ಗ್ರಾಮ ಚರಿತ್ರೆ ಕೋಶ ಯೋಜನೆಗೆ ನವೆಂಬರ್‌ ಗಡುವು

Team Udayavani, Jul 1, 2022, 6:24 AM IST

TDY-25

ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಗ್ರಾಮೀಣ ಜನವಸತಿಗಳ ಸಮಗ್ರ ಇತಿಹಾಸವನ್ನು ಅನಾವರಣಗೊಳಿಸುವ “ಗ್ರಾಮ ಚರಿತ್ರೆ ಕೋಶ’ ಯೋಜನೆ ಈ ಬಾರಿಯ ರಾಜ್ಯೋತ್ಸವದ ವೇಳೆಗೆ ಪೂರ್ಣಗೊಳ್ಳಲಿದೆ.

ದೇಶದಲ್ಲೇ ಇದೇ ಮೊದಲ ಪ್ರಯತ್ನ ಇದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಾರಿಗೆ ತಂದಿರುವ ಗ್ರಾಮ ಚರಿತ್ರೆ ಕೋಶ ಯೋಜನೆ ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಗ್ರಾಮೀಣ ಜನವಸತಿಗಳ ಪರಂಪರೆ, ಕಲೆ, ಸಾಹಿತ್ಯ, ಧಾರ್ಮಿಕ-ಸಾಮಾಜಿಕ ಆಚರಣೆಗಳು, ಜನಜೀವನ ಪದ್ದತಿ ಸೇರಿದಂತೆ ಸಮಗ್ರ ಇತಿಹಾಸವನ್ನು ದಾಖಲಿಸಲಿದೆ.

ಈಗಾಗಲೇ ರಾಜ್ಯದ 17 ಜಿಲ್ಲೆಗಳ ಸುಮಾರು 30 ಸಾವಿರಕ್ಕೂ ಹೆಚ್ಚು ಗ್ರಾಮಗಳು, ಗ್ರಾಮೀಣ ಜನವಸತಿಗಳ ಸಮಗ್ರ ಇತಿಹಾಸ-ಪರಂಪರೆಯನ್ನು ದಾಖಲಿಸುವ ಸಂಪುಟಗಳ ರಚನೆ ಕಾರ್ಯ ಪೂರ್ಣಗೊಂಡಿದೆ. ಉಳಿದ 14 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಕಾರ್ಯ ಪ್ರಗತಿಯಲ್ಲಿದ್ದು, ಎರಡ್ಮೂರು ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದ್ದು, ನವೆಂಬರ್‌ 1ರ ರಾಜ್ಯೋತ್ಸವದ ದಿನದಂದು ಸಂಪುಟಗಳನ್ನು ಪ್ರಕಟಿಸುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಇಟ್ಟುಕೊಂಡಿದೆ.

ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಕಂದಾಯ ಗ್ರಾಮಗಳಿವೆ. ಇದಲ್ಲದೇ ತಾಂಡಾ, ಹಾಡಿ, ಹಟ್ಟಿ, ಬೇಚರಾಕ್‌ ಮತ್ತಿತರರು ಕಂದಾಯವಲ್ಲದ, ದಾಖಲೆ ಹೊಂದಿಲ್ಲದ ಜನವಸತಿ ಪ್ರದೇಶಗಳನ್ನು ಸೇರಿಸಿಕೊಂಡರೆ ರಾಜ್ಯದಲ್ಲಿ ಒಟ್ಟಾರೆ 55 ಸಾವಿರ ಜನವಸತಿಗಳಿವೆ, ಪ್ರತಿ ತಾಲೂಕಿನಲ್ಲಿ ಸುಮಾರು 180ಕ್ಕೂ ಹೆಚ್ಚು ಜನವಸತಿಗಳು ಬರುತ್ತವೆ. ಅದರಂತೆ, ರಾಜ್ಯದ 31 ಜಿಲ್ಲೆಗಳ, 226 ತಾಲೂಕುಗಳ ಪ್ರತಿಯೊಂದು ಗ್ರಾಮ ಮತ್ತು ಗ್ರಾಮೀಣ ಜನವಸತಿ ಪ್ರದೇಶಗಳ ಸಮಗ್ರ ಇತಿಹಾಸವನ್ನು ಗ್ರಾಮ ಚರಿತ್ರೆ ಕೋಶ ಯೋಜನೆ ಮೂಲಕ ಸಂಪುಟಗಳ ರೂಪದಲ್ಲಿ ತರಲಾಗುತ್ತಿದೆ. ಗ್ರಾಮಗಳ ಇತಿಹಾಸ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಏನಿದು “ಗ್ರಾಮ ಚರಿತ್ರೆ ಕೋಶ’:

ದೇಶದ ಬೇರುಗಳು ಇರುವುದು ಗ್ರಾಮಗಳಲ್ಲಿ. ಗ್ರಾಮಗಳ ಇತಿಹಾಸ ತಿಳಿದುಕೊಂಡರೆ ದೇಶದ ಇತಿಹಾಸವನ್ನು ಅರ್ಥಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ 2006ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ “ಕರ್ನಾಟಕ ಜಾನಪದ ಕೋಶ’ ಯೋಜನೆ ಜಾರಿಗೆ ತಂದಿತ್ತು. ಕೆಲ ಕಾರಣಳಿಂದ ಈ ಯೋಜನೆ ಸ್ಥಗಿತಗೊಂಡಿತು. 2010ರಲ್ಲಿ ಕರ್ನಾಟಕ ಜಾನನಪದ ವಿವಿ ಸ್ಥಾಪನೆಗೊಂಡ ಬಳಿಕ ಡಾ. ಎಂ.ಎಂ. ಕಲಬುರ್ಗಿ, ಗೂರೂರು ಚನ್ನಬಸಪ್ಪ, ಅಂಬಳಿಕೆ ಹಿರಿಯಣ್ಣ ಮತ್ತಿತರರ ಮುತುವರ್ಜಿಯ ಪರಿಣಾಮ ಇದಕ್ಕೆ ಗ್ರಾಮ ಚರಿತ್ರೆ ಕೋಶ ಯೋಜನೆಯ ಸ್ವರೂಪ ಸಿಕ್ಕಿತು. 2013ರಲ್ಲಿ ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಟ್ಟರು. ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಜಾನಪದ ವಿವಿ ಜಂಟಿಯಾಗಿ ಗ್ರಾಮಗಳ ಇತಿಹಾಸದ ಮಾಹಿತಿ ಕಲೆ ಹಾಕುವ ಕೆಲಸ ಆರಂಭಿಸಿದವು. ನಿಧಾನವಾಗಿ ಸಾಗಿದ್ದ ಯೋಜನೆಗೆ 2017ರಲ್ಲಿ ಮರು ಜೀವ ಕೊಡಲಾಯಿತು. ಈಗ 17 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶಗಳು ಸಿದ್ದಗೊಂಡಿದ್ದು, ಇನ್ನೂ 14 ಜಿಲ್ಲೆಗಳ ಕೆಲಸ ಪ್ರಗತಿಯಲ್ಲಿದೆ ಎಂದು ಗ್ರಾಮ ಚರಿತ್ರೆ ಕೋಶ ಯೋಜನೆಯ ಆರಂಭದಿಂದಲೂ ಇರುವ ಇಲಾಖೆ ನಿವೃತ್ತ ನಿರ್ದೇಶಕ ಹಾಗೂ ಹಾಲಿ ಸಲಹೆಗಾರ ಎಂ.ಕೆ. ಕೆಂಪೇಗೌಡ ಹೇಳುತ್ತಾರೆ.

ಗ್ರಾಮ ಚರಿತ್ರೆ ಕೋಶದಲ್ಲಿ ಏನಿರಲಿದೆ? :

ಗ್ರಾಮದ ಹೆಸರಿನ ಹಿನ್ನಲೆ ಸೇರಿದಂತೆ ಇತಿಹಾಸ, ಪರಂಪರೆ, ಭಾಷೆ, ಕಲೆ-ಸಂಸ್ಕೃತಿಮ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು, ಕುಲಕಸಬುಗಳು, ಮಠ-ಮಂದಿರ, ಚರ್ಚ್‌, ಮಸೀದಿ, ಗಡಿ-ಗೋಪುರಗಳು, ನದಿ, ಹಳ್ಳಗಳು, ಸ್ಕಾರಕ, ಶಾಸನಗಳು, ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳು, ಗ್ರಾಮದ ಕೃಷಿ ಜಮೀನು, ಉದ್ಯೋಗ, ಶಿಕ್ಷಣ,ಸ ಸಾಕ್ಷರತೆ, ನಾಗರಿಕ ಸೌಲಭ್ಯಗಳು, ಆರ್ಥಿಕ ವ್ಯವಸ್ಥೆ ಸೇರಿದಂತೆ ಗ್ರಾಮದ ಸಮಗ್ರ ಇತಿಹಾಸ ಈ ಗ್ರಾಮ ಚರಿತ್ರೆ ಕೋಶದಲ್ಲಿರಲಿದೆ. 5 ತಾಲೂಕುಗಳಿಗೆ ಒಂದು ಸಂಪುಟ, 5ಕ್ಕಿಂತ ಹೆಚ್ಚು ತಾಲೂಕುಗಳಿರುವ ಜಿಲ್ಲೆಗಳಿಗೆ ಎರಡ್ಮೂರು ಸಂಪುಟಗಳಲ್ಲಿ ಮಾಹಿತಿ ದಾಖಲಿಸಲಾಗುತ್ತದೆ. ಇದು ಗ್ರಾಮಗಳ ಇತಿಹಾಸ ತಿಳಿಯುವ ಆಕರ ದಾಖಲೆ ಆಗಲಿದೆ. ಸಂಪುಟಗಳ ರೂಪದಲ್ಲದೆ, ಡಿಜಿಟಲ್‌ ಮಾದರಿಯಲ್ಲೂ ಈ ಇತಿಹಾಸ ಸಾರ್ವಜನಿಕರಿಗೆ ಲಭ್ಯವಾಗಲಿದೆ.

” ಕರ್ನಾಟಕ ಗ್ರಾಮ ಚರಿತ್ರೆ ಕೋಶ ಯೋಜನೆ ಕೆಲಸ ಚುರುಕುಗೊಂಡಿದೆ. ಈಗಾಗಲೇ 17 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶಗಳನ್ನು ಪ್ರಕಟಿಸಲಾಗಿದೆ. ಉಳಿದ ಜಿಲ್ಲೆಗಳ ಕಾರ್ಯ ತ್ವರಿತಗೊಳಿಸುವಂತೆ ಸಂಯೋಜಕರು ಮತ್ತು ಸಂಪಾದಕರಿಗೆ ಸೂಚಿಸಲಾಗಿದೆ. ನವೆಂಬರ್‌ ವೇಳೆಗೆ ಕೆಲಸ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.’.ಉಮಾ ಮಹದೇವನ್‌, ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ.

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.