Government ಬಸ್ ಪ್ರಯಾಣ ದರ ಹೆಚ್ಚಳ: ಸಾರಿಗೆ ಸಚಿವರ ಸುಳಿವು
ನಿಗಮಗಳಿಗೆ 1,100 ಕೋಟಿ ರೂ. "ಶಕ್ತಿ' ಬಾಕಿ
Team Udayavani, Jun 20, 2024, 6:45 AM IST
ಬೆಂಗಳೂರು: ಸಾರಿಗೆ ನಿಗಮಗಳಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರವಾದರೂ ಭರಿಸಿಕೊಡಬೇಕು ಅಥವಾ ಪ್ರಯಾಣ ದರ ಪರಿಷ್ಕರಣೆಗಾದರೂ ಅವಕಾಶ ಮಾಡಿಕೊಡಬೇಕು ಎಂದು ಹೇಳುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಸ್ ಪ್ರಯಾಣ ದರ ಹೆಚ್ಚಳದ ಸ್ಪಷ್ಟ ಸೂಚನೆ ನೀಡಿದರು.
“ಶಕ್ತಿ’ ಯೋಜನೆ ಅಡಿ 1,100 ಕೋಟಿ ರೂ. ಸರ್ಕಾರದಿಂದ ಬಾಕಿ ಬರಬೇಕಿದೆ. ಮತ್ತೂಂದೆಡೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹತ್ತು ಸಾವಿರ ಟ್ರಿಪ್‌ಗ್ಳನ್ನು ಹೆಚ್ಚಿಸಲಾಗಿದೆ. ವೇತನ ಪರಿಷ್ಕರಣೆ ಮಾಡಬೇಕಿದೆ. ಸಾಲದ ಹೊರೆಯೂ ಇದೆ. ಡೀಸೆಲ್ ದರ ಹೆಚ್ಚಳದಿಂದ ಮತ್ತಷ್ಟು ಹೊರೆ ಬಿದ್ದಿದೆ. ಇದೆಲ್ಲವನ್ನೂ ನೀಗಿಸುವುದು ಸಾರಿಗೆ ನಿಗಮಗಳಿಗೆ ಕಷ್ಟವಾಗುತ್ತಿದೆ. ಈ ನಷ್ಟವನ್ನು ಸರ್ಕಾರವಾದರೂ ಭರಿಸಿಕೊಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಎಂಟಿಸಿ ವ್ಯಾಪ್ತಿಯಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆಯಾಗಿ ದಶಕ ಕಳೆದಿದ್ದರೆ, ಉಳಿದ ನಿಗಮಗಳ ವ್ಯಾಪ್ತಿಯಲ್ಲಿ 2020ರಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಅಲ್ಲಿಂದ ಇದುವರೆಗೆ ಡೀಸೆಲ್ ಬೆಲೆ ಸಾಕಷ್ಟು ಬಾರಿ ಏರಿಕೆ ಕಂಡಿದೆ. ಬಿಡಿಭಾಗಗಳ ಬೆಲೆ ಹೆಚ್ಚಳವಾಗಿದೆ. ನೌಕರರ ವೇತನವೂ ಪರಿಷ್ಕರಣೆಯಾಗಿದೆ ಎಂದು ಅಲವತ್ತುಕೊಳ್ಳುವ ಮೂಲಕ ಬಸ್ ಪ್ರಯಾಣ ದರ ಏರಿಕೆ ಸುಳಿವು ನೀಡಿದರು.
ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ ಸಂಬಂಧ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಾದರಿಯಲ್ಲಿ ಸಮಿತಿ ರಚಿಸಿ ಕಾಲ ಕಾಲಕ್ಕೆ ದರ ಪರಿಷ್ಕರಣೆ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಇದೆ. ಈ ರೀತಿ ಕಾಲ-ಕಾಲಕ್ಕೆ ದರ ಪರಿಷ್ಕರಣೆಯಾದರೆ ಹೆಚ್ಚು ಸೂಕ್ತ. ಪ್ರಯಾಣಿಕರ ಮೇಲೂ ಹೊರೆ ಆಗುವುದಿಲ್ಲ. ಸಮಿತಿ ರಚನೆ ಮಾಡುವುದು ಒಳ್ಳೆಯದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.