ನಿಯಮ ವ್ಯಾಪ್ತಿಗೆ ಚೌತಿ, ಮೊಹರಂ: ರಾಜ್ಯ ಸರಕಾರದಿಂದ ಹೊಸ ಮಾರ್ಗ ಸೂಚಿ
Team Udayavani, Aug 13, 2021, 6:20 AM IST
ಬೆಂಗಳೂರು: ರಾಜ್ಯದ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಆಚರಣೆಗೆ ಸರಕಾರ ಕೆಲವು ನಿರ್ಬಂಧ ಹೇರಿದೆ. ಈ ಸಂಬಂಧ ಮಾರ್ಗಸೂಚಿ ಹೊರಡಿಸಿರುವ ಅದು, ಸಾರ್ವಜನಿಕವಾಗಿ ಗೌರಿ-ಗಣೇಶ ಪ್ರತಿಷ್ಠಾಪನೆ, ಆಲಂ/ ಪಂಜಾ ಸ್ಥಾಪಿಸುವು ದನ್ನು ನಿರ್ಬಂಧಿಸುವುದರ ಜತೆಗೆ ಮೆರವಣಿಗೆ ಮತ್ತು ಮನೋರಂಜನ ಕಾರ್ಯ ಕ್ರಮಗಳನ್ನೂ ನಿಷೇಧಿಸಿ ಆದೇಶ ಹೊರಡಿಸಿದೆ.
ಗೌರಿ-ಗಣೇಶ ಹಬ್ಬಕ್ಕೆ ನಿರ್ಬಂಧಗಳು :
- ದೇವಸ್ಥಾನದ ಒಳಗೆ ಮತ್ತು ಮನೆಗಳಲ್ಲಿ ಮಾತ್ರ ಹಬ್ಬ ಆಚರಣೆ.
- ಸಾರ್ವಜನಿಕವಾಗಿ ಚಪ್ಪರ, ಪೆಂಡಾಲ್, ಶಾಮಿಯಾನ ವೇದಿಕೆಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡುವಂತಿಲ್ಲ.
- ಗೌರಿ-ಗಣೇಶ ಮೂರ್ತಿಗಳನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ/ಮನೋರಂಜನೆ ನಿಷೇಧ.
- ಅತೀ ಸಮೀಪದ ಮಾರ್ಗ ಬಳಸಿ ಹೊಂಡ, ಕಲ್ಯಾಣಿ, ಮೊಬೈಲ್ ಟ್ಯಾಂಕ್, ಕೃತಕ ವಿಸರ್ಜನ ಟ್ಯಾಂಕ್ ಬಳಸಿಕೊಳ್ಳಬಹುದು.
- ದೇವಸ್ಥಾನಗಳಲ್ಲಿ ನಿತ್ಯ ಸ್ಯಾನಿಟೈಸೇಶನ್.
- ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್.
- ಉತ್ಸವ ಆಚರಣೆ ಮಾಡುವ ಸಂಘಟನೆಗಳು ಸ್ಥಳೀಯ ಆಡಳಿತ ಸಂಸ್ಥೆಗಳ ನಿಯಮ ಪಾಲನೆ ಮಾಡಬೇಕು.
ಮೊಹರಂಗೆ ನಿರ್ಬಂಧಗಳು :
- ಸಾರ್ವಜನಿಕ ಸ್ಥಳಗಳಲ್ಲಿ ಆಲಂ, ಪಂಚಾ ಸ್ಥಾಪನೆ ಮತ್ತು ತಾಜಿಯಾಕ್ಕೆ ನಿರ್ಬಂಧ.
- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗುರುವಾರದಿಂದ ಆ. 20ರವರೆಗೆ ಮೊಹರಂ ಪ್ರಾರ್ಥನ ಸಭೆ-ಮೆರವಣಿಗೆ ನಿಷೇಧ.
- ಮಸೀದಿಯಲ್ಲಿ ಮಾತ್ರ ಪ್ರಾರ್ಥನೆಗೆ ಅವಕಾಶ. ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಪ್ರಾರ್ಥನೆ ನಡೆಸತಕ್ಕದ್ದು.
- ಮಸೀದಿ ಪ್ರವೇಶಿಸುವಾಗ ಎಲ್ಲರ ದೇಹದ ತಪಾಸಣೆ ಮತ್ತು ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ.
- ಪ್ರಾರ್ಥನೆಯಲ್ಲಿ ಭಾಗವಹಿಸುವವರು ಮನೆಗಳಿಂದಲೇ ಮುಸಲ್ಲಾ (ಜಾಯನಮಾಜ್) ತರಬೇಕು.
- ಪರಸ್ಪರ ಹಸ್ತಲಾಘವ ಮತ್ತು ಆಲಿಂಗನ ಮಾಡುವಂತಿಲ್ಲ.
- 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಒಳಗಿನವರು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.
ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ :
- ರಜೆ ಸಿಕ್ಕಿತೆಂದು ಸದ್ಯಕ್ಕೆ ದೂರದ ಊರಿಗೆ ಪ್ರಯಾಣ ಬೇಡ.
- ಶ್ರಾವಣದ ಹಬ್ಬಗಳನ್ನು ಮನೆಯಲ್ಲಿಯೇ ಆಚರಿಸಿ.
- ಕೊಪ್ಪಳದಲ್ಲಿ 17ರ ವರೆಗೆ ನಿಷೇಧಾಜ್ಞೆ.
- ತುಮಕೂರಿನಲ್ಲಿ ಶ್ರಾವಣ ಮಾಸದ ವಿಶೇಷ ದಿನ ಮತ್ತು ರಜಾದಿನಗಳಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ.
- ವಿವಿಧ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪ್ರವಾಸಿಗರಿಗೆ ಅನುಮತಿ. ಮಾರ್ಗಸೂಚಿ ಪಾಲನೆ ಕಡ್ಡಾಯ.
ಎರಡನೇ ಅಲೆ ತಗ್ಗಿ, ಮೂರನೇ ಅಲೆ ಆರಂಭ ಸಮಯ. ನಿರ್ಲಕ್ಷಿಸಿ ದರೆ ಮತ್ತೂಂದು ದೊಡ್ಡ ಹೊಡೆತ ಬೀಳುತ್ತದೆ. ಲಸಿಕೆ ಪಡೆದಿದ್ದರೆ ಮತ್ತೆ ಕಾಯಿಲೆ ಬರುವುದಿಲ್ಲ ಎಂದಿಲ್ಲ. ಹೆಚ್ಚು ಹಾನಿಯಾಗುವುದಿಲ್ಲ. ಇಂದಿಗೂ ಸಾಕಷ್ಟು ಮಂದಿ ಲಸಿಕೆ ಪಡೆಯದವರಿದ್ದು, ಅವರಿಗೆ ನಮ್ಮ ನಿರ್ಲಕ್ಷ್ಯದಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಪೂರ್ಣ ಪ್ರಮಾಣ ಲಸಿಕೆಯಾಗಿ, ರೂಪಾಂತರ ಹಾವಳಿ ನಿಲ್ಲುವವರೆಗೂ ಮುಂಜಾಗ್ರತೆ ಕ್ರಮ ಕಡ್ಡಾಯ.–ಡಾ| ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.