಸ್ಥೆಯ ಸಾಲಕ್ಕೆ ಮಾತ್ರ ಈ ಯೋಜನೆ ಅನ್ವಯ.
5. ಒಂದು ವೇಳೆ ಸಾಲ ಪಡೆದ ರೈತರು ಮೃತರಾಗಿದ್ದಲ್ಲಿ ಅವರ ವಾರಸುದಾರರು ಸಾಲ ಮರುಪಾವತಿಸಿದರೆ ಅವರಿಗೂ ಸಾಲ ಮನ್ನಾ ಸೌಲಭ್ಯ ಅನ್ವಯ.
6. ಸಾಲ ಮನ್ನಾಕ್ಕೆ ಅರ್ಹವಿರುವ 50 ಸಾವಿರ ರೂ. ಅಸಲು ಮತ್ತು ಬಡ್ಡಿಯೊಂದಿಗೆ ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆಯ ಕ್ಲೈಮ್ ಬಿಲ್‌ಗಳನ್ನು ಸಾಲ ಮರುಪಾವತಿಸಲು ನಿಗದಿಪಡಿಸಿದ ತಿಂಗಳಿನ 30 ದಿನಗಳೊಳಗೆ ಸಲ್ಲಿಸಬೇಕು.
ಸಹಕಾರ ಸಂಘಗಳಿಗೆ ಷರತ್ತುಗಳು
1. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳಿಗೆ ಸಂಯೋಜನೆಯಾಗಿರುವ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್‌ಗಳು, ಡಿಸಿಸಿ ಬ್ಯಾಂಕ್‌ಗಳು ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದ ಕ್ಲೈಮ್ ಬಿಲ್‌ಗಳನ್ನು ತಯಾರಿಸಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಬೇಕು.
2. ವಾಣಿಜ್ಯ ಬ್ಯಾಂಕ್‌ಗಳಿಗೆ ಸಂಯೋಜನೆಯಾಗಿರುವ ಅಥವಾ ಸ್ವತಂತ್ರ ಕೃಷಿ ಪತ್ತಿನ ಸಹಕಾರ ಸಂಘಗಳ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದ ಕ್ಲೈಮ್ ಬಿಲ್‌ಗಳನ್ನು ತಯಾರಿಸಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಬೇಕು.
3.ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್‌ಗಳು ಕ್ಲೆ „ಮ್ ಬಿಲ್‌ಗಳನ್ನು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಕಸ್ಕಾರ್ಡ್) ಬ್ಯಾಂಕ್ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಬೇಕು.
4. ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಆಡಳಿತಾತ್ಮಕ ಮಾರ್ಗಸೂಚಿಗಳನ್ನು ಹೊರಡಿಸಿ ಯೋಜನೆ ಪರಿಣಾಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.