ಅಧಿಕಾರ ಉಳಿಸಿಕೊಳ್ಳಲು ಲಾಕ್‌ಡೌನ್ ಮುಂದುವರೆಸುತ್ತೀರ..? ಎಚ್.ವಿಶ್ವನಾಥ್ ಗುಡುಗು
Team Udayavani, May 26, 2021, 2:30 PM IST
ಮೈಸೂರು : ನಾಯಕತ್ವ ಬದಲಾವಣೆ ವಿಚಾರವನ್ನು ಗಮನಿಸಿದ್ದೇನೆ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ ಸರ್ಕಾರ ಕೋವಿಡ್ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ಆರೋಗ್ಯ ಖಾತೆಯನ್ನು ಐದು ಭಾಗ ಮಾಡಿದ್ದಾರೆ. ಕಂದಾಯ, ಗೃಹ ಮಂತ್ರಿಗಳು ಬೆಡ್ ಮಂತ್ರಿಗಳು. ಖಾಸಗಿಯವರನ್ನು ಅಳ್ಳಾಡಿಸಲು ನಿಮಗೆ ಆಯ್ತ ? ಆಕ್ಸಿಜನ್ ಮಿನಿಸ್ಟ್ರರ್ ಚನ್ನಾಗಿ ಕೆಲಸ ಮಾಡಿದ್ರ ? ಬೆಡ್, ಆಕ್ಸಿಜನ್ ಕೊಡಲು ಆಗಲಿಲ್ಲ. ಜೂನ್ 7ರ ಬಳಿಕ ಮತ್ತೆ ಲಾಕ್‌ಡೌನ್ ಮುಂದುವರಿಸುವ ಚರ್ಚೆ ನಡೆಯುತ್ತಿದೆ. ಅಧಿಕಾರ ಉಳಿವಿಕೆಗಾಗಿ ಲಾಕ್‌ಡೌನ್ ಜಾರಿ ಮಾಡ್ತೀರ ಎಂದು ಸ್ವಪಕ್ಷದವರ ವಿರುದ್ಧ ಗುಡುಗಿದರು.
ಕೊರೊನಾಕ್ಕಿಂತ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಜನ ಸತ್ತು ಹೋಗುತ್ತಾರೆ. ಮೈಸೂರಿನಲ್ಲಿ ಸುಖಾ ಸುಮ್ಮನೆ ಜಿಲ್ಲಾಧಿಕಾರಿ ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ. ಯಾಕೆ ಆಯಮ್ಮ ಕೆಲಸ ಮಾಡುತ್ತಿಲ್ಲವಾ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರವಹಿಸಿ ಮಾತಾನಾಡಿದರು.
ಇದನ್ನೂ ಓದಿ : ಆಂಬ್ಯುಲೆನ್ಸ್ ಧನ ದಾಹ : ಕಾರಿನಲ್ಲಿ ಮಗಳ ಶವ ಸಾಗಿಸಿದ ತಂದೆ
ಪಾಲಿಕೆ ಅಯುಕ್ತೆ ಹೆಗಲ ಮೇಲೆ ಗನ್ ಇಟ್ಟು ಡಿಸಿಗೆ ಹೊಡಿತಿದ್ದೀರ. ಅಧಿಕಾರಿಗಳ ನಡುವೆ ಸಮಸ್ಯೆ ತಂದಿಡುವ ಕೆಲಸ ಮಾಡಬೇಡಿ. ನಿಮ್ಮ ತೀಟೆಗೆ, ನಿಮ್ಮ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ. ಜಿಲ್ಲಾ ಮಂತ್ರಿಯೂ ಸೇರಿ ನೀವುಗಳು ಏನ್ ಮಾಡಿದ್ದೀರಿ ಹೇಳಿ. ಲಾಕ್‌ಡೌನ್ ಮುಂದುವರಿಸುವುದಾದರೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಕೊಟ್ಟು ಮಾಡಿ ಎಂದರು.
ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡಿದ ವಿಚಾರದ ಕುರಿತು ಮಾತಾನಾಡಿದ ಅವರು, ನಾಳೆ ಸಚಿವ ಸಂಪುಟ ಸಭೆ ಇದೆ. ಸೇಲ್ ಡೀಟ್ ಕನ್‌ಫರ್ಮ್ ಮಾಡಬಹುದು. ಸರ್ಕಾರಕ್ಕೆ ಅನುಮೋದನೆ ಮಾಡಬಾರದು ಅಂತ ಮನವಿ ಮಾಡುತ್ತೇನೆ ಎಂದರು.
ಜಿಂದಾಲ್‌ಗೆ ಭೂಮಿ ನೀಡಿದ್ದನ್ನು ಮೊದಲು ವಿರೋಧ ಮಾಡಿದವನು ನಾನು. ಅದು ಸಾರ್ವಜನಿಕ ಕಂಪನಿ ಅಲ್ಲ. ಜಿಂದಾಲ್‌ಗೆ ಭೂಮಿಯನ್ನು ಗುತ್ತಿಗೆ ಕೊಟ್ಟಿಲ್ಲ, ಮಾರಾಟ ಮಾಡಿದೆ. 3667 ಎಕರೆ ಸರ್ಕಾರಿ ಭೂಮಿಯನ್ನು ಮಾರಾಟ ಮಾಡೋದು ಸರಿಯಲ್ಲ. ಹಿರಿಯ ಸಚಿವರಾದ ಉದಯ್ ಗರುಡಾಚಾರ್, ಬಸವನಗೌಡ ಪಾಟೀಲ್ ಯತ್ನಾಳ್, ಪೂರ್ಣಿಮಾ ಮುಂತಾದ ಶಾಸಕರು ವಿರೋಧಿಸಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.