ಲಾಕ್‌ಡೌನ್ ಕಾಲ ಅಂತರ್ಜಲ ವೃದ್ಧಿ ! ಕೃಷಿ, ವಾಣಿಜ್ಯ ಚಟುವಟಿಕೆ ಸ್ಥಗಿತ; ನೀರಿನ ಬಳಕೆ ಇಳಿಕೆ
Team Udayavani, Apr 27, 2020, 6:10 AM IST
ಬೆಂಗಳೂರು: ಕೋಲಾರದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ ರೈತ ಶಿವಶಂಕರ ಅವರ 15 ಎಕರೆ ಜಮೀನು. ಅದರಲ್ಲಿ ಈವರೆಗೆ 30ಕ್ಕೂ ಹೆಚ್ಚು ಕೊಳವೆಬಾವಿ ಕೊರೆದಿದ್ದಾರೆ. ಯಾವುದ ರಲ್ಲೂ ಹನಿ ನೀರು ಸಿಕ್ಕಿರಲಿಲ್ಲ. ಆದರೆ ಕಳೆದ ವಾರ ಆ ಪೈಕಿ ಒಂದರಲ್ಲಿ ಏಕಾಏಕಿ ಚಿಲುಮೆಯೊಡೆದಿದೆ.
ಇದೇರೀತಿ ಮಾ. 22ರಂದು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗೃಹಬಳಕೆ ಯೇತರ ಪ್ರದೇಶದ 3 ಕೊಳವೆ ಬಾವಿ ಗಳಲ್ಲಿ 500 ಅಡಿಗೂ ಆಳದಲ್ಲಿ ಇದ್ದ ಅಂತರ್ಜಲ ಮಟ್ಟ ಈಗ 250ರಿಂದ 300 ಅಡಿಗಳಷ್ಟು ಮೇಲಕ್ಕೆ ಬಂದಿದೆ!
ಲಾಕ್‌ಡೌನ್‌ನ ಚಮತ್ಕಾರಗಳಲ್ಲಿ ಇದೂ ಒಂದು! ಒಂದು ತಿಂಗಳಿನಿಂದ ರಾಜ್ಯ ಸಂಪೂರ್ಣ ಸ್ತಬ್ಧವಾಗಿದೆ. ವಾಣಿಜ್ಯ ಮತ್ತು ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡದ್ದರಿಂದ ನೀರಿನ ಬಳಕೆ ಕಡಿಮೆ ಯಾಗಿದೆ. ಹಾಗಾಗಿ ಕೊಳವೆಬಾವಿಗಳ ಮೇಲಿನ ಒತ್ತಡ ಕಡಿಮೆಯಾಗಿದ್ದು, ಬಿರು ಬೇಸಗೆಯಲ್ಲೂ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಕೃಷಿ, ಕೈಗಾರಿಕೆಗಳು, ಹೊಟೇಲ್, ದಾಬಾ ಮತ್ತಿತರ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಇವೆಲ್ಲದರಿಂದ ಟ್ಯಾಂಕರ್ ನೀರಿನ ಬಳಕೆ ಇಲ್ಲವಾಗಿದೆ. ಹೀಗಾಗಿ ಕೊಳವೆಬಾವಿಗಳ ಮೇಲಿನ ಒತ್ತಡ ತಗ್ಗಿ ಅಂತರ್ಜಲ ಮಟ್ಟ ಏರಿದೆ ಎಂದು ಜಲ ವಿಜ್ಞಾನಿ, ಬೆಂಗಳೂರು ಐಐಟಿಯ ನಿವೃತ್ತ ಕುಲಸಚಿವ ಡಾ| ವಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ನೀರಿನ ಬಳಕೆ ಕಡಿಮೆ!
ಬೆಂಗಳೂರಿನಲ್ಲಿ ನೂರಾರು ಹೊಟೇಲ್‌ಗಳು, ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಲಾಡ್ಜ್ಗಳಿವೆ. ಇವೆಲ್ಲವುಗಳಿಗೂ ಟ್ಯಾಂಕರ್ ನೀರೇ ಗತಿ. ಈ ಬಳಕೆಯೂ ಶೇ. 90ರಷ್ಟು ನಿಂತಿದೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.