Govt ತಿಂಗಳ 20ರೊಳಗೆ ಮೊತ್ತ ಜಮೆ: ಫಲಾನುಭವಿಗಳ ಸಮಸ್ಯೆ ಅರಿತು ಸರಕಾರದ ತ್ವರಿತ ನಿರ್ಧಾರ
Team Udayavani, Nov 7, 2023, 6:30 AM IST
ಬೆಂಗಳೂರು ಅನ್ನಭಾಗ್ಯ, ಗೃಹಲಕ್ಷ್ಮಿ, ಇತರ ಸಾಮಾಜಿಕ ಭದ್ರತ ಮಾಸಾಶನ, ಪಿಂಚಣಿಗಳ ಫಲಾನುಭವಿಗಳು ಇನ್ನು ಚಿಂತಿಸ ಬೇಕಾದ ಅಗತ್ಯವಿಲ್ಲ. ಇನ್ನು ಮುಂದೆ ಪ್ರತೀ ತಿಂಗಳ 20ರ ಒಳಗೆ ಅನ್ನಭಾಗ್ಯ, ಗೃಹ ಲಕ್ಷ್ಮಿ ಮೊತ್ತ, ಪ್ರತೀ ತಿಂಗಳ 5ರ ಒಳಗೆ ಇತರ ಸಾಮಾಜಿಕ ಭದ್ರತ ಯೋಜನೆಗಳ ಮೊತ್ತ ವನ್ನು ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡಲು ಸರಕಾರ ಸಿದ್ಧತೆ ನಡೆಸಿದೆ.
ಅನ್ನಭಾಗ್ಯ ಯೋಜನೆಯಡಿ ತಿಂಗಳ ಅಂತ್ಯದೊಳಗೆ ಆಯಾ ತಿಂಗಳ ಮೊತ್ತ ವನ್ನು ಪಾವತಿಸಲಾಗಿತ್ತು.
ಸೆಪ್ಟಂಬರ್ ಬಳಿಕ ಒಂದು ತಿಂಗಳು ವಿಳಂಬವಾಗಿ ಪಾವತಿ ಯಾಗುತ್ತಿರುವುದರಿಂದ ಸಾಕಷ್ಟು ದೂರು ಗಳಿವೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎರಡು ತಿಂಗಳು ತಲುಪಿದ್ದ ಹಣ, ಮೂರನೇ ತಿಂಗಳ ಅನಂತರ ಸ್ಥಗಿತಗೊಂಡಿದೆ.
ಸಾಮಾಜಿಕ ಭದ್ರತ ಮಾಸಾಶನ, ಪಿಂಚಣಿ ಪಾವತಿಯಲ್ಲೂ ವ್ಯತ್ಯಯಗಳಾಗುತ್ತಿದೆ. ಹೀಗಾಗಿ ಫಲಾನುಭವಿ ಆಧಾರಿತ ಯೋಜನೆ ಗಳನ್ನು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯೊಂದಿಗೆ ಸರಕಾರದ ಏಕೀಕೃತ ನೇರ ನಗದು ವರ್ಗಾವಣೆ ಮೂಲಕವೇ ಅನುಷ್ಠಾನ ಗೊಳಿಸಲು ತಿಳಿವಳಿಕೆ ನೀಡಲಾಗಿದೆ.
ವೃದ್ಧಾಪ್ಯ ವೇತನ, ವಿಧವಾ ವೇತನಗಳಂ ತಹ ಪಾವತಿಗಳನ್ನು ಪ್ರತೀ ತಿಂಗಳ 5 ರೊಳಗೆ ಮಾಡಬೇಕಿದ್ದು, ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಪ್ರತಿ ತಿಂಗಳ 1ರಿಂದ 5ರೊಳ ಗಾಗಿ ಪೂರ್ಣಗೊಳಿಸಬೇಕು. ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಪ್ರತೀ ತಿಂಗಳ 20ರೊಳಗಾಗಿ ನಗದು ಪಾವತಿ ಸಲು ಅಗತ್ಯ ಪ್ರಕ್ರಿಯೆಗಳನ್ನು 15ರಿಂದ 20ರೊಳಗೆ ಪೂರ್ಣಗೊಳಿಸುವಂತೆ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ಹೆಚ್ಚಿದ ಒತ್ತಡ
ಪ್ರಸ್ತುತ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮತ್ತು ಖಜಾನೆ-2 ಮೂಲಕ ಅಡೆತಡೆಯಿಲ್ಲದೆ ಹಣ ಪಾವತಿಸಲಾಗುತ್ತಿದೆ. ಆದರೆ ಆಧಾರ್ ಮತ್ತು ಬ್ಯಾಂಕ್ ಖಾತೆಗಳ ಜೋಡಣೆ ಆಗದೆ ಪದೇಪದೆ ಫಲಾನುಭವಿಗಳ ಪಟ್ಟಿಯಲ್ಲಿ ವ್ಯತ್ಯಾಸವಾಗುತ್ತಿದ್ದು, ಪ್ರತೀ ಕಡತವನ್ನು ಪರಿಶೀಲಿಸಲು ಖಜಾನೆ ಇಲಾಖೆ ಮೇಲೆ ಒತ್ತಡ ಹೆಚ್ಚುತ್ತಿದೆ.
ವೇತನ ಪಾವತಿಸುವ ಸಮಯದಲ್ಲಿ ಸರಕಾರದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಬಿಲ್‌ಗಳ ಸಂಖ್ಯೆ ಹೆಚ್ಚಾದಲ್ಲಿ ವೇತನ ಪಾವತಿ ಮತ್ತು ಡಿಬಿಟಿ ಪಾವತಿಯಲ್ಲೂ ವಿಳಂಬವಾಗುವ ಸಂಭವವಿರುತ್ತದೆ. ಅಲ್ಲದೆ ಪ್ರತೀ ಕಡತದ ಪರಿಶೀಲನೆಗೆ ಸಮಯ ಬೇಕಾಗುವುದರಿಂದ ಮಂಜೂರಾತಿ ಪಟ್ಟಿ ಸೃಜನೆಯಲ್ಲೂ ತಡವಾಗಿ ಪಾವತಿಯಲ್ಲಿ ತೊಂದರೆಯಾಗುವ ಸಂಭವವಿರುತ್ತದೆ.
ವೇಳಾಪಟ್ಟಿ
ಫಲಾನುಭವಿಗಳಿಗೆ ತ್ವರಿತವಾಗಿ ಪಾವತಿ ಮಾಡಲು ಮತ್ತು ಡಿಡಿಒ, ಡಿಬಿಟಿ ಸೆಲ್ ಹಾಗೂ ಖಜಾನೆಗಳಿಗೆ ಯಾವುದಾದರೂ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆ ಇದ್ದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲು ಸೂಚಿಸ ಲಾಗಿದೆ. ಪ್ರತಿ ಹಂತದಲ್ಲೂ ಸಮನ್ವಯ ಸುಲಭಗೊಳಿಸಲು ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವ, ಮಾಸಿaಕವಾಗಿ ಪಾವತಿಸುವ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಸಾಮಾಜಿಕ ಭದ್ರತ ಪಿಂಚಣಿ ಯೋಜನೆಗಳಿಗೆ ನಿರ್ದಿಷ್ಟ ವೇಳೆಯೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಿತ ಇಲಾಖಾ ಡಿಡಿಒಗಳಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.