ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್‌ಗಳೊಂದಿಗೆ ಹಂಪಿ ಎಕ್ಸ್ ಪ್ರೆಸ್ ಓಡಾಟ
Team Udayavani, Jun 24, 2022, 7:43 PM IST
ಹೊಸಪೇಟೆ: ಅತ್ಯಾಧುನಿಕ ಎಲ್.ಹೆಚ್.ಬಿ ಕೋಚ್‌ಗಳ ಜೋಡಣೆಯೊಂದಿಗೆ ಹಂಪಿ ಎಕ್ಸ್ ಪ್ರೆಸ್ ರೈಲು ಗಾಡಿಯು ಹುಬ್ಬಳ್ಳಿ ಹಾಗೂ ಮೈಸೂರು ನಡುವೆ ಸಂಚಾರ ಆರಂಭಿಸಿದೆ.
ಹುಬ್ಬಳ್ಳಿ ಮೈಸೂರು ಹಂಪಿ ಎಕ್ಸ್ ಪ್ರೆಸ್ ಗಾಡಿ ಸಂಖ್ಯೆ (16591/92) ಅತ್ಯಾಧುನಿಕ ಲಿಂಕ್ ಹಾಪ್‌ಮನ್ ಕೋಚ್ ಜೋಡಣೆಯೊಂದಿಗೆ ಸಂಚಾರ ನಡೆಸಲಿರುವ ರೈಲು ಗಾಡಿಗೆ ಹುಬ್ಬಳ್ಳಿಯಲ್ಲಿ ಜೂ. ೨೩ರಂದು ಚಾಲನೆ ನೀಡಲಾಗಿದೆ.
ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ, ಹಂಪಿ ಎಕ್ಸ್ಪ್ರೆಸ್ ರೈಲಿಗೆ ಪ್ರಥಮವಾಗಿ ಈ ಸೌಲಭ್ಯ ಒದಗಿಸುವ ಮೂಲಕ ಪ್ರಯಾಣಿಕರ ಅನುಕೂಲ ಮಾಡಿಕೊಟ್ಟಿದೆ. ದೇಶದ ಮಹಾನಗರಗಳ ನಡುವೆ ಸಂಚಾರ ಮಾಡುವ ರೈಲುಗಳಿಗೆ ಮಾತ್ರ ಜೋಡಿಸಲಾಗುವ ಈ ಕೋಚುಗಳನ್ನು ಇದೀಗ ಹಂಪಿ ಎಕ್ಸ್ ಪ್ರೆಸ್ ರೈಲಿಗೆ ಅಳವಡಿಸಲಾಗಿದೆ. ಪ್ರಸ್ತುತ ವಾರದಲ್ಲಿ 4 ದಿನಗಳು ಮಾತ್ರ ಪ್ರಯಾಣಿಕರಿಗೆ ಎಲ್.ಹೆಚ್.ಬಿ ಕೋಚುಗಳ ಸೇವೆ ಸೌಲಭ್ಯ ಸಿಗಲಿದೆ. ಉಳಿದ 3 ದಿನಗಳಲ್ಲಿ ಸಾಂಪ್ರದಾಯಿಕ ಕೋಚ್‌ಗಳೊಂದಿಗೆ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಎಲ್.ಹೆಚ್.ಬಿ ಕೋಚ್‌ಗಳನ್ನು ಜೋಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗ ತಿಳಿಸಿದೆ.
ಕೋಚ್‌ನಲ್ಲಿ ಏನಿದೆ ?
ಜರ್ಮನ್ ದೇಶದ ತಂತ್ರಜ್ಞಾನದ ಸಹಯೋಗದಲ್ಲಿ ಎಲ್.ಹೆಚ್.ಬಿ ಕೋಚ್‌ಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಗಂಟೆಗೆ 130 ಕಿಮೀ ವೇಗದಲ್ಲಿ ರೈಲು ಸಂಚಾರ ಮಾಡಲಿದೆ. ಸಾಂಪ್ರದಾಯಿಕ ರೈಲಿನ ಕೋಚುಗಳಿಗಿಂತಲೂ ಹೆಚ್ಚು ವಿಶಾಲವಾಗಿರುವ ಕೋಚ್‌ಗಳಲ್ಲಿ ಆರಾಮದಾಯಕ ಆಸನ ವ್ಯವಸ್ಥೆ ಇರುತ್ತದೆ. ಪ್ರತಿ ಕೋಚಿನಲ್ಲಿ ಹೆಚ್ಚುವರಿಯಾಗಿ ೮ ಆಸನಗಳಿದ್ದು ಹಳೆಯ ಹಂಪಿ ಎಕ್ಸ್ಪ್ರಸ್‌ಗಾಡಿಗಿಂತ ೧೫೦ ಹೆಚ್ಚುವರಿ ಸೀಟುಗಳು ಪ್ರಯಾಣಿಕರಿಗೆ ಲಭ್ಯವಾಗುತ್ತವೆ. ಸ್ಟೀಲ್ ನಿರ್ಮಿತ ಕೋಚ್‌ಗಳ ತೂಕ ಹಗುರವಾಗಿರುವುದರಿಂದ ಕಡಿಮೆ ಶಬ್ದ ಹಾಗೂ ಹೆಚ್ಚು ವೇಗವಾಗಿ ಗಾಡಿ ಚಲಿಸುತ್ತದೆ. ಪ್ರಯಾಣಿಕರ ಸುರಕ್ಷತೆಯ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದ್ದು, ಅಫಘಾತಗಳು ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ.
ಅಭಿನಂದನೆ
ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಹಂಪಿ ಎಕ್ಸ್ಪ್ರೆಸ್ ರೈಲಿಗೆ ಪ್ರಪ್ರಥಮವಾಗಿ ಈ ಸೌಲಭ್ಯ ಒದಗಿಸಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ವಿಜಯನಗರ ರೈಲ್ವೆ ಅಭಿವೃಧ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ ಯಮುನೇಶ್ ಹಾಗೂ ಕಾಯದರ್ಶಿ ಕೆ ಮಹೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Hoskote: 16.50 ಲ.ರೂ. ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳ ಸೆರೆ
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.