Bengaluru “ಅರಮನೆ’ ಅಧ್ಯಾದೇಶಕ್ಕೆ ರಾಜ್ಯಪಾಲರ ಅಸ್ತು


Team Udayavani, Jan 29, 2025, 11:00 PM IST

Bengaluru “ಅರಮನೆ’ ಅಧ್ಯಾದೇಶಕ್ಕೆ ರಾಜ್ಯಪಾಲರ ಅಸ್ತು

ಬೆಂಗಳೂರು: ನಿರೀಕ್ಷೆಯಂತೆ ರಸ್ತೆ ವಿಸ್ತರಣೆಗೆ ಬಳಸಲು ಉದ್ದೇಶಿಸಿರುವ ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಪ್ರತಿಯಾಗಿ ನೀಡಬೇಕಾದ ಭಾರಿ ಮೊತ್ತದ “ಟಿಡಿಆರ್‌’ ಹೊರೆಯಿಂದ ತಪ್ಪಿಸಿಕೊಳ್ಳಲು ಸರಕಾರ ಬುಧವಾರ ಅಧ್ಯಾದೇಶ ಹೊರಡಿಸಿದೆ.

ರಸ್ತೆ ವಿಸ್ತರಣೆಯ ಉದ್ದೇಶಕ್ಕಾಗಿ ಬಳಕೆಯಾಗುವ 15.36 ಎಕರೆ ಭೂಮಿಗೆ ಪರಿಹಾರವಾಗಿ ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) 3,014 ಕೋಟಿ ರೂ. ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಈ ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸುವುದರಿಂದ ಆರ್ಥಿಕವಾಗಿ ಗಂಡಾಂತರ ಸ್ಥಿತಿ ಉದ್ಭವಿಸುವುದರ ಜತೆಗೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಸ್ಥಿತಿಯೂ ಉಂಟಾಗಲಿದೆ ಎಂಬ ಕಾರಣಕ್ಕೆ ಸರಕಾರ ತುರ್ತು ಸಚಿವ ಸಂಪುಟ ಸಭೆ ಕರೆದು ಅಧ್ಯಾದೇಶ ಜಾರಿಗೆ ಈಚೆಗೆ ತೀರ್ಮಾನ ಕೈಗೊಂಡಿತ್ತು. ಈಗ ಈ ಸಂಬಂಧ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಅದರಂತೆ ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ನಷ್ಟ ಪರಿಹಾರದ ಉದ್ದೇಶಕ್ಕಾಗಿ ಭೂಮಿಯ ಮಾರ್ಗಸೂಚಿ ಮೌಲ್ಯವು ಈ ಆಧ್ಯಾದೇಶ ಅನುಸಾರ ಆಗಿರಲಿದೆ. ಅಂದರೆ ಬೆಂಗಳೂರು ಅರಮನೆಯ ಯಾವುದೇ ಭಾಗಕ್ಕಾಗಿ ನಷ್ಟ ಪರಿಹಾರದ ಲೆಕ್ಕಾಚಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ-1996′ ಪ್ರಮಾಣದ ಅನುಸಾರ ಮೌಲ್ಯವಾಗಿರಲಿದೆ.

ನ್ಯಾಯಾಲಯದ ಆದೇಶ ಏನೇ ಇದ್ದರೂ ಈ ಅಧ್ಯಾದೇಶದ ಮೂಲಕ ನಿಗದಿಪಡಿಸಲಾಗಿದ್ದಕ್ಕೆ ಹೊರತಾಗಿ ಕ್ಲೇಮುದಾರರು (ರಾಜ ವಂಶಸ್ಥರು) ಯಾವುದೇ ಇತರೆ ನಷ್ಟ ಪರಿಹಾರದ ಹಕ್ಕನ್ನು ಹೊಂದಿರುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದ್ದು, ಜ. 27ರಿಂದ ಪೂರ್ವಾನ್ವಯ ಆಗುವಂತೆ ಸರಕಾರ ಈ ಆದೇಶ ಹೊರಡಿಸಿದೆ.

ಟಾಪ್ ನ್ಯೂಸ್

Siddaramaiah

ಇ-ಖಾತಾ ಸಮಸ್ಯೆ: ಇಂದು ಸಿಎಂ ವೀಡಿಯೋ ಸಂವಾದ

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

Special Train: ಉಡುಪಿ-ಪ್ರಯಾಗರಾಜ್‌ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ

New-CEC

CEC Appoint: ಜ್ಞಾನೇಶ್‌ ಕುಮಾರ್‌ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

ಇ-ಖಾತಾ ಸಮಸ್ಯೆ: ಇಂದು ಸಿಎಂ ವೀಡಿಯೋ ಸಂವಾದ

Vinay-kulkarni1

Dharawad: ಜಲ ಜೀವನ್ ಮಿಷನ್‌ ಕಳಪೆ ಕಾಮಗಾರಿಗೆ ಗರಂ; ಕೆಟ್ಟ ಯೋಜನೆ ಎಂದ ವಿನಯ್ ಕುಲಕರ್ಣಿ

1-w-w-we

GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ

BR-patil1

ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್‌.ಪಾಟೀಲ್‌ಗೆ ಹೊಸ ಹುದ್ದೆ!

Vinaya-kulakarni

ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Siddaramaiah

ಇ-ಖಾತಾ ಸಮಸ್ಯೆ: ಇಂದು ಸಿಎಂ ವೀಡಿಯೋ ಸಂವಾದ

Gangaarathi

Varanasi: ಹೆಚ್ಚಿದ ಜನರ ಭೇಟಿ: 26ರವರೆಗೆ ವಾರಾಣಸಿ ಗಂಗಾ ಆರತಿ ರದ್ದು

rahul-gandhi

Controversy; ಚೀನೀ ನಿರ್ಮಿತ ಡ್ರೋನ್‌ ಬಳಸಿ ರಾಹುಲ್‌ ಗಾಂಧಿ ವಿವಾದ

1-soudi

Abu Dhabi;ಭಾರತದ ಮಹಿಳೆಗೆ ಗಲ್ಲು ಶಿಕ್ಷೆ?

1-cy

Cyclone; ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: 13 ರಾಜ್ಯಗಳಿಗೆ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.