![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 23, 2020, 12:03 AM IST
ಬೆಂಗಳೂರು: ಮಳೆ ಮತ್ತು ಪ್ರವಾಹದಿಂದ ಹಾನಿಗೆ ಈಡಾಗಿರುವ ಗ್ರಾಮೀಣ ರಸ್ತೆಗಳನ್ನು “ಪ್ರಧಾನಮಂತ್ರಿ ಗ್ರಾಮ ಸಡಕ್’ ಯೋಜನೆ ಯಡಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಹಿಸಲು ರಾಜ್ಯ ಸರಕಾರ ಮುಂದಾಗಿದೆ.
ಪ್ರಧಾನಮಂತ್ರಿ ಗಾಮ ಸಡಕ್ ಯೋಜನೆಯಡಿ ಕೇಂದ್ರ ಸರಕಾರವು ರಾಜ್ಯಕ್ಕೆ 5,612.50 ಕಿ.ಮೀ.ಗಳಷ್ಟು ಗ್ರಾಮೀಣ ಮುಖ್ಯ ರಸ್ತೆ ಮತ್ತು ಪ್ರಮುಖ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣ ನಡೆಸಲು ಅನುಮತಿ ನೀಡಿದೆ. ಇದರಡಿ ಮಳೆ ಮತ್ತು ಪ್ರವಾಹದಿಂದ ಹಾನಿ ಗೀಡಾಗಿರುವ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರ ಜತೆಗೆ ಮಳೆ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಹೆಚ್ಚು ವರಿಯಾಗಿ ಎರಡೂ ವರೆ ಸಾವಿರ ಕಿ.ಮೀ.ಗಳಷ್ಟು ರಸ್ತೆ ಅಭಿವೃದ್ಧಿಗೆ ಒಪ್ಪಿಗೆ ನೀಡುವಂತೆ ಪ್ರಸ್ತಾವ ಸಲ್ಲಿಸಲು ಚಿಂತಿಸಲಾಗಿದೆ. ಕೇಂದ್ರದ ಯೋಜನೆಯಡಿ ಸೇತುವೆಗಳ ಅಭಿ ವೃದ್ಧಿಯನ್ನೂ ಕೈಗೊಳ್ಳಲು ಅವಕಾಶ ಇದೆ ಎಂದು ಮೂಲಗಳು ತಿಳಿಸಿವೆ.
5,612.50 ಕಿ.ಮೀ.: ರಸ್ತೆ ಅಭಿವೃದ್ಧಿಗೆ ಕೇಂದ್ರ ಅನುಮತಿ ಅನುದಾನ ಹಂಚಿಕೆ
ಶೇ. 60- ಕೇಂದ್ರ ಸರಕಾರ
ಶೇ. 40- ರಾಜ್ಯ ಸರಕಾರ
ಮೊದಲ ಹಂತ ವೆಚ್ಚ
3,221 ಕಿ.ಮೀ. 2,729.66 ಕೋ.ರೂ.
ಹಾಳಾಗಿರುವ ರಸ್ತೆಗಳು
2,509 ಕಿ.ಮೀ. – ರಾಜ್ಯ ಹೆದ್ದಾರಿ
10,775 ಕಿ.ಮೀ. – ಗ್ರಾಮೀಣ ರಸ್ತೆ
898 ಕಿ.ಮೀ. – ನಗರ, ಪಟ್ಟಣ ರಸ್ತೆ
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ 5,612.50 ಕಿ.ಮೀ. ರಸ್ತೆ ಅಭಿವೃದ್ಧಿಗೆ ಒಪ್ಪಿಗೆ ಸಿಕ್ಕಿದೆ. ಮಳೆ ಮತ್ತು ಪ್ರವಾಹದಿಂದ ಗ್ರಾಮೀಣ ಭಾಗದ ಬಹುತೇಕ ರಸ್ತೆ ಗಳು ಹಾಳಾಗಿವೆ. ಹೀಗಾಗಿ ನಿಯಮಾ ನುಸಾರ ಸಾಧ್ಯ ಇರುವ ಕಡೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
– ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವ
You seem to have an Ad Blocker on.
To continue reading, please turn it off or whitelist Udayavani.