ಪ್ರತಿ ಗಂಟೆಗೊಮ್ಮೆ ಸಿಗುತ್ತೆ ಅಂತರ್ಜಲ ಮಾಹಿತಿ!


Team Udayavani, Oct 8, 2017, 12:19 PM IST

08-11.jpg

ಬೆಂಗಳೂರು: ರಾಜ್ಯದ ತಾಪಮಾನ ಮತ್ತು ಮಳೆಯ ಇಂಚಿಂಚು ಮಾಹಿತಿ ಕ್ಷಣ-ಕ್ಷಣಕ್ಕೂ ಸಿಗುತ್ತಿದೆ. ಇದೇ ಮಾದರಿಯಲ್ಲಿ ಇನ್ಮುಂದೆ ಪ್ರತಿ ಗಂಟೆಗೆ ರಾಜ್ಯದ ಅಂತರ್ಜಲ ಮಟ್ಟದ ಏರಿಳಿತ ಕೂಡ ಲಭ್ಯವಾಗಲಿದೆ.

ರಾಜ್ಯದಲ್ಲಿ ಅಂತರ್ಜಲ ಮಾಪನ ಇನ್ನು ಮುಂದೆ ಆಟೋಮ್ಯಾಟಿಕ್‌ ಆಗಲಿದೆ. ಇದಕ್ಕಾಗಿ ಟೆಲಿಮೆಟ್ರಿಕ್‌
ಪಿಝೋಮೀಟರ್‌ (piezometer)ಗಳನ್ನು ಅಳವಡಿಸಲು ಅಂತರ್ಜಲ ನಿರ್ದೇಶನಾಲಯ ನಿರ್ಧರಿಸಿದ್ದು, ಈ ಸಂಬಂಧ ಟೆಂಡರ್‌ಗೆ ಸಿದ್ಧತೆ ನಡೆದಿದೆ. ಈ ವಿನೂತನ ವ್ಯವಸ್ಥೆಯಿಂದ ಪ್ರತಿ ಗಂಟೆಗೊಮ್ಮೆ ಅಂತರ್ಜಲ ಮಟ್ಟದ ಮಾಹಿತಿ
ನೇರವಾಗಿ ಮೊಬೈಲ್‌ಗೇ ಬರಲಿದೆ. ಆಂಧ್ರಪ್ರದೇಶ ಮಾದರಿಯಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಎಂಟು ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ ಮೂರೂವರೆ ಕೋಟಿ ರೂ. ಅನುದಾನ ದೊರೆಯುತ್ತಿದೆ.

ರಾಜ್ಯದಲ್ಲಿ 1,485 ಅಂತರ್ಜಲ ಮಟ್ಟ ಅಳೆಯುವ “ನಿರೀಕ್ಷಣಾ ಬಾವಿ’ಗಳಿದ್ದು, ಈ ಪೈಕಿ ಮೊದಲ ಹಂತದಲ್ಲಿ ಸುಮಾರು 200 ಅಂತರ್ಜಲ ಮಟ್ಟ ಅಳೆಯುವ ನಿರೀಕ್ಷಣಾ ಬಾವಿಗಳಲ್ಲಿ ಈ ಟೆಲಿಮೆಟ್ರಿಕ್‌ ಪಿಝೋಮೀಟರ್‌ಗಳನ್ನು ಹಾಕಲು ಉದ್ದೇಶಿಸಲಾಗಿದೆ. ಮುಂದಿನ ಹಂತಗಳಲ್ಲಿ ಉಳಿದೆಡೆ ವಿಸ್ತರಿಸಲಾಗುವುದು. ಇದರಿಂದ ಕುಳಿತಲ್ಲಿಯೇ
ರಾಜ್ಯದ ಯಾವ್ಯಾವ ಭಾಗದಲ್ಲಿ ಅಂತರ್ಜಲ ಮಟ್ಟ ಎಷ್ಟೆಷ್ಟಿದೆ ಎಂಬುದನ್ನು ತಿಳಿಯಬಹುದು.

50 ಚದರ ಕಿ.ಮೀ.ಗೊಂದು ಬಾವಿ: ಇದಲ್ಲದೆ, ಸದ್ಯ 100 ಚದರ ಕಿ.ಮೀ.ಗೊಂದು ಅಂತರ್ಜಲ ಮಟ್ಟ ನಿರ್ಧರಿಸುವ ನಿರೀಕ್ಷಣಾ ಬಾವಿಗಳಿವೆ. 50 ಚದರ ಕಿ.ಮೀ.ಗೊಂದು ಬಾವಿ ನಿರ್ಮಿಸಲು ನಿರ್ಧರಿಸಲಾಗಿದೆ. ಇದರಿಂದ ಅಂತರ್ಜಲದ ಬಗ್ಗೆ ಮತ್ತಷ್ಟು ನಿಖರತೆ ಸಿಗಲಿದೆ. ಒಂದೊಂದು ಪ್ರದೇಶಕ್ಕೂ ಮಣ್ಣಿನ ಗುಣಧರ್ಮ ಬೇರೆಯಾಗಿರುತ್ತದೆ. ಇದರಿಂದ ಅಂತರ್ಜಲದಲ್ಲೂ ಸಾಕಷ್ಟು ಏರುಪೇರುಗಳಾಗಿರುತ್ತವೆ. ಆದ್ದರಿಂದ ನಿರೀಕ್ಷಣಾ ಬಾವಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ದುಪ್ಪಟ್ಟಾಗಲಿದೆ. ಆದರೆ, ಈ ಬಾವಿಗಳು ಕೇವಲ ಅಂತರ್ಜಲ ಮಟ್ಟ ಅಳೆಯಲು ಮಾತ್ರ ಸೀಮಿತವಾಗಿರುತ್ತವೆ ಎಂದು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಎಸ್‌.ಬಿ. ಶೆಟ್ಟೆಣ್ಣವರ ಮಾಹಿತಿ ನೀಡಿದರು. 

ಏನು ಉಪಯೋಗ?: ಮಳೆಯ ಜತೆಗೆ ಅಂತರ್ಜಲ ಮಾಹಿತಿಯೂ ಜನರಿಗೆ ಸಿಕ್ಕಾಗ, ಅದರಿಂದ ಕೃಷಿ ಚಟುವಟಿಕೆಗಳಿಗೆ ನೀರು ಮತ್ತು ವಿದ್ಯುತ್‌ ಅನಗತ್ಯವಾಗಿ ಪೋಲಾಗುವುದನ್ನು ತಡೆಯಬಹುದು. ಆ ಮೂಲಕ ಇಳುವರಿ ಕೂಡ ಹೆಚ್ಚಿಸಬಹುದು. ಒಟ್ಟಾರೆ ಪರೋಕ್ಷವಾಗಿ ರೈತರಿಗೂ ಇದು ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಅಂತರ್ಜಲ ಎಷ್ಟು ಆಳದಲ್ಲಿದೆ ಎಂಬ ಸ್ಪಷ್ಟ ಮಾಹಿತಿ ಕೂಡ ರೈತರಿಗೆ ಇಲ್ಲ. ಹಾಗಾಗಿ, ಸಾಧ್ಯವಾದಷ್ಟು ಹೆಚ್ಚು ಸಾಮರ್ಥ್ಯದ ಪಂಪ್‌ಸೆಟ್‌ ಗಳಿಂದ ನೀರೆತ್ತಲಾಗುತ್ತದೆ. 

ಅಂತರ್ಜಲ ಮತ್ತು ಭೂಮಿಯ ಮೇಲೆ ಇರುವ ನೀರಿನ ಪ್ರಮಾಣವನ್ನೂ ಲೆಕ್ಕಹಾಕದೆ ನೀರು ಹರಿಸಲಾಗುತ್ತದೆ. ಇದೆಲ್ಲವೂ ಅವೈಜ್ಞಾನಿಕವಾಗಿದೆ. ಆದರೆ, ನೂತನ ವ್ಯವಸ್ಥೆ ಅಡಿ ಆಯಾ ಪ್ರದೇಶಗಳ ಅಂತರ್ಜಲ ಮತ್ತು ಅದರ ಗುಣಮಟ್ಟ, ಲಕ್ಷಣ, ಪ್ರಮಾಣ ಇದೆಲ್ಲವೂ ನಿಯಮಿತವಾಗಿ ತಿಳಿಯಲಿದೆ. ಅಷ್ಟೇ ಅಲ್ಲ, ಆಸಕ್ತ ರೈತರಿಗೂ ಈ ಮಾಹಿತಿಯನ್ನು ಮೊಬೈಲ್‌ ಸಂದೇಶದ ಮೂಲಕ ಕಳುಹಿಸಲಾಗುವುದು. ಅದನ್ನು ಆಧರಿಸಿ ರೈತರು ಬೆಳೆಗಳಿಗೆ ನೀರು ಹರಿಸಬಹುದು. ಹಾಗೂ ಅಗತ್ಯಕ್ಕೆ ತಕ್ಕಷ್ಟು ಪಂಪ್‌ಸೆಟ್‌ ಬಳಕೆ ಮಾಡಬಹುದು ಎಂದು ತಿಳಿಸುತ್ತಾರೆ. ಇದಲ್ಲದೆ ರೈತರು ಮಾಹಿತಿ ಕೊರತೆಯಿಂದ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆದು ಲಕ್ಷಾಂತರ ರೂ. ನಷ್ಟಕ್ಕೀಡಾಗುವುದು ತಪ್ಪಲಿದೆ ಎಂದು ತಜ್ಞರು ತಿಳಿಸುತ್ತಾರೆ. ಪ್ರಸ್ತುತ ವ್ಯವಸ್ಥೆಯಲ್ಲಿ ತಿಂಗಳಿಗೊಮ್ಮೆ ಸ್ವತಃ ಭೂವಿಜ್ಞಾನಿ ಸ್ಥಳಕ್ಕೆ ತೆರಳಿ,
ಮ್ಯಾನ್ಯುವಲ್‌ ಆಗಿ ಅಂತರ್ಜಲ ಮಟ್ಟ ಅಳತೆ ಮಾಡಿ ವರದಿ ನೀಡುತ್ತಾರೆ. ಆದರೆ, ಇದು ಹಳೆಯ ಪದ್ಧತಿಯಾಗಿದ್ದು, ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮುಂದುವರಿದ ತಂತ್ರಜ್ಞಾನ ಅಳವಡಿಕೆಯಿಂದ ನಿಖರ ಮಾಹಿತಿ ನಿಯಮಿತವಾಗಿ ದೊರೆಯಲಿದೆ ಎಂದರು.

ಮಳೆ ಮಾದರಿಯಲ್ಲೇ ಕಾರ್ಯ: ಸದ್ಯ ರಾಜ್ಯದಲ್ಲಿ ಮಳೆಗೆ ಸಂಬಂಧಿಸಿದಂತೆ ಪ್ರತಿ 15 ನಿಮಿಷಕ್ಕೊಮ್ಮೆ 
ಡ್ಯಾಶ್‌ಬೋರ್ಡ್‌ನಲ್ಲಿ ಹಾಗೂ ಮೊಬೈಲ್‌ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದರ ಮುಂದುವರಿದ ಭಾಗವೇ ಟೆಲಿಮೆಟ್ರಿಕ್‌ ಪಿಝೋಮೀಟರ್‌ ಆಗಿದೆ ಎಂದು ಈ ಯೋಜನೆಗೆ ಕೈಜೋಡಿಸಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ. ವೈರ್‌ ಅಥವಾ ಟೇಪ್‌ ಅನ್ನು ನಿರೀಕ್ಷಣಾ ಬಾವಿಗಳಲ್ಲಿ ಬಿಟ್ಟು, ಅದು ಎಷ್ಟು ಆಳದಲ್ಲಿದೆ ಎಂಬುದನ್ನು ಲೆಕ್ಕಹಾಕಿ ಅಂತರ್ಜಲಮಟ್ಟ ನಿರ್ಧರಿಸಲಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಟೋಮೆಟಿಕ್‌ ಆಗಿ ದಾಖಲಾಗುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಮಳೆ ಮಾಪನದಂತೆಯೇ ಇಲ್ಲಿಯೂ ಅಂತರ್ಜಲ ಮಾಪಕ ಟೆಲಿಮೆಟ್ರಿಕ್‌ ಪಿಝಿಯೋಮಿಟರ್‌ಗಳಿರುತ್ತವೆ. ಅದರ ಮೇಲೆ ಜಿಪಿಆರ್‌ಎಸ್‌ ಆಧಾರಿತ ಸಿಮ್‌ ಮಾದರಿಯ ಚಿಪ್‌ ಇರುತ್ತದೆ. ಅದರಲ್ಲಿ ದತ್ತಾಂಶಗಳು ದಾಖಲಾಗುತ್ತವೆ. ನಂತರ ಅದು ಇಂಟರ್‌ನೆಟ್‌ ಅಥವಾ ಮೊಬೈಲ್‌ ನೆಟ್‌ವರ್ಕ್‌ ಮೂಲಕ ರವಾನೆಯಾಗುತ್ತದೆ ಎಂದು ಮಾಹಿತಿ ನೀಡಿದರು. 

ಒಂದೇ ಸೂರಿನಡಿ ಸಮಗ್ರ ಮಾಹಿತಿ?
ಕೃಷಿ, ಮಳೆ, ಅಂತರ್ಜಲಮಟ್ಟ ಸೇರಿದಂತೆ ಪೂರಕ ಎಲ್ಲ ಮಾಹಿತಿಯೂ ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ರೈತರ ಸಹಾಯವಾಣಿ ಮಾದರಿಯಲ್ಲಿ ಬಿತ್ತನೆ, ಗೊಬ್ಬರ ಪೂರೈಕೆ, ಬೆಳೆಗಳಲ್ಲಿ ಕಂಡುಬರುವ ರೋಗ ನಿಯಂತ್ರಣ ಕುರಿತ ಸಲಹೆ, ಮಳೆ ಮಾಹಿತಿ, ಅಂತರ್ಜಲಮಟ್ಟ ಒಳಗೊಂಡಂತೆ ಸಮಗ್ರ ಮಾಹಿತಿ ರೈತರಿಗೆ ಒದಗಿಸಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ವಿಜಯಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.